HomePage_Banner
HomePage_Banner
HomePage_Banner
HomePage_Banner

ಆಯ್ಕೆ ಗ್ಲಾಸ್ ಆಂಡ್ ಪ್ಲೈವುಡ್ ಸ್ಥಳಾಂತರಗೊಂಡು ಶುಭಾರಂಭ

ಚಿತ್ರ:ಜೀತ್ ಪುತ್ತೂರು

ಪಟ್ಟಣ, ಪೇಟೆ ಅಭಿವೃದ್ಧಿಯಾಗಬೇಕಾದರೆ ಖಾಸಗಿ ವ್ಯಕ್ತಿಗಳ ಕೊಡುಗೆ ಅಗತ್ಯವಾಗಿದೆ-ಸಂಜೀವ ಮಠಂದೂರು

ಪುತ್ತೂರು: ಪುತ್ತೂರಿನ ಯಾವುದೇ ಪಟ್ಟಣ, ಪೇಟೆ ಅಭಿವೃದ್ಧಿಯಾಗಬೇಕಾದರೆ ಮೂಲಭೂತ ಸೌಕರ್ಯಗಳು ಅಗತ್ಯವಾಗಿದ್ದು ಶಾಸಕರು ನಗರ ಸಭೆಯಲ್ಲಿ ಸೌಕರ್ಯಗಳನ್ನು ಒದಗಿಸಿದಾದರೂ ಖಾಸಗಿ ವ್ಯಕ್ತಿಗಳ ಕೊಡುಗೆ ಅಗತ್ಯವಾಗಿದೆ. ಖಾಸಗಿ ವ್ಯಕ್ತಿಗಳು ಮೆಟ್ರೋ ಪಾಲಿಟಿ ಸಿಟಿಗಳಲ್ಲಿ ದೊರೆಯುವ ಆಧುನಿಕ ವಸ್ತುಗಳು, ಗೃಹಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ವಸ್ತುಗಳ ಮಳಿಗೆಯನ್ನು ನಮ್ಮೂರಿನಲ್ಲೂ ನೀಡಲು ಮುಂದೆ ಬಂದಾಗ ನಮ್ಮೂರು ಕೂಡ ಮಹಾನಗರ ಪಾಲಿಕೆ, ಮೆಟ್ರೋ ಪಾಲಿಟಿ ಸಿಟಿ ಆಗಲು ಸಾಧ್ಯ ಎಂದು ಶಾಸಕ ಸಂಜೀವ ಮಠಂದರೂರು ಹೇಳಿದರು. ಅವರು ಪುತ್ತೂರಿನಲ್ಲಿ ಕಳೆದ ೪೬ ವರ್ಷಗಳಿಂದ ಗ್ಲಾಸ್ ಹಾಗೂ ಫ್ಲೈವುಡುಗಳ ವ್ಯವಹಾರವನ್ನು ನಡೆಸುತ್ತಾ ಜನರ ಪ್ರೀತಿ ಪಾತ್ರರಾಗಿದ್ದ ಆಯ್ಕೆ ಗ್ಲಾಸ್ & ಫ್ಲೈವುಡ್ಸ್ ಸಂಸ್ಥೆಯು ಮಾ.೧ ರಂದು ಉರ್ಲಾಂಡಿ ಬೈಪಾಸ್ ನಲ್ಲಿರುವ ತಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದ್ದು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಭಿಮಾನದ ಮುಖಾಂತರ ಸ್ವಾವಲಂಬಿ ಜೀವನ ಮಾಡುವ ದೆಸೆಯಲ್ಲಿ ಯುವಕರು ಇಂತಹ ಉದ್ಯಮವನ್ನು ಆರಂಭಿಸುವ ಮೂಲಕ ಪುತ್ತೂರಿಗೆ ಇಂತಹ ಕೊಡುಗೆಗಳನ್ನು ನೀಡಲು ಸಾಧ್ಯವೆಂದು ಅವರು ಹೇಳಿದರು. ಪ್ರಧಾನಿ ಮೋದಿಯವರು ಹೇಳಿದಂತೆ ಲೋಕಲ್ ಫಾರ್ ವೋಕಲ್ ವಿದೇಶದಲ್ಲಿರುವ ದುಡ್ಡನ್ನು ಇಲ್ಲಿ ಇನ್‌ವೆಸ್ಟ್ ಮಾಡುವ ಮೂಲಕ ಸ್ಥಳೀಯವಾಗಿ ಅಭಿವೃದ್ಧಿಯಾಗಬೇಕು, ಒಳ್ಳೊಳ್ಳೆ ಕೈಗಾರಿಕೆಗಳು ಅ ಮೂಲಕ ಒಂದಷ್ಟು ಉದ್ಯೋಗವಕಾಶಗಳು ನಿರ್ಮಾಣವಾಗಬೇಕು, ಆ ಕೆಲಸವನ್ನು ಮಾಡಲು ಯುವಕರು ಮುಂದೆ ಬರಬೇಕು ಎಂದು ಅವರು ಹೇಳಿದರು.

