HomePage_Banner
HomePage_Banner
HomePage_Banner
HomePage_Banner

ಬೆಲೆ ಏರಿಕೆ ವಿರುದ್ಧ ಜೆಡಿಎಸ್, ಎಸ್.ಡಿ.ಪಿ.ಐ ಪಕ್ಷಗಳ ಪ್ರತಿಭಟನೆ

ಕಡಬ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸರ್ವ ಪಕ್ಷಗಳ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಕಡಬ ಪೇಟೆಯಲ್ಲಿ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಯಿತು.

ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಸುಮಾರು ಒಂದು ಗಂಟೆ ರಸ್ತೆಯಲ್ಲಿ ಕಟ್ಟಿಗೆಯಲ್ಲಿ ಒಲೆ ಉರಿಸಿ ಚಪಾತಿ ಬಿಸಿ ಮಾಡುವ ಮೂಲಕ ಅಣುಕು ಪ್ರದರ್ಶನ ಮಾಡಿ ಪ್ರತಿಭಟನೆ ಸಲ್ಲಿಸಲಾಯಿತು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಾಕೆ ಮಾಧವ ಗೌಡ, ಎಸ್ .ಡಿಪಿ.ಐ ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು, ಜೆಡಿಎಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಸಂತ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ ಮಾತನಾಡಿದರು. ಎಸ್‌ಡಿಪಿಐ ಮುಖಂಡರಾದ ಹ್ಯಾರೀಸ್ ಕಳಾರ,ಜಲೀಲ್ ಕಳಾರ, ಜೆಡಿಎಸ್ ಮುಖಂಡರಾದ ಚಂದ್ರಶೇಖರ ಗೌಡ ಕೋಡಿಬೈಲು, ಸುಂದರ ಗೌಡ ಬಳ್ಳೇರಿ, ಸ್ಕರಿಯಾ ಮಾಸ್ಟರ್, ಸೋಮಸುಂದರ ಕೂಜುಗೋಡು, ದಿನೇಶ್ ಮಾಸ್ಟರ್, ದುಗ್ಗಪ್ಪ ಅಗ್ರಹಾರ, ಎಂ.ಪಿ.ಪುಷ್ಪರಾಜ್, ಪ್ರವೀಣ್ ಮುಂಡೋಡಿ ಮತ್ತಿತರರು ಭಾಗವಹಿಸಿದ್ದರು. ಜಲೀಲ್ ಕಳಾರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಡಬ ತಹಶಿಲ್ದಾರ್ ಮೂಲಕ ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಮನವಿ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.