HomePage_Banner
HomePage_Banner
HomePage_Banner
HomePage_Banner

ಮುಂಡೂರು ಆಲಡ್ಕ ಸದಾಶಿವ ದೇವಸ್ಥಾನದಲ್ಲಿ ಮಾ.1ರಂದು ಏಕಾದಶ ರುದ್ರಪಾರಾಯಣ, ಮಾ.2ರಂದು ಪ್ರತಿಷ್ಠಾ ದಿನ

ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.೧ರಂದು ಬೆಳಿಗ್ಗೆ ಶ್ರೀ ಗಣಪತಿ ದೇವರಿಗೆ ಗಣಹೋಮ, ಶ್ರೀ ಸದಾಶಿವ ದೇವರಿಗೆ ಏಕಾದಶ ರುದ್ರಪಾರಾಯಣ ಸಹಿತ ಅಭಿಷೇಕ ಮತ್ತು ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ, ರಂಗಪೂಜೆ ನಂತರ ಅನ್ನದಾನ ನಡೆಯಲಿದೆ.

ಮಾ.೨ರಂದು ದೇವಸ್ಥಾನದಲ್ಲಿ ಶ್ರೀ ಸದಾಶಿವ ದೇವರ ಪ್ರತಿಷ್ಠೆ ದಿನದ ಪ್ರಯುಕ್ತ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತ್ರತ್ವದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ದೇವರಿಗೆ ಕಲಶಾಭಿಷೇಕ, ದೈವಗಳಿಗೆ ತಂಬಿಲ ಹಾಗೂ ನಾಗದೇವರಿಗೆ ತಂಬಿಲ ಮಹಾಪೂಜೆ ಅನ್ನಸಂತರ್ಪಣೆ ಹಾಗೂ ಸಂಜೆ ೭ ಗಂಟೆಗೆ ಭಜನಾ ಕಾರ್ಯಕ್ರಮ ರಂಗ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.