ಅರಿಯಡ್ಕ : ಕೆಯ್ಯೂರು ಗ್ರಾಮದ ಕೋರಿಕ್ಕಾರು ಕುಟುಂಬಸ್ಥರ ಕುಲದೈವದ ಪ್ರತಿಷ್ಠೆ ಮತ್ತು ನೇಮೋತ್ಸವ ಫೆ.26ರಂದು ಕೋರಿಕ್ಕಾರಿನಲ್ಲಿ ನಡೆಯಿತು. ವೇ.ಮೂ.ವಿದ್ವಾನ್ ಬಿ.ಮನೋಹರ ಪುತ್ತೂರಾಯ ಬಳ್ಳಮಂಜರವರ ನೇತೃತ್ವದಲ್ಲಿ ನಾಗತಂಬಿಲ, ಅಬ್ಬೆಜಲಾಯ ಹಾಗೂ ಪರಿವಾರ ದೈವಗಳ ತಂಬಿಲ ಸೇವೆ, ಕಲ್ಲುರ್ಟಿ ದೈವದ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಿತು.
ಸನ್ಮಾನ: ಈ ಸಂದರ್ಭದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕೆಯ್ಯೂರು ವಲಯ ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ ಬೊಳಿಕ್ಕಲ ಹಾಗೂ ಕುಕ್ಕುಂಜೊಡು ಮಹಾಬಲ ರೈರವರನ್ನು ಕುಟುಂಬದ ಮುಖ್ಯಸ್ಥ ಕೋರಿಕ್ಕಾರು ಗುಡ್ಡಪ್ಪ ರೈ ಡಿಂಬ್ರಿ ಮತ್ತು ಕೋರಿಕ್ಕಾರು ಬಾಲಕೃಷ್ಣ ರೈ ಪರ್ಲಡ್ಕ ರವರು ಸನ್ಮಾನಿಸಿ ಗೌರವಿಸಿದರು.
ಕೋರಿಕ್ಕಾರು ಗುಡ್ಡಪ್ಪ ರೈ ಡಿಂಬ್ರಿ, ಬಾಲಕೃಷ್ಣ ರೈ ನೆಲ್ಲಿಯಾಜೆ, ಕೋರಿಕ್ಕಾರು ಮಂಜಪ್ಪ ರೈ, ಕೋರಿಕ್ಕಾರು ಗುಡ್ಡಪ್ಪ ರೈ, ಭವಾನಿ ರೈ ಕೋರಿಕ್ಕಾರು, ರಾಮಣ್ಣ ಶೆಟ್ಟಿ ಪಾಲ್ತಾಡು, ಪ್ರತಿಷ್ಠಾ ಸಮಿತಿ ಅಧ್ಯಕ್ಷ ಕೋರಿಕ್ಕಾರು ಸದಾನಂದ ರೈ ಮಂಗಳೂರು, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ನೆಲ್ಲಿಯಾಜೆ, ದಯಾನಂದ ರೈ ಕನ್ನೆಜಾಲು, ರಘುನಾಥ ರೈ ಮಠ ತಿಂಗಳಾಡಿ ರವರನ್ನು ಗೌರವಿಸಲಾಯಿತು.
ಚಂದ್ರಹಾಸ ರೈ ಅಮೈ, ಬಾಲಕೃಷ್ಣ ರೈ ಮೇರ್ಲ, ಅಜಿತ್ ರೈ ಮೆಣಸಿನಕಾನ, ಹರ್ಷಿತ್ ರೈ, ಶ್ರವಣ್ ಜಾಲ್ಸೂರು, ದಿನೇಶ್ ರೈ, ಲೋಕನಾಥ ರೈ ಕೋರಿಕ್ಕಾರು, ನಳಿನಿ ರೈ ಕವನ ರೈ, ಕಾರ್ತಿಕ್ ರೈ, ಕೌಶಿಕ್ ರೈ, ವಿನೋದ್ ರೈ ಕೋರಿಕ್ಕಾರು, ಶ್ರವಣ್ ರೈ ಕೋರಿಕ್ಕಾರು, ವಿನಯ್ ರೈ ಕೋರಿಕ್ಕಾರು ರವರನ್ನು ಶಾಲು ಹಾಕಿ ಗೌರವಿಸಲಾಯಿತು. ಕೋರಿಕ್ಕಾರು ಕುಟುಂಬಸ್ಥರು, ಗಣ್ಯರು ಉಪಸ್ಥಿತರಿದ್ದರು. ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.