HomePage_Banner
HomePage_Banner
HomePage_Banner
HomePage_Banner

ಯುಪಿ ಪೊಲೀಸರಿಂದ ಪಿಎಫ್‌ಐ ಕಾರ್ಯಕರ್ತರ ಅಪಹರಣ ಖಂಡಿಸಿ ಉಪ್ಪಿನಂಗಡಿ ಜಿಲ್ಲಾ ಸಮಿತಿಯಿಂದ ವಿವಿಧೆಡೆ ಬೃಹತ್ ಪ್ರತಿಭಟನೆ

ಉಪ್ಪಿನಂಗಡಿ; ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ವತಿಯಿಂದ ಮತ್ತು ಇದರ ಅಧೀನದಲ್ಲಿ ಬರುವ ಪೆರಿಯಡ್ಕ, ನೆಲ್ಯಾಡಿ, ಕಲ್ಲೇರಿ,ಕಡಬ ಸೇರಿದಂತೆ ಹಲವೆಡೆ ಉತ್ತರ ಪ್ರದೇಶ ಪೊಲೀಸರು ತನ್ನ ಕಾರ್ಯಕರ್ತರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಸಂಘಟನೆಯ ನಾಯಕರುಗಳು ಮಾತನಾಡಿ ಮೋದಿ ಮತ್ತು ಯೋಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಉಪ್ಪಿನಂಗಡಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಪೆರ್ನೆ, ಎಸ್‌ಡಿಪಿಐ ವಲಯಾಧ್ಯಕ್ಷ ಮುಸ್ತಫಾ ಲತೀಫಿ ಇಕ್ಬಾಲ್ ಕೆಂಪಿ, ಜಲೀಲ್ ಕಳಾರ , ಸಾದಿಕ್ ಅತ್ತಾಜೆ, ಫಾರೂಕ್ ಕಬಕ ಮಾತನಾಡಿದರು. ಮತ್ತು ಹಲವಾರು ಕಾರ್ಯಕರ್ತರು ಹಿತೈಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಝಕರಿಯಾ ಕೊಡಿಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.