HomePage_Banner
HomePage_Banner
HomePage_Banner
HomePage_Banner

ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ-ಮ್ಹಾಲಕ ಸಂಘದ ಬೆಳ್ಳಿಹಬ್ಬ | ಸೌಹಾರ್ದ ಸ್ನೇಹಸಂಗಮ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಪುತ್ತೂರು: ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ೨೫ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ ಅಟೋ ಚಾಲಕ- ಮ್ಹಾಲಕ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಸ್ನೇಹ ಸಂಗಮ ಟ್ರೋಫಿ ಫೆ೨೭,೨೮ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಫೆ.೨೬ರಂದು ಉದ್ಘಾಟನೆ ಸಮಾರಂಭ ನಡೆಯಿತು.

ಕ್ರಿಕೆಟ್ ಪಂದ್ಯಾಕೂಟವನ್ನು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಸ್ನೇಹ ಸಂಗಮದ ೨೫ ವರುಷವನ್ನು ಪೊರೈಸಿಕೊಂಡು ಸಾಮಾಜಿಕ ಕಳಕಳಿಯ ೨೫ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ವಿಶೇಷವಾಗಿ ಸಂಘ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದಕ್ಕೆ ನಗರಸಭೆಯ ಪರವಾಗಿ ಅಭಿನಂದಿಸುತ್ತೇನೆ. ಸದಾ ಜನಸೇವೆ ಮಾಡುವೊದರೊಂದಿಗೆ ಸೌರ್ಹಾದತೆಯ ಪ್ರತೀಕ ಕ್ರಿಕೆಟ್ ಆಯೋಜಿಸಿರುವುದು ಕೂಡ ಶ್ಲಾಘನೀಯ ಎಂದರು.

ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ಕಾನೂನು ಸಲಹೆಗಾರ್ತಿ ಹರಿಣಾಕ್ಷಿ ಜೆ. ಶೆಟ್ಟಿ ರವರು ಮಾತನಾಡಿ, ಸಮಾಜದಲ್ಲಿ ಬಾಂದವ್ಯತೆ ಮತ್ತಷ್ಟು ವೃದ್ಧಿಯಾಗಲು ಕ್ರಿಕೆಟ್ ಮಹತ್ತರ ಪಾತ್ರ ವಹಿಸುತ್ತದೆ. ಜಾತ್ಯಾತೀತವಾಗಿ ನಡೆಸುತ್ತಿರುವ ಈ ಪಂದ್ಯಾಕೂಟ ಸಂಪೂರ್ಣ ಯಶಸ್ವಿಯಾಗಲಿ. ಶಾಂತಿ, ಬಾಂದವ್ಯದಿಂದ ಉತ್ತಮ ಸಮಾಜವನ್ನು ನಿರ್ಮಾಣಗೊಳ್ಳಲಿ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭಾ ಮಾಜಿ ಅಧ್ಯಕ್ಷ, ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಈ ಹಿಂದೆ ಸಂಘದ ಸದಸ್ಯರಿಂದ ಶ್ರಮದಾನ, ಅಂಗನವಾಡಿ- ಶಾಲೆಗಳಿಗೆ ಮೈದಾನಗಳ ನಿರ್ಮಾಣ, ೧೦೦ ಬಡ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ವಿತರಣೆ, ಆಸ್ಪತ್ರೆಯ ಬಿಲ್ ಪಾವತಿ, ರಕ್ತದಾನದಂತಹ ನಾನಾ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇದೆ, ಮುಂದೇಯೂ ಸಕ್ರಿಯವಾಗಿ ಸಂಘದ ಸದಸ್ಯರು ಜನರ ಸೇವೆಗೆ ಸಿದ್ಧರಾಗಿದ್ದಾರೆ ಎಂದ ಅವರು ಸ್ನೇಹವನ್ನು ಜನರೊಂದಿಗೆ ಬಿತ್ತಿ ಸಂಗಮಗೊಳಿಸಿದ್ದಾರೆ ಎಂದು ಅವರು ಹೇಳಿದರು.

ಮಾಜಿ ನಗರಸಭಾ ಸದಸ್ಯ ನವೀನ್ ನಾಕ್ ಬೆದ್ರಾಳ, ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ಅಧ್ಯಕ್ಷ ಅರವಿಂದ ಪೆರಿಗೇರಿ, ಪುತ್ತೂರು ಕರ್ನಾಟಕ ಆಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಪುತ್ತೂರು ಕರ್ನಾಟಕ ರಿಕ್ಷಾ ಸಂಘದ ಅಧ್ಯಕ್ಷ ನಾಸಿರ್ ಇಡಬೆಟ್ಟು, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮೊಟ್ಟೆತ್ತಡ್ಕ. ಉಪಾಧ್ಯಕ್ಷ ರಘುನಾಥ್ ಮಣಿಯ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಬೋಳುವಾರು, ಬಾಂದವ್ಯ ಟ್ರೋಫಿ ಸಂಘಟಕರಾದ ಸ್ಕರೀಯ, ಪ್ರಶಾಂತ್, ಪಾರೊಕ್ ಶೇಖ್, ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ, ಇಚ್ಚಾ ಲಯನ್ಸ್‌ನ ಹಂಝ ಬಪ್ಪಳಿಗೆ, ಪುತ್ತೂರು ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ್ ಕುಲಾಲ್, ವಿಶ್ವಾಸ್ ಶೆಣೈ ಪುತ್ತೂರು, ಉದ್ಯಮಿ ಸಮೂನ್ ಪರ್ಲಡ್ಕ, ಪುತ್ತೂರು ಸಿಟಿ ಫ್ರೆಂಡ್ಸ್ ಸಂಘಟಕ ರಜಾಕ್ ಬಪ್ಪಳಿಗೆ, ವಿಠಲ ಪೂಜಾರಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ- ಮ್ಹಾಲಕ ಸಂಘದ ಸದಸ್ಯರು ಸಹಕರಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರದರ್ಶನ ಪಂದ್ಯಾಟ: ಪೊಲೀಸ್ ಇಲೆವೆನ್, ಸುದ್ದಿ ಬಿಡುಗಡೆ, ನಗರಸಭಾ ತಂಡ, ಸ್ನೇಹ ಸಂಗಮ ತಂಡಗಳ ಮಧ್ಯೆ ಜಿದ್ದಾಜಿದ್ದಿಯ ಪ್ರದರ್ಶನ ಪಂದ್ಯಾಟ ನಡೆಯಿತು.

ಟ್ರೋಫಿ ಮೆರವಣಿಗೆ: ಪಂದ್ಯಾ ಕೂಟದಲ್ಲಿ ವಿಶೇಷ ಆಕರ್ಷಣೆಯ ವಿನ್ಯಾಸವಿದ್ದ ಟ್ರೋಫಿಯನ್ನು ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಮೆರವಣಿಯಲ್ಲಿ ತರಲಾಯಿತು. ಮೈದಾನದಲ್ಲಿ ವೃತ್ತಾಕಾರದಲ್ಲಿ ಅಟೋ ರಿಕ್ಷಾಗಳನ್ನು ನಿಲ್ಲಿಸಿ ರಾಷ್ಟ್ರಗೀತೆಯೊಂದಿಗೆ ಆರಂಭಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.