ದಿವಂಗತ ಇಸಾಕಾನ್ ಮತ್ತು ಅವರ ಸಹೋದರ ರಝಾಕಾನ್ ಮತ್ತು ಅವರ ಮಕ್ಕಳಲ್ಲಿ ಇರುವ ಬಿಸಿನೆಸ್ ಮೈಂಡ್ ಎಲ್ಲ ಯುವಕರಲ್ಲಿ ಮೂಡಿ ಬರಬೇಕು ಎಂದು ಅವರು ಆಯ್ಕೆ ಗ್ಲಾಸ್ & ಪ್ಲೈವುಡ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಜನತೆಗೆ ಚಿರಪರಿಚಿತವಾಗಿದೆ. ಈ ಸಂಸ್ಥೆಯು ಬೈಪಾಸ್ ರಸ್ತೆಯಲ್ಲಿರುವ ತಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಗ್ರಾಹಕರಿಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಉತ್ತಮ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಲ್ಲರ ಮನೆಮಾತಾಗಲಿ ಎಂದು ಅವರು ಹಾರೈಸಿದರು.

ಆಯ್ಕೆ ಸಂಸ್ಥೆಯಿಂದ ಸಮಾಜಕ್ಕೆ ದೊಡ್ಡ ದೊಡ್ಡ ಕೊಡುಗೆ ನೀಡುವಂತಾಗಲಿ-ಜೀವಂದರ್ ಜೈನ್

ಆಯ್ಕೆ ಗ್ಲಾಸ್ & ಫ್ಲೈವುಡ್ ಸಂಸ್ಥೆಯು ಪುತ್ತೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ನಾನು ಕೂಡ ಕಳೆದ ಹಲವಾರು ವರ್ಷಗಳಿಂದ ಈ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಗ್ರಾಹಕರು ನಗದಿದ್ದರೂ ಅವರು ನಮ್ಮನ್ನು ನಗಿಸುತ್ತಾರೆ. ಯಾವುದೇ ವಸ್ತುಗಳ ಬಗ್ಗೆ ಸವಿವರವಾಗಿ ವಿವರಿಸಿ ಗ್ಯಾರಂಟಿಯೊಂದಿಗೆ ಗ್ರಾಹಕರಿಗೆ ಭರವಸೆ ನೀಡುತ್ತಾರೆ. ಇದು ಖಾನ್ ಸಹೋದರರ ಕಾರ್‍ಯ ವೈಖರಿಯಾಗಿದೆ ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಜೀವಂದರ್ ಜೈನ್‌ರವರು ಹೇಳಿದರು. ಬೈಪಾಸ್ ರಸ್ತೆಯಲ್ಲಿ ಇಂತಹ ಒಳ್ಳೆ ಸಂಸ್ಥೆಯನ್ನು ಆರಂಭಿಸಿದಕ್ಕೆ ಖಾನ್ ಸಹೋದರರಿಗೆ ಅಭಿನಂದಿಸುತ್ತೇನೆ. ಪಾರ್ಕಿಂಗ್ ವ್ಯವಸ್ಥೆಯನ್ನು ಅವಲಂಬಿಸಿಕೊಂಡು ಇಂತಹ ಸ್ಥಳವನ್ನು ಆಯ್ಕೆ ಮಾಡಿಕೊಂಡು ನಗರ ಪ್ರದೇಶಗಳನ್ನು ಬೆಳೆಸುವ ಕಾರ್‍ಯವನ್ನು ಮಾಡಿದ ಖಾನ್ ಸಹೋದರರ ಸೇವೆ ಶ್ಲಾಘನೀಯ ಎಂದು ಅವರು ಮುಂದೆ ಈ ಸಂಸ್ಥೆ ಇನ್ನಷ್ಟು ಯಶಸ್ವಿಯಾಗಲಿ. ಮುಂದೆ ಇವರಿಂದ ಸಮಾಜಕ್ಕೆ ದೊಡ್ಡ ದೊಡ್ಡ ಕೊಡುಗೆಗಳನ್ನು ನೀಡುವಂತಾಗಲಿ ಎಂದು ಅವರು ಹೇಳಿದರು.

