ಪುತ್ತೂರು: ಕೇರಳದ ತಂಡವೊಂದು ಕದ್ದ ಚಿನ್ನಾಭರಣಗಳನ್ನೂ ಕಡಬ ತಾಲೂಕಿನ ಕಾಣಿಯೂರಿನ ಸಹಕಾರಿ ಸಂಘವೊಂದರಲ್ಲಿ ಅಡಮಾನವಿರಿಸಿದ್ದೂ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಕೇರಳ ಪೋಲೀಸರ ತಂಡ ಆರೋಪಿಯ ಜತೆ ಮಾ.2ರಂದು ಕಾಣಿಯೂರಿಗೆ ಆಗಮಿಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಹೈವೇ ದರೋಡೆಯ ಆರೋಪಿಗಳು ಕದ್ದ ಮಾಲನ್ನು ಅಡವಿರಿಸಿ ಸಾಲ ಪಡೆದಿದ್ದಾರೆ ಎಂಬ ವಿಚಾರ ಕೃತ್ಯದ ಭಾಗಿಯಾದ ಆರೋಪಿಯೊಬ್ಬನ ತನಿಖೆಯ ವೇಳೆ ಪತ್ತೆಯಾದ ಹಿನ್ನಲೆಯಲ್ಲಿ ಕೇರಳ ಪೊಲೀಸರ ತಂಡ ಇಲ್ಲಿಗೆ ಭೇಟಿ ನೀಡಿದೆ.
ಈ ಖತರ್ನಾಕ್ ತಂಡ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ರಾತ್ರಿ ವೇಳೆ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.