HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಾ: 2ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳೂರುನಲ್ಲಿ
    ತೈಲ ಬೆಲೆ ಏರಿ ವಿರುದ್ಧ ಹಕ್ಕೊತ್ತಾಯ ಜಾಥಾ-ಹರೀಶ್ ಕುಮಾರ್
  • ಜನಸಾಮಾನ್ಯರ ದೃಷ್ಟಿಯಲ್ಲೂ ಮಹತ್ತರವಾದ ಪ್ರತಿಭಟನೆ-ಮುರಳೀಧರ ರೈ ಮಠಂತಬೆಟ್ಟು

ಉಪ್ಪಿನಂಗಡಿ: ಸುಳ್ಳು ಭರವಸೆಗಳ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ. ನೇತೃತ್ವದ ಬಿಜೆಪಿ. ಸರ್ಕಾರದಿಂದ ಜನಸಾಮಾನ್ಯರ ಬದುಕು ತತ್ತರಿಸಿಹೋಗಿದ್ದು, ಬೆಲೆ ಏರಿಕೆಯಿಂದ ಬದುಕಲು ಬವಣೆ ಪಡುವಂತಹ ಸ್ಥಿತಿ ಬಂದೊದಗಿದೆ. ತೈಲ ಬೆಲೆ ಹಾಗೂ ಅಡುಗೆ ಅನಿಲಗಳ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಾ. ೨ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಜಾಥಾ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.

ಅವರು ಫೆ. ೨೬ರಂದು ಉಪ್ಪಿನಂಗಡಿಯಲ್ಲಿ ಖಾಸಗಿ ಹೊಟೇಲೊಂದರಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಜನಲೋಕಪಾಲ್ ಜಾರಿಗೆ ತರುತ್ತೇವೆ, ಕಪ್ಪು ಹಣ ತಂದು ದೇಶದ ಬಡವರಿಗೆ ಹಂಚುತ್ತೇವೆ, ಬ್ಯಾಂಕ್ ಅಕೌಂಟ್‌ಗೆ ೧೫ ಲಕ್ಷ ರೂಪಾಯಿ ಹಾಕುತ್ತೇವೆ ಎಂಬ ಭರವಸೆ ನೀಡಿ

ಅಧಿಕಾರ ಪಡೆದ ಎನ್‌ಡಿಎ.ಗೆ ದೇಶದ ಅಧಿಕಾರ ಸಿಕ್ಕಿ ಏಳು ವರ್ಷಗಳಾಗುತ್ತಾ ಬರುತ್ತಿದೆ. ಈ ಅವಧಿಯಲ್ಲಿ ದೇಶದ ಜನಸಾಮಾನ್ಯರಿಗೆ ಬದುಕು ನಡೆಸಲು ಕಷ್ಟಕರವಾಗುವ ಸ್ಥಿತಿ ತಂದೊಡ್ಡಿರುವುದು ಬಿಜೆಪಿ ಸಾಧನೆಯಾಗಿದೆ ಎಂದು ಟೀಕಿಸಿದರು.

ಮನಮೋಹನ್ ಸಿಂಗ್‌ರ ಯುಪಿಎ ಸರ್ಕಾರ ಆಡಳಿತದಲ್ಲಿರುವಾಗ ಪೆಟ್ರೋಲ್ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ ೧೪೫ ಡಾಲರ್ ಇರುವಾಗಲೂ ೭೦, ೭೨ ರೂಪಾಯಿ ಆಸುಪಾಸಿನಲ್ಲಿ ಪೆಟ್ರೋಲ್ ಬೆಲೆ ಇತ್ತು. ಆದರೆ ಎನ್‌ಡಿಎ ಆಡಳಿತಾವಧಿಯಲ್ಲಿ ಪೆಟ್ರೋಲ್ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ ೨೫-೩೦ರ ಆಸುಪಾಸಿನಲ್ಲಿದ್ದರೂ ೯೦ರ ಆಸುಪಾಸು ಪೆಟ್ರೋಲ್ ಬೆಲೆ ಬಂದು ನಿಂತಿದೆ. ಕೆಲವು ರಾಜ್ಯಗಳಲ್ಲಿ ಶತಕದ ಅಂಚಿನಲ್ಲಿದೆ. ಇನ್ನೊಂದೆಡೆ ಅಡುಗೆ ಅನಿಲ ಬೆಲೆಯೂ ದಿನೇ ದಿನೇ ಏರಿಕೆಯಾಗತೊಡಗಿದೆ. ತೈಲ ಬೆಲೆ ಏರಿಕೆಯಿಂದಾಗಿ ತರಕಾರಿ, ದಿನಸಿ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇದಕ್ಕೆ ಕೇಂದ್ರದ ಆಡಳಿತ ವೈಫಲ್ಯವೇ ಕಾರಣ. ತೈಲ, ಅಡುಗೆ ಅನಿಲ ಬೆಲೆ ಇಳಿಸಬೇಕು. ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಜಾಥಾ ನಡೆಸಿ, ಜಿಲ್ಲಾಧಿಕಾರಿಯವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ
ಸಲ್ಲಿಸಲಾಗುವುದು ಎಂದರು.

