HomePage_Banner
HomePage_Banner
HomePage_Banner
HomePage_Banner

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಚಿತ್ರ: ಅಶ್ವಿನಿ ಪುತ್ತೂರು

ಪುತ್ತೂರು: ಎಪ್ರಿಲ್ ೨೪ರಿಂದ ೩೦ರವರೆಗೆ ನಡೆಯಲಿರುವ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಫೆ.೨೬ರಂದು ದೇವಳದ `ಚಿನ್ಮಯೀ’ ಸಭಾಂಗಣದಲ್ಲಿ ನಡೆಯಿತು. ದೇವಳದ ಬ್ರಹ್ಮಕಲಶೋತ್ಸವ ಮತ್ತು ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಅಶೋಕ್ ಕುಮಾರ್ ರೈಯವರು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಸೀತಾರಾಮ ರೈ ಬಿಳಿಯೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್‍ಯದರ್ಶಿ ಜಯಾನಂದ ಕೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಉದ್ಯಮಿಗಳಾದ ಭವಿನ್ ಸೌಜನಿ, ಚಂದ್ರಶೇಖರ ಸನಿಲ್, ಚಂದನ್ ಗೌಡ ತೆಂಕಪ್ಪಾಡಿ ಮತ್ತು ನಿಹಾಲ್ ಶೆಟ್ಟಿ ಕಲ್ಲಾರೆರವರು ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ಸಂಘಟನಾ ಕಾರ್‍ಯದರ್ಶಿ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತುರುರವರು ವಂದಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಜಗನ್ನಾಥ ಶೆಟ್ಟಿ ನಡುಮನೆ ಕಾರ್‍ಯಕ್ರಮ ನಿರೂಪಿಸಿದರು. ಆಮಂತ್ರಣ ಪತ್ರ ಬಿಡುಗಡೆ ಬಳಿಕ ಶ್ರೀ ಮಹಿಷಮರ್ದಿನಿ ದೇವಿಗೆ ಸಹಸ್ರ ಕುಂಕುಮಾರ್ಚನೆ ಸೇವೆ ನಡೆಯಿತು. ನಂತರ ಅನ್ನಸಂತರ್ಪಣೆ ಜರಗಿತು.

ಪ್ರಥಮ ದಿನವೇ 53 ಲಕ್ಷ ರೂ ಸಂಗ್ರಹ-ಅಶೋಕ್ ರೈ
ದೇವಸ್ಥಾನದ ಜೀರ್ಣೋದ್ಧಾರ ಕಾರ್‍ಯವು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಬ್ರಹ್ಮಕಲಶೋತ್ಸವ ಕಾರ್‍ಯಕ್ರಮಕ್ಕೆ ಕೂಡ ಒಂದೂವರೆ ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆಮಂತ್ರಣ ಪತ್ರ ಬಿಡುಗಡೆಗೊಂಡ ಪ್ರಥಮ ದಿನವೇ 53 ಲಕ್ಷ ರೂ ಸಂಗ್ರಹಗೊಂಡಿದೆ. ಅನ್ನಸಂರ್ಪಣೆಗೆ 11 ಲಕ್ಷ ರೂ, ಸುಮಾ ಅಶೋಕ್ ರೈ ನೇತೃತ್ವದಲ್ಲಿ ಕಲಶದ ಮೂಲಕ 19 ಲಕ್ಷ ರೂ ಮತ್ತು ಇತರ ರೂಪದಲ್ಲಿ ಭಕ್ತರ ಮೂಲಕ 23 ಲಕ್ಷ ರೂ ಸಂಗ್ರಹದ ವಾಗ್ದಾನ ದೊರಕಿದೆ. ಕಾರ್‍ಯಕ್ರಮಗಳಿಗೆ ಭಕ್ತರಿಂದ ಉತ್ತಮ ಸ್ಪಂದನ ದೊರಕುತ್ತಿದೆ. ನಿರೀಕ್ಷೆಗೂ ಮೀರಿ ಸಹಕಾರ ವ್ಯಕ್ತವಾಗುತ್ತಿದೆ. ಬ್ರಹ್ಮಕಲಶೋತ್ಸವ ಕಾರ್‍ಯಕ್ರಮಗಳು ವಿಜ್ರಂಭಣೆಯಿಂದ ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.