HomePage_Banner
HomePage_Banner
HomePage_Banner
HomePage_Banner

ಭೂಮಿಯು ಕೊಡುವುದಿಲ್ಲ, ಉದ್ಯೋಗವನ್ನೂ ಕಸಿಯುವುದಾದರೆ ಕಾರ್ಮಿಕರು ಎಲ್ಲಿಗೆ ಹೋಗಬೇಕು: ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಸರಕಾರವನ್ನು ಪ್ರಶ್ನಿಸಿದ ಬಿ.ಎಮ್.ಭಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ನಿಷೇಧದ ಮೂಲಕ ಬೀಡಿ ಉದ್ಯಮದಿಂದ ಬದುಕು ಸಾಗಿಸುವರನ್ನು ಸಂಕಷ್ಟಕ್ಕೆ ಒಡ್ಡಿದೆ. ಒಂದು ವೇಳೆ ತಂಬಾಕು ನಿಷೇಧ ಮಾಡುವುದಾದರೆ ಕಾರ್ಮಿಕರಿಗೆ ಭೂಮಿ ಕೊಡಿ. ಇಲ್ಲವಾದರೆ ಉದ್ಯೋಗ ಕಸಿಯಬೇಡಿ. ಆದರೆ ಸರಕಾರ ಭೂಮಿಯನ್ನು ಕೊಡುವುದಿಲ್ಲ. ಉದ್ಯೋಗವನ್ನೂ ಕಸಿಯುವುದಾದರೆ ಕಾರ್ಮಿಕರು ಎಲ್ಲಿಗೆ ಹೋಗಬೇಕೆಂದು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ ಭಟ್ ಅವರು ಸರಕಾರವನ್ನು ಪ್ರಶ್ನಿಸಿದರು.

ಕೋಟ್ಪಾ ಕಾಯ್ದೆ ತಿದ್ದುಪಡಿಯನ್ನು ಬೀಡಿಯಿಂದ ವಿರಹಿತಪಡಿಸುವಂತೆ ಆಗ್ರಹಿಸಿ ಬೀಡಿ ಉದ್ಯಮ ಕೆಲಸಗಾರರು, ಕಾರ್ಮಿಕರು ಮತ್ತು ಗುತ್ತಿಗೆದಾರರು ಫೆ. ೨೭ ರಂದು ಪುತ್ತೂರು ಮಿನಿ ವಿಧಾನ ಸೌಧ ಎದುರು ನಡೆಸಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜಾಗತೀಕರಣ, ಉದಾರಿಕರಣ, ಖಾಸಗಿಕರಣ ಬಲೆಗೆ ಬಿದ್ದ ಕಾರಣ ನಾವು ಇದನ್ನು ಪ್ರಶ್ನಿಸುವ ಹಕ್ಕಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಯಾಕೆಂದರೆ ೨೦೦೩ರಲ್ಲಿ ವಿಶ್ವ ಸಂಸ್ಥೆಯಲ್ಲಿ ತಂಬಾಕು ನಿಷೇಧ ಮಾಡುತ್ತೇವೆ ಎಂಬ ಒಪ್ಪಂದ ಮಾಡಿತ್ತು. ಆದರೆ ೨೦೨೦ನೇ ಇಸವಿಗೆ ಬರುವಾಗ ಬೀಡಿಗೆ ಪರ್ಯಾಯ ಉದ್ಯೋಗ ಆಗಬೇಕಾಗಿತ್ತು. ೨೦೧೫ರಲ್ಲಿ ಕೋಟ್ಪಾ ಕಾಯ್ದೆ ತಂದರು. ತೆರಿಗೆ ದುಪ್ಪಟ್ಟು ಮಾಡಿದರು. ಎಲ್ಲವನ್ನು ಸಹಿಸಿಕೊಂಡು ಬೀಡಿ ಕಾರ್ಮಿಕರು ಕೆಲಸ ಮಾಡಿದರು. ಆದರೆ ೨೦೧೫ರ ಕೋಟ್ಪ ತಿದ್ದುಪಡಿ ಕಾಯ್ದೆಯಿಂದ ಬೀಡಿ ಕೆಲಸ ಕಡಿಮೆ ಆಯಿತು. ಇದು ಬೀಡಿ ಕಾರ್ಮಿಕರ ಬದುಕಿಗೆ ದೊಡ್ಡ ಹೊಡೆತ ತಂದಿದೆ ಎಂದ ಅವರು ಬೀಡಿ ಕಾರ್ಮಿಕರ ಉದ್ಯೋಗ ಕಸಿದರೆ ಅವರು ಎಲ್ಲಿಗೆ ಹೋಗಬೇಕು. ಈ ಕುರಿತು ನಾವು ಸರಕಾರದ ವಿರುದ್ಧ ಪ್ರತಿಭಟಿಸಲು ಸಹ ಆಗುತ್ತಿಲ್ಲ. ಯಾಕೆಂದರೆ ಪ್ರತಿಭಟನೆ ಮಾಡಿದ ರೈತರನ್ನೇ ದೇಶ ದ್ರೋಹಿಗಳೆಂದು ಹೇಳುತ್ತಿರುವ ಸರಕಾರ ಬೀಡಿ ಕಾರ್ಮಿಕರನ್ನು ಬಿಡಲಿಕ್ಕಿಲ್ಲ. ಬೀಡಿ ಕಾರ್ಮಿಕರ ಬದುಕಿಗಾಗಿ ಸರಕಾರ ವಿಶ್ವ ಆರೋಗ್ಯ ಸಂಸ್ಥೆಗೆ ಬಲವಾದ ಒತ್ತಡ ತರುವ ಕೆಲಸ ಮಾಡಬೇಕು. ಕಾರ್ಮಿಕರೊಗೆ ಬದುಕು ಕೊಡಿ ಬೀಡಿ ಉದ್ಯಮ ಉಳಿಸಲು ಕೋಟ್ಪಾ ಕಾಯ್ದೆ ತಿದ್ದುಪಡಿಯನ್ನು ಬಿಡಿಯಿಂದ ವಿರಹಿತಪಡಿಸುವಂತೆ ಆಗ್ರಹಿಸಿದರು.

