HomePage_Banner
HomePage_Banner
HomePage_Banner
HomePage_Banner

ಕೊಳ್ತಿಗೆ ಪ್ರಾ.ಕೃ.ಪ.ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಸಂಘದ ನಿವೃತ್ತ ಉದ್ಯೋಗಿ ತಿಮ್ಮಪ್ಪಯ್ಯ ಎಂ. ನೇಮಕ

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವೃತ್ತಿಪರ ನಿರ್ದೇಶಕರಾಗಿ ಸಂಘದ ನಿವೃತ್ತ ಉದ್ಯೋಗಿ ತಿಮ್ಮಪ್ಪಯ್ಯ ಎಂ.ರವರು ನೇಮಕವಾಗಿದ್ದಾರೆ. ಸಂಘದ ಆಡಳಿತ ಮಂಡಳಿಯು ಈ ನೇಮಕವನ್ನು ಮಾಡಿದೆ.

ಕೊಳ್ತಿಗೆ ಪ್ರಾ.ಕೃ.ಪ.ಸಹಕಾರ ಸಂಘದಲ್ಲಿ ೧೯೭೬ರಲ್ಲಿ ಸೇವೆಗೆ ಸೇರಿದ ಇವರು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ೭ ವರ್ಷ ಸೇವೆ ಸಲ್ಲಿಸಿ ೨೦೧೭ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಪುತ್ತೂರು ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದಲ್ಲಿ ಸಂಘದ ಗೌರವ ಸಲಹೆಗಾರರಾಗಿ ಕರ್ತವ್ಯ ಸಲ್ಲಿಸುತ್ತಿರುವ ಇವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.