HomePage_Banner
HomePage_Banner
HomePage_Banner
HomePage_Banner

ಸೌಹಾರ್ದತೆಗೆ ಶ್ರಮಿಸುತ್ತಿರುವ ನೈಜ ಆದರ್ಶ ಪ್ರಚಾರಕರಾಗಿದ್ದಾರೆ ಸುಲ್ತಾನುಲ್ ಉಲಮಾ; ಡಾ.ಝೈನಿ ಸಖಾಫಿ

  • ಕಾಜೂರು ಉರೂಸ್ ಪ್ರಯುಕ್ತ  ಬೃಹತ್ ದಿಕ್ರ್ ಮಜ್ಲಿಸ್ ಸಂಪನ್ನ
  • ಕಾಜೂರಿನಲ್ಲಿ ಹಿಫ್ಲುಲ್ ಕುರ್‌ಆನ್ , ಯಾತ್ರಾರ್ಥಿ ಮಹಿಳಾ ನಮಾಝ್ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು: ಬಹುವಿಧ ಸಂಸ್ಕೃತಿಗಳ ಸಮನ್ವಯ ನಾಡು, ಸರ್ವ ಜಾತಿ ಧರ್ಮಗಳ ಜನರು ಜೀವಿಸುವ ಭವ್ಯ ಭಾರತದಲ್ಲಿ ಸೌಹಾರ್ದತೆಗಾಗಿ ತನ್ನ ಬುದ್ದಿ, ಸಂಯಮ ಮತ್ತು ಸಮಾಧಾನದ ತಮ್ಮದೇ ಶೈಲಿಯ ವಿಶಿಷ್ಟ ನಾಯಕತ್ವದ ಮೂಲಕ ಗುರುತಿಸುತ್ತಾ, ಭಾರತೀಯ ಮುಸಲ್ಮಾನರ ಅಧಿಕೃತ ಧ್ವನಿಯಾಗಿ ನೈಜ ಆದರ್ಶ ಪ್ರಚಾರಕರಾಗಿದ್ದಾರೆ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ಎಂದು ಖ್ಯಾತ ದಾರ್ಮಿಕ ವಿದ್ವಾಂಸ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.

ಕಾಜೂರು ಮಖಾಂ ಶರೀಫ್ ಉರೂಸ್ ಸಂಭ್ರಮದಂಗವಾಗಿ ಫೆ. ೨೫ರಂದು ನಡೆದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಅವರು,ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸಮಾರಂಭವನ್ನು ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಖಾಝಿ ಶೈಖುನಾ ಮಾಣಿ ಉಸ್ತಾದ್ ಉದ್ಘಾಟಿಸಿ ಮಾತನಾಡಿ, ಇಂದು ವಿಶ್ವಾದ್ಯಂತ ಸುನ್ನತ್ ಜಮಾಅತ್ ನ ವ್ಯಾಪಕತೆಗೆ ಸುಲ್ತಾನುಲ್ ಉಲಮಾ ಕಾರಣಕರ್ತರಾಗಿದ್ದಾರೆ. ಅವರ ಜೀವಿತಾವಧಿಯಲ್ಲಿ ಅವರು ನಿರ್ಮಿಸಿದ 3ಸಾವಿರದಷ್ಟು ಮಸೀದಿಗಳು, ೪ ಸಾವಿರಕ್ಕೂ ಅಧಿಕ ಕುಡಿಯುವ ನೀರಿಗಾಗಿನಕೊಳವೆ ಬಾವಿಗಳು ಐತಿಹಾಸಿಕ ಕೊಡುಗೆಗಳಾಗಿವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.

