HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾ ಎ. ಎಸ್‌ರವರಿಗೆ ಸನ್ಮಾನ | ಸಾಧನೆಗೆ ಛಲ ಮತ್ತು ಪರಿಶ್ರಮ ಅಗತ್ಯ: ವಿಶ್ವೇಶ್ವರ ಭಟ್ ಬಂಗಾರಡ್ಕ

ಪುತ್ತೂರು : ಯಾವುದೇ ವ್ಯಕ್ತಿಯುಛಲ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಸಾಧನೆಯನ್ನು ಮಾಡಬಹುದು.ಇದಕ್ಕೆ ಕು. ವಿದ್ಯಾ ಎ. ಎಸ್. ಅವರೇಉತ್ತಮಉದಾಹರಣೆ. ಬಡತನದ ಹಿನ್ನಲೆಯಿಂದ ಬಂದಿರುವಅವರುಇಂದುತನ್ನ ಪರಿಶ್ರಮದಿಂದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕಅವರು ಹೇಳಿದರು. ಅವರು, ನ್ಯಾಯಾಧೀಶರಾಗಿ ಆಯ್ಕೆಯಾದ ವಿವೇಕಾನಂದ ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ವಿದ್ಯಾ ಎ. ಎಸ್. ಅವರಿಗೆ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆದ ಸನ್ಮಾನಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುತ್ತೂರಿನ ಸಮೀಪದಗ್ರಾಮೀಣ ಪ್ರದೇಶದಿಂದ ಬಂದಿರುವಂತಹ ಕು. ವಿದ್ಯಾ ಎ. ಎಸ್‌ಅವರುಇಂದು ನ್ಯಾಯಾಧೀಶರಾಗಿಆಯ್ಕೆಯಾಗಿ, ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದು ನಮಗೆ ನಮಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ. ವಿ. ಮಾತನಾಡಿ, ವಿದ್ಯಾ ಅವರ ಸಾಧನೆಯು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದು, ನಾವು ಅವರ ಹಾದಿಯಲ್ಲಿ ನಡೆಯುವಂತಾಗಬೇಕು. ಸತತ ಪರಿಶ್ರಮದಿಂದ ಹಲವಾರು ವ್ಯಕ್ತಿಗಳು ಜೀವನದಲ್ಲಿಉನ್ನತಿ ಹೊಂದಿದ್ದಾರೆ. ಇದುವೇ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಇಂದು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಇದಕ್ಕೆ ಸಾಕ್ಷಿ. ಹನುಮಂತನು ಸೀತೆಯನ್ನು ಹುಡುಕಲು ಪಟ್ಟಂತಹ ಛಲ, ಪರಿಶ್ರಮ ಹಾಗೂ ಗುರಿ ನಾವೆಲ್ಲರೂ ಹೊಂದಿರಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ.ಇದರಜೊತೆಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ವಿಚಾರಎಂದರು.

ಕಾನೂನು ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ವಕೀಲರಾದ ಸುಧೀರ್ ತೋಳ್ಪಾಡಿ ಮಾತನಾಡಿ, ದೃಢ ಮನೋಭಾವ ಹೊಂದಿದ್ದರೆ ವಿಧಿ ಕೂಡತಲೆಬಾಗುತ್ತದೆಎಂಬುದು ಕು. ವಿದ್ಯಾ ಎ. ಎಸ್. ಅವರಿಗೆಅನ್ವಯಿಸುತ್ತದೆ. ವಿದ್ಯಾಅವರು ಹಲವು ಬಾರಿ ಪ್ರಯತ್ನಿಸಿ ಸೋತಾಗಲೂದೃತಿಗೆಡಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಇನ್ನೂ ಮುಂದಿನ ಜೀವನದಲ್ಲಿ ಅವರು ಇನ್ನಷ್ಟು ಸವಾಲುಗಳನ್ನು ಎದುರಿಸಬಹುದು. ಆ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಅವರು ತಂದುಕೊಳ್ಳಬೇಕು. ಅವರು ಮುಂದಿನ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.

ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕು. ವಿದ್ಯಾ ಎ. ಎಸ್. ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ನ್ಯಾಯಂಗದಲ್ಲಿ ಉನ್ನತಿಯನ್ನು ಸಾಧಿಸಲು ಹಲವಾರು ಅವಕಾಶಗಳನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಒದಗಿಸಿ ಕೊಡುತ್ತಿದೆ. ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಇಷ್ಟೊಂದು ಅವಕಾಶಗಳು ಇರಲಿಲ್ಲ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಬೇಕು. ಹಾಗೆಯೇ ಇಂದಿನ ವಿದ್ಯಾರ್ಥಿಗಳು ಕೂಡಕಲಿಯುವಿಕೆಯಲ್ಲಿ ಹೆಚ್ಚು ಆಸಕ್ತರಾಗಿದ್ದು, ಅದನ್ನು ಹಾಗೆಯೇ ಮುಂದುವರಿಸಿ ಎಂದು ಹೇಳಿದರು.

ಕಾಲೇಜಿನ ಸಂಚಾಲಕರಾದ ವಿಜಯನಾರಾಯಣ ಕೆ.ಎಂ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾ ಎ. ಎಸ್‌ಅವರು ನಮಗೆ ಹಲವಾರು ವಿಚಾರಗಳಲ್ಲಿ ಪ್ರೇರಣಾದಾಯಿಯಾಗಿದ್ದಾರೆ. ಬಡತನದ ಹಿನ್ನಲೆಯಿಂದ ಬಂದು, ಇಂದು ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ನಮಗೆ ಮಾದರಿಯಾಗಿದ್ದಾರೆ. ಛಲವಿದ್ದರೆಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಸಾಕ್ಷಿ. ವಿದ್ಯಾರ್ಥಿಗಳೆಲ್ಲರೂ ಅವರ ಹಾದಿಯಲ್ಲಿ ನಡೆಯುವಂತಾಗಬೇಕು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮತ್ತು ವಕೀಲರಾದ ದೀಪಕ್ ಬೊಳ್ವಾರ್ ಅವರು ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಕ್ಷತಾ ಎ.ಪಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸಂಗೀತಾ ಎಸ್. ಎಂ ಸ್ವಾಗತಿಸಿ, ಡಾ.ರೇಖಾ ಕೆ. ವಂದಿಸಿದರು. ಉಪನ್ಯಾಸಕರಾದ ಕುಮಾರ್ ಶೇಣಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.