ಪುತ್ತೂರು: ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಇಲಾಖೆಯ ಜಾಗಕ್ಕೆ ಬೇಲಿ ಹಾಕುವ ಪ್ರಕ್ರಿಯೆಗೆ ಇಲಾಖೆ ಮುಂದಾಗಿದ್ದು ಇದರಿಂದ ರೈಲ್ವೇ ನಿಲ್ದಾಣದ ಬಳಿಯ ಅಂಗಡಿ ಮುಂಗಟ್ಟು ಮತ್ತು ಮನೆಯವರಿಗೆ ಹೋಗಲು ದಾರಿ ಇಲ್ಲದ ಪರಿಸ್ಥಿತಿ ಎದುರಾದ ಮತ್ತು ಸ್ಥಳಿಯರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆ ಫೆ.27ರಂದು ನಡೆದಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿ ಗುತ್ತಿಗೆದಾರೊಂದಿಗೆ ಮಾತಕತೆ ನಡೆಸಿದ್ದಾರೆ.