HomePage_Banner
HomePage_Banner
HomePage_Banner
HomePage_Banner

ಕ್ರೀಡಾ ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕ ; ಸುಬ್ರಹ್ಮಣ್ಯದಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಸಾವಿತ್ರಿ.ಕೆ ಅಭಿಮತ

ಕಡಬ: ಕ್ರೀಡಾ ಸ್ಪರ್ಧೆಗಳು ಪಾಠ ಪ್ರವಚನಗಳ ಒಂದು ಭಾಗವಾಗಿದೆ.ಇದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ವಿನೂತನ ಕೊಡುಗೆಯನ್ನು ನೀಡುತ್ತದೆ.ಮಾನಸಿಕ ಸದೃಡತೆ ಮತ್ತು ಶಿಸ್ತು ಮೂಡಲು ಸ್ಪರ್ಧೆಗಳು ಪೂರಕ.ಆರೋಗ್ಯ ಪೂರ್ಣ ನಾಳೆಗಳಿಗೆ ಕ್ರೀಡೆಗಳು ಮೈಲುಗಲ್ಲು ಆದುದರಿಂದ ವಿದ್ಯಾರ್ಥಿಗಳು ಪಠ್ಯ ವಿಚಾರಗಳೊಂದಿಗೆ ಕ್ರೀಡೆಗೆ ಕೂಡಾ ಆಧ್ಯತೆ ನೀಡಬೇಕು ಎಂದು ಎಸ್.ಎಸ್.ಪಿ.ಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ಹೇಳಿದರು.

ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ನಡೆದ ಕಡಬ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ವಾಲಿಬಾಲ್ ಪಂದ್ಯಾಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಈ ಶೈಕ್ಷಣಿಕ ಅವಧಿಯಲ್ಲಿ ಪ್ರಥಮ ಬಾರಿಗೆ ಕ್ರೀಡಾ ಸ್ಪರ್ಧೆ ಆಯೋಜನೆಯಾಗಿರುವುದು ಸಂತಸ.ಕಠಿಣ ಪರಿಸ್ಥಿತಿಯಲ್ಲಿ ಈ ಶೈಕ್ಷಣಿಕ ಅವಧಿಯಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಸಲು ಅಸಾಧ್ಯವಾಗಿತ್ತು.ಆದರೆ ಕೊನೆಯ ಘಟ್ಟದಲ್ಲಿ ಕ್ರೀಡಾಕೂಟಗಳ ಆಯೋಜನೆ ವಿದ್ಯಾರ್ಥಿಗಳಿಗೆ ಸಂತಸ ನೀಡಿದೆ ಎಂದರು.

ಕಾಲೇಜಿನ ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್ ಸೇರಿದಂತೆ ಉಪನ್ಯಾಸಕರು,ಬೋಧಕೇತರ ಸಿಬ್ಬಂಧಿಗಳು, ವಿದ್ಯಾರ್ಥಿಗಳು, ಕ್ರೀಡಾಳುಗಳು, ಕ್ರೀಡಾಧಿಕಾರಿಗಳು,ಕ್ರೀಡಾ ತರಬೇತುದಾರರು ಉಪಸ್ಥಿತರಿದ್ದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.