HomePage_Banner
HomePage_Banner
HomePage_Banner
HomePage_Banner

ಕರ್ನಪ್ಪಾಡಿ: ಕೋಟಿ ಚೆನ್ನಯರ ಗರಡಿಯ ವಾರ್ಷಿಕ ನೇಮೋತ್ಸವ

ನಿಡ್ಪಳ್ಳಿ: ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ಕರ್ನಪ್ಪಾಡಿ ಇದರ ವತಿಯಿಂದ ಕರ್ನಪ್ಪಾಡಿ ಕೋಟಿ ಚೆನ್ನಯರ ಗರಡಿಯ ವಾರ್ಷಿಕ ನೇಮೋತ್ಸವವು ಫೆ.25 ಮತ್ತು 26 ರಂದು ನಡೆಯಿತು.
25 ರಂದು ಬೆಳಗ್ಗೆ  ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗತಂಬಿಲ ನಡೆಯಿತು. ಸಂಜೆ  ಭಜನಾ ಕಾರ್ಯಕ್ರಮ, ಬಳಿಕ ಭಂಡಾರ ತೆಗೆದು ರಾತ್ರಿ 10 ರಿಂದ ಕೊಡಮಂತಾಯ ದೈವದ ನೇಮ ನಡೆಯಿತು.

ಫೆ.26 ರಂದು ಸಂಜೆ  ಹೋಮ,  ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,ಪ್ರಸಾದ ವಿತರಣೆ  ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು  ರಾತ್ರಿ ಗಂ 10 ರಿಂದ ಬೈದರುಗಳ ಗರಡಿ ಇಳಿಯುವುದು,   ಕಿನ್ನಿದಾರು ಗರಡಿ ಇಳಿಯುವುದು., ದರ್ಶನ ಪಾತ್ರಿಗಳ ಸೇಟ್,  ಬೈದರುಗಳ ಸೇಟ್  ನಡೆಯಿತು. ಫೆ.27 ರಂದು ಪ್ರಾತಃಕಾಲ  ಪ್ರಸಾದ ವಿತರಣೆ ನಡೆಯಿತು.

 ಈ ಸಂದರ್ಭದಲ್ಲಿಸಮಿತಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಕಾರ್ಯದರ್ಶಿ ಮಾಧವ ಪೂಜಾರಿ ರೆಂಜ ಹಾಗೂ ಸಮಿತಿ ಪದಾಧಿಕಾರಿಗಳು,  ,ಕರ್ನಪ್ಪಾಡಿ ಮನೆಯವರು, ಪುತ್ತೂರು ಮಹಾತ್ತೋಭಾರ ಶ್ರೀ  ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ನಾರಾವಿ ,ಬಿಜೆಪಿ ಹಿಂದುಳದ  ವರ್ಗ ಜಿಲ್ಲಾ ಮೊರ್ಚಾ ಅಧ್ಯಕ   ಆರ್.ಸಿ ನಾರಾಯಾಣ ರೆಂಜ,  ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ.ಡಿ ,  ಮತ್ತು ಸಮಿತಿ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.