ಆಯ್ಕೆ ಗ್ಲಾಸ್ & ಪ್ಲೈವುಡ್ ಸಂಸ್ಥೆ ಬೆಳೆಯುತ್ತಿರುವ ಪುತ್ತೂರಿಗೆ ಪೂರಕ-ಕೆ.ಪಿ.ಅಹ್ಮದ್ ಹಾಜಿ
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಕೆ.ಪಿ. ಅಹಮ್ಮದ್ ಹಾಜಿ ಆಕರ್ಷಣ್‌ರವರರು ಮಾತನಾಡಿ ವ್ಯತ್ತಿ ಧರ್ಮ, ವ್ಯಾಪಾರ ಧರ್ಮ ಖಾನ್ ಸಹೋದರರಿಗೆ ಹುಟ್ಟಿನಿಂದಲೇ ಬಂದಿದೆ. ಬೆಳೆಯುತ್ತಿರುವ ಪುತ್ತೂರಿಗೆ ಆಯ್ಕೆ ಗ್ಲಾಸ್ & ಫ್ಲೈವುಡ್ ಸಂಸ್ಥೆ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಕೇವಲ ವ್ಯಾಪಾರದಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಖಾನ್ ಸಹೋದರರು ವ್ಯಾಪಾರದಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಿ ಅದರಲ್ಲಿ ಬಂದ ಲಾಭಾಂಶದಿಂದ ಒಂದಂಶವನ್ನು ಸಮಾಜ ಸೇವೆಗೆ ನೀಡುತ್ತಾ ಬಂದಿದ್ದು ಇದು ಅವರ ಅಭಿವೃದ್ದಿಗೆ ಪೂರಕವಾಗಿದೆ ಎಂದು ಅವರು ಈ ಸಂಸ್ಥೆ ಇನ್ನಷ್ಟು ಪ್ರಗತಿಪಥದತ್ತ ಸಾಗಲಿ ಎಂದು ಹಾರೈಸಿದರು.

ಆಯ್ಕೆ ಗ್ಲಾಸ್ & ಪ್ಲೈವುಡ್ ಸಂಸ್ಥೆಯಿಂದ ಜನರಿಗೆ ಒಳ್ಳೆಯ ಸೇವೆ ಸಿಗಲಿ-ರೆ.ಫಾ. ಲಾರೆನ್ಸ್ ಮಸ್ಕರೇನಸ್
ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ರೆ.ಫಾ ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಪುತ್ತೂರು ಬೈಪಾಸ್‌ನಲ್ಲಿ ಸ್ಥಳಾಂತರಗೊಂಡು ಶುಭಾರಂಭ ಗೊಂಡ ಆಯ್ಕೆ ಗ್ಲಾಸ್ & ಪ್ಲೈವುಡ್ ಸಂಸ್ಥೆಯಿಂದ ಈ ಪ್ರದೇಶದ ಜನರಿಗೆ ಒಳ್ಳೆಯ ಸೇವೆ ಸಿಗಲಿ. ಖಾನ್ ಸಹೋದರರ ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗಲಿ ಎಂದು ಅವರು ನುಡಿದರು. ದೇವರು ಕೊಟ್ಟಂತಹ ಸಮಯವನ್ನು ಜೀವನವನ್ನು, ಅವಕಾಶವನ್ನು ಉಪಯೋಗಿಸಿ ಸಮಾಜಕ್ಕೆ ಬೇಕಾದ ಒಳ್ಳೆಯ ಅಭಿವೃದ್ಧಿಯನ್ನು ನೀಡುವಂತಾಗಲಿ. ದೇವರು ಮೆಚ್ಚುವಂತದನ್ನು ಮಾಡಿದರೆ ಅಲ್ಲಿ ಜೀವನದ ಉದ್ದೇಶ ಎಂದು ಅವರು ಹೇಳಿದರು.