ಹಿರಿಯ ಕಾರ್ಮಿಕ ಮುಖಂಡ ಮಂಜುನಾಥ್ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ದೊಡ್ಡ ಕೈಗಾರಿಕೆಯಾಗಿ ಬೀಡಿ ಉದ್ಯಮ ಇದೆ. ಇದು ಕಾರ್ಮಿಕರ ಬೆನ್ನೆಲುಬು. ಅದರೆ ಈ ಕಾರ್ಮಿಕರ ಜೀವನ ಸಂಕಷ್ಟಕ್ಕೆ ತಿರುಗಿದೆ. ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರ ಬದುಕನ್ನು ಉಳಿಸಿ ಎಂದರು. ಪ್ರತಿಭಟನೆಯು ಜಯಕರ್ನಾಟಕ ಬೀಡಿ ಗುತ್ತಿಗೆದಾರರ ಸಂಘ, ಋಣಮುಕ್ತ ಹೋರಾಟ ಸಮಿತಿ ಪುತ್ತೂರು ತಾಲೂಕು ಸಮಿತಿ, ಇತರ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ನಡೆಯಿತು. ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಗುಡ್ಡಪ್ಪ ಗೌಡ, ಉಪಾಧ್ಯಕ್ಷ ಕೇಶವ ಕುಮಾರ್, ಜಯಕರ್ನಾಟಕದ ಗುತ್ತಿಗೆದಾರ ಸಂಘದ ಅಧ್ಯಕ್ಷ ಗಂಗಾಧರ್, ಸಿಐಟಿಯು ಕಟ್ಟಡ ಕಾರ್ಮಿಕರ ಸಂಘದ ಬೆಳ್ತಂಗಡಿ ಘಟಕದ ಅಧ್ಯಕ್ಷ ಬೆಳ್ತಂಗಡಿ ರಾಮಚಂದ್ರ, ಬೀಡಿ ಗುತ್ತಿಗೆದಾರರ ಸಂಘದ ಮುಖಂಡ ಷರೀಪ್ ವಂದಿಸಿದರು. ಈಶ್ವರಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.