HomePage_Banner
HomePage_Banner
HomePage_Banner
HomePage_Banner

`ಪೊಗರು’ ಖದರ್‌ಗೆ ದಿಗ್ಬ್ರಮೆಗೊಂಡ ಸಿನಿಮಾ ಲೋಕ – ಲಾಕ್‌ಡೌನ್ ಬಳಿಕ ಅರುಣಾದಲ್ಲಿ ಚಿತ್ರಪ್ರದರ್ಶನ ಆರಂಭ

ಪುತ್ತೂರು: ಕೋವಿಡ್ 19 ಲಾಕ್‌ಡೌನ್ ಬಳಿಕ ಪುತ್ತೂರಿನ ಅರುಣಾ ಚಿತ್ರ ಮಂದಿರದಲ್ಲಿ ಫೆ.27ರಂದು ಚಿತ್ರ ಪ್ರದರ್ಶನ ಆರಂಭಗೊಂಡಿದೆ. ಅದೆಷ್ಟೋ ತಿಂಗಳುಗಳ ಕಾಲ ಬಾಗಿಲು ಮುಚ್ಚಿದ ಚಿತ್ರಮಂದಿರದಲ್ಲಿ ಮತ್ತೆ ಮನರಂಜನೆಯ ಹವಾ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲೆ ಬಿರುಗಾಳಿ ಎಬ್ಬಿಸಿದ ಧ್ರುವ ಸರ್ಜಾ ಅಭಿನಯದ `ಪೊಗರು’ ಕನ್ನಡ ಸಿನಿಮಾ ಅರುಣಾದಲ್ಲಿ ಪ್ರದರ್ಶನಗೊಳ್ಳುತ್ತಿದೆ. ದಿನಾ ೪ ದೇಖಾವೆಗಳಲ್ಲಿ ಚಿತ್ರಪ್ರದರ್ಶನಗೊಳ್ಳುತ್ತಿದ್ದು ಬೆಳಿಗ್ಗೆ ಗಂಟೆ.೧೧, ಮಧ್ಯಾಹ್ನ ೨ ಸಂಜೆ ೬ ಮತ್ತು ರಾತ್ರಿ ೯ ಗಂಟೆಗೆ ಚಿತ್ರ ಪ್ರದರ್ಶನವಿರುತ್ತದೆ ಎಂದು ಚಿತ್ರಮಂದಿರದ ಪ್ರಕಟಣೆ ತಿಳಿಸಿದೆ.

ಬಾಕ್ಸ್‌ಆಫೀಸ್ ಹಿಟ್ ಸಿನಿಮಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರವಿಶಂಕರ್ ಮತ್ತಿತರರು ಅಭಿನಯಿಸಿರುವ `ಪೊಗರು’ ಸಿನಿಮಾ ಈಗಾಗಲೇ ಸಿನಿಮಾ ಲೋಕದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಹಳೇಯ ದಾಖಲೆಗಳನ್ನು ಮುರಿಯುವ ಮೂಲಕ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಮೈನವಿರೇಳಿಸುವ ಸಾಹಸ, ಇಂಪಾದ ಹಾಡುಗಳು ಸೇರಿದಂತೆ ಎಲ್ಲರ ಮನಸ್ಸು ಗೆದ್ದಿರುವ ಪೊಗರು ಅರುಣಾದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಲಾಕ್‌ಡೌನ್ ಬಳಿಕ ಮನರಂಜನೆಗಾಗಿ ಕಾಯುತ್ತಿದ್ದ ಚಿತ್ರ ಪ್ರೇಮಿಗಳು ಥಿಯೇಟರ್‌ನತ್ತ ಧಾವಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.