ಆಯ್ಕೆ ಗ್ಲಾಸ್ & ಪ್ಲೈವುಡ್ ಸಂಸ್ಥೆಯಾಗಿ ಬೆಳೆದು ನಿಂತಿದೆ.-ಎಸ್.ಕೆ ಆನಂದ್
ಪುತ್ತೂರು ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ ಆನಂದ ಕುಮಾರ್ ರವರು ಮಾತನಾಡಿ ಆಯ್ಕೆ ಸಪ್ಲಾಯ್ ಸಂಸ್ಥೆಯು ಕಳೆದ ೪೬ ವರ್ಷಗಳಿಂದ ಕಾರ್‍ಯರಂಭಿಸಿ ಇದೀಗ ಬೃಹತ್ ಸಂಸ್ಥೆಯಾಗಿ ಬೆಳೆದು ಪತ್ತೂರಿನ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಅವರು ಹೇಳಿದರು. ಗ್ರಾಹಕರನ್ನು ಗೆಲ್ಲಿಸಿ ತಾನು ಗೆಲ್ಲುವುದು ಒಳ್ಳೆಯ ಗುಣವಾಗಿದೆ. ಈ ಎಲ್ಲಾ ಗುಣವನ್ನು ಹೊಂದಿರುವ ಆಯ್ಕೆ ಸಪ್ಲಾಯ್ ಸಂಸ್ಥೆಯು ಗ್ರಾಹಕರ ಮನ ಗೆದ್ದಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದೊಂದಿಗೆ ಸರಿಯಾದ ಸಮಯದಲ್ಲಿ ನಗುಮುಖದ ಸೇವೆಯೊಂದಿಗೆ ಮುಂದೆ ಬಂದರೆ ಆ ಸಂಸ್ಥೆಯು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

ಆಯ್ಕೆ ಸಂಸ್ಥೆ ಪುತ್ತೂರಿನವರ ಪ್ರಥಮ ಆಯ್ಕೆ-ಕೇಶವ ಪ್ರಸಾದ್:
ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರು ಮಾತನಾಡಿ ಆಯ್ಕೆ ಸಂಸ್ಥೆಯು ಪುತ್ತೂರಿನವರ ಪ್ರಥಮ ಆಯ್ಕೆಯಾಗಿದೆ. ಆಯ್ಕೆ ಸಂಸ್ಥೆಯ ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ಇಸಾಕಾನ್‌ರವರು ಇವರ ವ್ಯವಹಾರವು ಎಲ್ಲರಿಗೂ ಮಾದರಿ ವ್ಯವಹಾರವಾಗಿತ್ತು. ಬೈಪಾಸ್ ರಸ್ತೆಯಲ್ಲಿ ವಿಶಾಲವಾದ ತಮ್ಮ ಸ್ವಂತ ಕಟ್ಟಡದಲ್ಲಿ ಶುಭ ಸೋಮವಾರ ದಿನ ಪ್ರಾರಂಭವಾಗಿದ್ದು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಆಯ್ಕೆ ಇಸಾಕಾನ್ ಹಾಗೂ ರಝಾಕಾನ್‌ರವರನ್ನು ವ್ಯಾಪಾರಕ್ಕೆಂದೆ ಸೃಷ್ಟಿಸಲಾಗಿದೆ-ಹೇಮನಾಥ ಶೆಟ್ಟಿ ಕಾವು

ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಯವರು ಮಾತನಾಡಿ ಆಯ್ಕೆ ಸಪ್ಲಾಯ್ ಸಂಸ್ಥೆಯು ಗ್ಲಾಸ್ & ಫ್ಲೈವುಡ್ ವ್ಯವಹಾರದಲ್ಲಿ ಎಲ್ಲರ ಮನಗೆದ್ದ ಒಂದು ಉತ್ತಮ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು. ಆಯ್ಕೆ ಇಸಾಕಾನ್ ಹಾಗೂ ರಝಾಕಾನ್‌ರವರನ್ನು ವ್ಯಾಪಾರಕ್ಕೆಂದೆ ಸೃಷ್ಟಿಸಲಾಗಿದೆ. ಅವರ ಮಾತು, ಸರಳತೆ, ಸಜ್ಜನಿಕೆ, ನಗು ವ್ಯಾಪಾರದ ಎಲ್ಲಾ ಲಕ್ಷಣಗಳು ಅವರಲ್ಲಿತ್ತು ಎಂದು ಅವರು ಹೇಳಿದರು. ತಮ್ಮ ಸಂಸ್ಥೆಗೆ ವ್ಯಾಪಾರಕ್ಕೆಂದು ಬರುವ ಗ್ರಾಹಕರಿಗೆ ಪಾರ್ಕಿಂಗ್‌ನ ಕೊರತೆಯನ್ನು ಅರಿತ ಖಾನ್ ಸಹೋದರರು ಈಗ ದೇವರ ಅನುಗ್ರಹದಿಂದ ಸ್ವಂತ ಕಟ್ಟಡದಲ್ಲಿ ವಿಶಾಲವಾದ ಮಳಿಗೆಯನ್ನು ಪ್ರಾರಂಭ ಮಾಡಿದ್ದು ಇದು ಗ್ಲಾಸ್ ಹಾಗೂ ಇನ್ನಿತರ ಆಯ್ಕೆಗಾಗಿ ಬರುವವರಿಗೆ ಸೂಕ್ತ ಆಯ್ಕೆಯಾದ ಸಂಸ್ಥೆಯಾಗಿದೆ. ವ್ಯಾಪಾರದ ಎಲ್ಲಾ ಗುಣಗಳನ್ನು ಹೊಂದಿರುವ ಖಾನ್ ಸಹೋದರರ ನಗುವೇ ವ್ಯಾಪಾರದ ದೊಡ್ಡ ಗುಟ್ಟಾಗಿದೆ. ಈ ಸಂಸ್ಥೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ವ್ಯಾಪಾರ ಮೂಡಿಬರಲಿ, ಸಂಸ್ಥೆ ಯಶಸ್ವಿಯಾಗಿ ಮೂಡಿಬರಲಿ ಎಂದು ಹಾರೈಸಿದರು.

ಲಾಭಾಂಶದಲ್ಲಿ ಒಂದಂಶವನ್ನು ಬಡಬಗ್ಗರಿಗೆ ನೀಡಲಿ-ಎಲ್.ಟಿ ರಝಾಕ್ ಹಾಜಿ
ಪುತ್ತೂರು ಅನ್ಸಾರ್‌ದ್ದೀನ್ ಜಮಾ ಕಮಿಟಿಯ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿಯವರು ಮಾತನಾಡಿ ಈ ಸಂಸ್ಥೆ ಎಲ್ಲಾ ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಆಯ್ಕೆ ಗ್ಲಾಸ್ & ಪ್ಲೈವುಡ್ ಸಂಸ್ಥೆಯನ್ನು ಪ್ರಾರಂಭಿಸಿದ ಇಸಾಕಾನ್‌ರವರು ವ್ಯಾಪಾರದಲ್ಲಿ ಮಾತ್ರವಾಗದೆ ರಾಜಕೀಯ, ಧಾರ್ಮಿಕ, ಸಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ ಎಂದು ಅವರು ಹೇಳಿದರು. ತನ್ನಲಾಭಾಂಶದಲ್ಲಿ ಒಂದಂಶವನ್ನು ಬಡಬಗ್ಗರಿಗೆ ನೀಡುವ ಮೂಲಕ ಇನ್ನಷ್ಟು ಯಶಸ್ವಿಗೊಳಿಸಲು ಸಾಧ್ಯ ಎಂದು ಅವರು ಹೇಳಿದರು.

ನಗುಮೊಗದ ಸೇವೆ ನಿರಂತರವಾಗಲಿ:ಜೇಮ್ಸ್ ಜೆ.ಮಾಡ್ತಾ
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ ಜೇಮ್ಸ್ ಜೆ.ಮಾಡ್ತಾರವರು ಮಾತನಾಡಿ ಆಯ್ಕೆ ಗ್ಲಾಸ್ & ಪ್ಲೈವುಡ್ಸ್ ಸಂಸ್ಥೆಯು ಕಳೆದ ೪೬ ವರ್ಷಗಳಿಂದ ಸೇವೆಯೊಂದಿಗೆ ಪ್ರಾರಂಭಿಸಿದ ಈ ಸಂಸ್ಥೆ ಇಂದು ಹಾಗೂ ಇಂದಿಗೂ ಯಶಸ್ವಿನತ್ತ ಸಾಗುತ್ತಿದೆ. ಮುಂದೆಯೂ ಇಂತದ್ದೆ ನಗು ಮುಖದ ಸೇವೆ ಗ್ರಾಹಕರಿಗೆ ಸಿಗಲಿ, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಹೇಳಿದರು.