೬೦ ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅದೆಷ್ಟೋ ಬಂದರು, ವಿಮಾನ ನಿಲ್ದಾಣ, ನಾಸಾ, ಏರ್‌ಪೋರ್ಟ್, ಅಣೆಕಟ್ಟುಗಳು ಸೇರಿದಂತೆ ಅನೇಕ ಯೋಜನೆಗಳನ್ನು ಸಾರ್ವಜನಿಕ ರಂಗದಲ್ಲಿ ನಿರ್ಮಿಸಿ ಈ ದೇಶಕ್ಕಾಗಿ ನೀಡಿದೆ. ಆದರೆ ಇದೀಗ ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಲೇ ಅಂದು ದೇಶದ ಜನರಿಗಾಗಿ ಕಾಂಗ್ರೆಸ್ ಮಾಡಿದ ವಿಮಾನ ನಿಲ್ದಾಣ, ರೈಲ್ವೇ, ಎಲ್‌ಐಸಿ, ಬಿಎಸ್ಸೆನ್ನೆಲ್‌ಗಳಂತಹ ಸಂಸ್ಥೆಗಳನ್ನು ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಖಾಸಗಿ ವ್ಯಕ್ತಿಗಳಿಗೆ ಮಾರಲು ಹೊರಟಿದೆ.

ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಮತ ಪಡೆಯುವ ಬಿಜೆಪಿಯ ಸಾಧನೆ ಇಷ್ಟೇ ಎಂದ ಅವರು, ಇನ್ನೊಂದೆಡೆ ಸುಗ್ರಿವಾಜ್ಞೆ ಮೂಲಕ ಕಾನೂನುಗಳನ್ನು ತಂದು ರೈತರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನೋಡುತ್ತಿದೆ. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಮಾನವೀಯತೆ ಇಲ್ಲದಂತೆ ವರ್ತಿಸಿದೆ. ದೇಶದ ಪ್ರಧಾನಿ ಮನ್‌ಕೀ ಬಾತ್ ಕಾರ್ಯಕ್ರಮದಲ್ಲಿ ಒಬ್ಬರೇ ಮಾತನಾಡುತ್ತಿದ್ದಾರೆಯೇ ಹೊರತು ಏಳು ವರ್ಷಗಳ ಅವಧಿಯಲ್ಲಿ ಮಾಧ್ಯಮದ ಮುಂದೆಯಾಗಲೀ, ಜನಸಾಮಾನ್ಯರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವ ಯಾವುದೇ ವೇದಿಕೆಗೆ ಬಂದಿಲ್ಲ. ನೋಟ್ ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿಯಿಂದ ದೇಶದ ಜಿಡಿಪಿಯನ್ನು ಶೂನ್ಯದತ್ತ ದೂಡಿತ್ತು. ಮತ್ತೆ ಕೊರೊನಾ ಬಂದ ನಂತರವಂತೂ ಕೇಂದ್ರ ಸರಕಾರಕ್ಕೆ ನಿದ್ದೆ ಬಂದವರನ್ನು ಹಾಸಿಗೆಗೆ ದೂಡಿದ ಹಾಗೆ ಆಗಿದೆ. ಈಗ ಪ್ರತಿಯೊಂದಕ್ಕೂ ಕೊರೊನಾವನ್ನೇ ಬಳಸಿಕೊಳ್ಳುತ್ತಿದ್ದಾರೆ. ಇವರ ಆಡಳಿತ ವೈಫಲ್ಯದ ನೇರ ಪರಿಣಾಮವನ್ನು ದೇಶದ ಜನಸಾಮಾನ್ಯರು ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಹಕ್ಕೊತ್ತಾಯದ ಮೂಲಕ ನಾವುಗಳು ಕೇಂದ್ರ ಸರ್ಕಾರದ ವಿರುದ್ಧ ಇರುವ ಜನರ ವಿರೋಧವನ್ನು ರಾಷ್ಟ್ರಪತಿಯವರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್‍ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದರು.

ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ ಜನಸಾಮಾನ್ಯರ ದೃಷ್ಟಿಯಲ್ಲೂ ಇದು ಮಹತ್ತರ ಪ್ರತಿಭಟನೆ. ಜನಸಾಮಾನ್ಯರ ಕಷ್ಟವನ್ನು ಕೇಂದ್ರ ಸರಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದೇವದಾಸ ರೈ, ಹಿಂದುಳಿದ ವರ್ಗ ಘಟಕದ ಉಮಾನಾಥ ರೈ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಬರುಲ್ ಸಿದ್ದಿಕ್, ಪೆರ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ, ಮಾಜಿ ಅಧ್ಯಕ್ಷ ಅಬ್ದುಲ್ಲ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭವಾನಿ ನಾಯ್ಕ್, ಸದಸ್ಯ ಸತೀಶ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ದಾಸರಮೂಲೆ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ಯುನಿಕ್, ಮೈಕಲ್ ವೇಗಸ್, ಸಿದ್ದಿಕ್ ಮಠ, ಶರೀಕ್ ಅರಫ ಮತ್ತಿತರರು ಉಪಸ್ಥಿತರಿದ್ದರು. ಕಾರ್ಮಿಕ ವಿಭಾಗದ ನಝೀರ್ ಮಠ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.