HomePage_Banner
HomePage_Banner
HomePage_Banner
HomePage_Banner

ಪಂಜಳದ ಸಾಲ್ಮರ ಆರ್ಯುಧಾಮದಲ್ಲಿ ಉಚಿತ ಮೂಲವ್ಯಾಧಿ ಶಿಬಿರದ ಉದ್ಘಾಟನೆ

ಪುತ್ತೂರು: ಪಂಜಳದಲ್ಲಿರುವ ಸಾಲ್ಮರ ಆರ್ಯುಧಾಮದಲ್ಲಿ ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ ರವರ ನೇತೃತ್ವದಲ್ಲಿ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರವು ಫೆ.೨೭ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದ ನರಿಮೊಗರು ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ್ ರವರು ಮಾತನಾಡಿ, ಸಂಶುದ್ದೀನ್ ಸಾಲ್ಮರ ರವರ ನೇತೃತ್ವದಲ್ಲಿ ಪಾರಂಪಾರಿಕವಾಗಿ ನಡೆಸುತ್ತಾ ಬರುತ್ತಿರುವ ಆಯುರ್ವೇದಿಕ್ ಔಷಧವೂ ಎಲ್ಲಾರಿಗೂ ಮುಟ್ಟುವಂತಾಗಲಿ ಹಾಗೂ ಆರೋಗ್ಯಕರ ಸಮಾಜ ಮೂಡಿಬರಲೆಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ರೈ ರವರು ಮಾತನಾಡಿ, ಭಾರತದಲ್ಲಿ ಆಯುರ್ವೇದ ಔಷಧವೂ ವಿಶೇಷವಾಗಿ ಬೆಳೆಯುತ್ತಾ ಬರುತ್ತಿದ್ದು, ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ ರವರ ಕೊಡುಗೆಯೂ ಸೇರಿಕೊಂಡಿದೆ ಎಂದು ಅವರು ಹೇಳಿದರು.


ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ ರವರು ಮಾತನಾಡಿ, ಈಗಾಗಲೇ ಬಡ ರೋಗಿಗಳ ಅನುಕೂಲಕ್ಕಾಗಿ ಹಲವಾರು ಉಚಿತ ವೈದ್ಯಕೀಯ ಶಿಬಿರಗಳನ್ನು ಮುಂಬೈ ಮಹಾನಗರ, ದ.ಕ ಜಿಲ್ಲೆಯ ಹಲವಾರು ಕಡೆ ಹಮ್ಮಿಕೊಂಡು ಜನಸೇವೆ ಮಾಡುತ್ತಾ ಬರಲಾಗುತ್ತಿದೆ ಎಂದ ಅವರು ಪಂಜಳದಲ್ಲಿ ನಡೆಯುತ್ತಿರುವ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರದ ಅಂಗವಾಗಿ ಮೂಲವ್ಯಾಧಿ ರೋಗಕ್ಕೆ ಒಂದು ವಾರದ ಉಚಿತ ಔಷಧಿ ವಿತರಣೆ ಮಾಡಲಾಗುವುದು. ರೋಗ ಪ್ರತಿ ರೋಧಕ ಶಕ್ತಿ ವೃದ್ಧಿಸಿ ವೈರಾಸ್ ರೋಗಾಣುಗಳು ಶರೀರಕ್ಕೆ ಪ್ರವೇಶಿಸಿದರೆ ಅದರ ವಿರುದ್ಧ ಹೊರಾಡಿ ಆರೋಗ್ಯ ಕ್ಷಮತೆಯನ್ನು ಹೆಚ್ಚಿಸುವ ಗಿಡ ಮೂಲಿಕಾ ಸಿದ್ಧ ಔಷಧಿ ವಿತರಣೆ, ಅಮೃತ ಫೈನ್ ರೀಲಿಫ್ ಆಯಿಲ್‌ನ ಸ್ಯಾಂಪಲ್ ವಿತರಣೆ ಕೂಡ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿಶೇಷವಾಗಿ ಮೂಲವ್ಯಾಧಿ ಲಕ್ಷಣಗಳಾದ ಮಲ ವಿಸರ್ಜನೆಗೆ ಅಡೆತಡೆ, ರಕ್ತ ಬೀಳುವುದು, ಗುದದ್ವಾರದಲ್ಲಿ ವಿಪರೀತ ನೋವು, ಸಹಿಸಲು ಸಾಧ್ಯವಾಗದ ನೋವು ಉರಿ ಬರುವುದು, ಮೊಳಕೆ ರೂಪದಲ್ಲಿ ಗಡ್ಡೆ ಹೊರಬಂದು ರಕ್ತ ಮತ್ತು ಕೀವು ಸೋರುವುದು. ಪಿಸ್ತೂಲಾಗಳಂತಹ ಯಾವುದೇ ತೊಂದರೆಗಳಿದ್ದರೂ ಕೇವಲ ಒಂದು ವಾರದ ಔಷಧೋಪಚಾರದಿಂದ ಸಂಪೂರ್ಣ ಹತೋಟಿಗೆ ಬರುವುದು. ೬೦ ದಿನಗಳ ಕೋರ್ಸ್‌ನಿಂದ ಜೀವನ ಪರ್ಯಾಂತ ಶಾಶ್ವತವಾಗಿ ಮೂಲವ್ಯಾಧಿ ರೋಗದಿಂದ ಮುಕ್ತಿ ಪಡೆಯಬಹುದಾಗಿದೆ ಎಂದ ಅವರು ಸುದೀರ್ಘ ೨೧ ವರುಷಗಳಿಂದ ಮುಂಬೈ ಮಹಾನಗರದಲ್ಲಿ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡುತ್ತಾ ಬರಲಾಗುತಿದ್ದೆ ಎಂದರು.

ಸಾಲ್ಮರ ತಾರಿಗುಡ್ಡೆ ಅಜ್ಮೀರ ಖ್ವಾಜ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಯೂಸೂಫ್ ತಾರಿಗುಡ್ಡೆ ಮಾತನಾಡಿ ನಾಟಿ ಸಂಶುದ್ದೀನ್ ರವರ ಉಚಿತ ಚಿಕಿತ್ಸಾ ಶಿಬಿರಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ವಿಒಯ ಕುಮಾರ್ ಉಪಸ್ಥಿತರಿದ್ದರು. ಇಸಾಕ್ ಸಾಲ್ಮರ ಸ್ವಾಗತಿಸಿ, ವಂದಿಸಿದರು.

ನೂರಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಉಚಿತ ಔಷಧ ವಿತರಣೆ:
ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ನಡೆದ ಉಚಿತ ಮೂಲವ್ಯಾದಿ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೋಂಡು ಹೆಸರು ನೋಂದಾಯಿಸಿದ ನೂರಕ್ಕೂ ಮಿಕ್ಕಿ ಜನರಿಗೆ ಉಚಿತ ಮೂಲವ್ಯಾಧಿ ಚಿಕಿತ್ಸಾ ಔಷಧಿಯನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.