ನೆಲ್ಯಾಡಿ: ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದು ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜನಾರ್ದನ ಗೌಡ ಪಠೇರಿಯವರನ್ನು ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಸಿ ಸನ್ಮಾನಿಸಲಾಯಿತು.
ಫೆ.೨೭ರಂದು ಸಂಘದ ಸಭಾಂಗಣದಲ್ಲಿ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಜನಾರ್ದನ ಗೌಡರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕರವರು ಸನ್ಮಾನಿಸಿದರು. ನಿರ್ದೇಶಕರುಗಳಾದ ಓಡ್ಯಪ್ಪ ಗೌಡ ಪೆರಣ, ಸೀತಾರಾಮ ಗೌಡ, ಕುಶಾಲಪ್ಪ ಗೌಡ ಅನಿಲ, ಪ್ರಸಾದ್ ಕೆ.ಪಿ.ಸುಲ್ತಾಜೆ, ಶಶಿಧರ ಪಠೇರಿ, ಭಾರತಿ ಪುಳಿತ್ತಡಿ, ರಾಜೀವಿ ಬೊಟ್ಟಿಮಜಲು, ಕಾರ್ಯದರ್ಶಿ ಪದ್ಮನಾಭ ಭಟ್, ಹಾಲು ಪರೀಕ್ಷಕ ಧನಂಜಯ ಅಲೆಕ್ಕಿ ಉಪಸ್ಥಿತರಿದ್ದರು