ವ್ಯಾಪಾರ ನ್ಯಾಯ ಸಮ್ಮತವಾಗಿರಲಿ_ಹುಸೈನ್ ರಝ್ವೀ
ಮರೀಲ್ ಅನಫೀ ಮಸೀದಿಯ ಖತೀಬ್ ವಜಾಹತ್ ಹುಸೈನ್ ರಝ್ವಿರವರು ಮಾತನಾಡಿ, ಯಾವುದೇ ವ್ಯಾಪಾರವಾಗಲಿ ಅದು ನ್ಯಾಯ ಸಮ್ಮತದಿಂದ ಕೂಡಿರಬೇಕು. ವ್ಯವಹಾರದಲ್ಲಿ ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನಲ್ಲಿ ವ್ಯವಹಾರ ನಡೆಸಿಕೊಂಡು ಬರುತ್ತರಿಉವ ಆಯ್ಕೆ ಗ್ಲಾಸ್ ಪ್ಲೈವುಡ್ ಸಮಸ್ಥೆಯು ಯಶಸ್ಸಿನತ್ತ ಸಾಗಲಿ ಎಂದು ಹೇಳಿದರು.

ಆಯ್ಕೆಯಿಂದ ಗುಣಮಟ್ಟದ ಸೇವೆ-ರಮೇಶ್ ಭಟ್
ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನ ಅಧ್ಯಕ್ಷ ರಮೇಶ್ ಭಟ್ ಮಾತನಾಡಿ, ಗ್ರಾಹಕರ ಮನಸ್ಸನ್ನು ಅರಿತು, ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶ ಮಾಡಿಕೊಟ್ಟು ಬೈಪಾಸ್ ರಸ್ತೆಯಲ್ಲಿ ತಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡ ಆಯ್ಕೆ ಗ್ಲಾಸ್&ಪ್ಲೈವುಡ್ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಮತ್ತು ಈ ಸಂಸ್ಥೆಯು ಗ್ರಾಹಕರಿಗೆ ಗುಣ ಮಟ್ಟದ ಸೇವೆ ನೀಡುತ್ತಾ ಬಂದಿದೆ ಎಂದರು.

ಸಾಲ್ಮರ ಸಯ್ಯದ್ ಎಸ್.ಎಂ ತಂಙಲ್ ದುವಾ ಆಶೀರ್ವಚನ ನೀಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರ ಸಭಾ ಸದಸ್ಯ ಸಂತೋಷ್ ಕುಮಾರ್ ಶುಭಹಾರೈಸಿದರು. ಆಯ್ಕೆ ಗ್ಲಾಸ್ & ಪ್ಲೈವುಡ್ಸ್‌ನ ಇಮ್ರಾನ್‌ಖಾನ್ ಸ್ವಾಗತಿಸಿದರು. ರಝಾಕ್‌ಖಾನ್ ಆಯ್ಕೆರವರು ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ರಫೀಕ್ ರೋಯಲ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ಸಾಜಿದ್ ಖಾನ್, ಇರ್ಫಾನ್ ಖಾನ್, ಸರ್ಪರಾಝ್ ಖಾನ್, ಅಕ್ವರ್‌ಖಾನ್, ಯಾಹ್ಯಾಖಾನ್, ಇಲ್ಯಾಸ್ ಮುಕ್ವೆ ಮೊದಲಾದವರು ಅತಿಥಿಗಳನ್ನು ಸತ್ಕರಿಸಿದರು.

ಪಾಲುದಾರರಾದ ‌ ರಝಾಕ್ ಖಾನ್ ಆಯ್ಕೆ,ಇಮ್ರಾನ್ ಖಾನ್, ಸರ್ಫರಾಜ್‌  ಖಾನ್‌ , ಇರ್ಫಾನ್‌ ಖಾನ್, ಸಾಜಿದ್‌ ಖಾನ್ ರವರು ಅತಿಥಿಗಳನ್ನು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.