ಉರೂಸ್ ಸಮಿತಿ ವತಿಯಿಂದ ಶೈಖುನಾ ಕಾಂತಪುರಂ ಉಸ್ತಾದ್ ಮತ್ತು ಶೈಖುನಾ ಮಾಣಿ ಉಸ್ತಾದ್ ಅವರನ್ನು ನಿಲುವಂಗಿ ತೊಡಿಸಿ ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಯ್ಯಿದ್ ಮುರ ತಂಙಳ್, ಸಯ್ಯಿದ್ ಸಲಾಂ ತಂಙಳ್, ಸಯ್ಯಿದ್ ತೀರ್ಥಹಳ್ಳಿ ತಂಙಳ್, ಮುಮ್ತಾಝ್‌ಅಲಿ ಕೃಷ್ಣಾಪುರ, ಯೂಸುಫ್ ಹಾಜಿ ಉಪ್ಪಳ್ಳಿ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಅಶ್ರಫ್ ಕಿನಾರ, ಕುಲ್ಲೂರು ಖತೀಬ್ ರಫೀಕ್ ಸಅದಿ, ಅಬ್ದುಲ್ ಅಝೀಝ್, ಸತ್ತಾರ್ ಹಾಜಿ ಚಿಕ್ಕಮಗಳೂರು, ಉರೂಸ್ ಸಮಿತಿ ಉಪಾಧ್ಯಕ್ಷ ಕೆ ಮುಹಮ್ಮದ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು, ಜೊತೆ ಕಾದ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಎಂ ಅಬೂಬಕ್ಕರ್, ಕಾಜೂರು ಮುದರ್ರಿಸ್ ಸಿರಾಜುದ್ದೀನ್ ಝುಹುರಿ ಉಪಸ್ಥಿತರಿದ್ದರು.

ಸಯ್ಯಿದ್ ಗುಲ್‌ರೇಝ್ ಅಹಮ್ಮದ್ ರಝ್ವಿ ನಅತೇ ಶರೀಫ್, ಮಸ್‌ಊದ್ ಸಅದಿ ನೇತೃತ್ವದಲ್ಲಿ ಮುಹ್ಯುದ್ದೀನ್ ಮಾಲಾ ಆಲಾಪನೆ ನಡೆಯಿತು. ಎಸ್ಸೆಸ್ಸೆಫ್ ಕರ್ನಾಟಕ ನೂತನ ಅಧ್ಯಕ್ಷರಾಗಿರುವ ಅಬ್ದುಲ್ಲತೀಫ್ ಸಅದಿ ಇಂದಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ಕಾಜೂರು ತಂಙಳ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸಲಾಂ ಮದನಿ ಅಳಕೆ ಕಾರ್ಯಕ್ರಮ ನಿರೂಪಿಸಿ, ಅಶ್ರಫ್ ಆಲಿಕುಂಞಿ ಮುಂಡಾಜೆ ವಂದಿಸಿದರು.

ಮದ್ದಡ್ಕದಿಂದ ವಾಹನಜಾಥಾ:
ಕಾಂತಪುರಂ ಉಸ್ತಾದ್ ಅವರನ್ನು ಮದ್ದಡ್ಕದಿಂದ ಕಾಜೂರುವರೆಗೆ ವಿಶೇಷ ವಾಹನಗಳ ಜಾಥಾದ ಮೂಲಕ ಕರೆತರಲಾಯಿತು. ತಮ್ಮದೇ ಸಂಸ್ಥೆ ಮರ್ಕಝ್‌ನ ಆರ್‌ಸಿಎಫ್ ಅನುದಾನದಲ್ಲಿ ನಿರ್ಮಿಸಿದ ಪೆರ್ದಾಡಿ ಮಸ್ಜಿದ್ ಬಳಿ ಕಾಂತಪುರಂ ಉಸ್ತಾದ್ ದುಆ ನೆರವೇರಿಸಿದರು. ದಪ್ಫ್ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಸ್ವಾಗತಿಸಲಾಯಿತು.ಕಾರ್ಯಕ್ರಮ ನಿಮಿತ್ತ ಅನ್ನದಾನ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಉಮರ್ ಇಬ್‌ನಿ ಖತ್ತಾಬ್ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹರಡಿದಾಗ ಪ್ರವಾದಿ ಯವರು, ಯಾರೂ ಮನೆಬಿಟ್ಟು ಹೋಗದಂತೆ ಅದೇಶಿದ್ದರು. ಅಂತೆಯೇ ಈ ಕೊರೊನಾ ರೋಗ ಕಾಲದಲ್ಲಿ ಪ್ರವಾದಿಯವರು ಅಂದೇ ಸಂದೇಶ ಸಾರಿದ ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕು. ಅಲ್ಲಾಹು ಉದ್ದೇಶಿದ್ದನ್ನು ತಡೆಯಲು ಮನುಷ್ಯ ಶಕ್ತಿಗಳಿಂದ ಅಸಾಧ್ಯವಾಗಿರುವುದರಿಂದ ಇಂತಹ ಅನಾಹುತಗಳು ಕಣ್ಣ ಮುಂದೆ ಬರುವಾಗ ದೇವರಲ್ಲಿ ಪ್ರಾರ್ಥಿಸಬೇಕು.
– ಸುಲ್ತಾನುಲ್ ಉಲಮಾ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.