ಪುತ್ತೂರು: ಪರ್ಲಡ್ಕದಲ್ಲಿರುವ ಎಸ್ಡಿಪಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದ ಕಲೋಪಾಸನಾ- ೨೦೨೧ ಸಾಂಸ್ಕೃತಿಕ ಕಲಾ ಸಂಭ್ರಮದ ಮೋರನೇ ದಿನವಾದ ಮಾ.೧ರಂದು ಸಂಜೆ ಹನುಮಗಿರಿ ಮೇಳದವರಿಂದ ಶುಕ್ರನಂದನೆ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಹರಿಕೃಷ್ಣ ಪಾಣಾಜೆ, ಅವರ ಪತ್ನಿ ರೂಪಲೇಖಾ, ಪುತ್ರಿ ಮೇಘನಾ, ಮಾವ ಎ.ಜೆ.ಪಣಿಕ್ಕರ್, ಅತ್ತೆ ಗೌರಿ ಜೆ. ಪಣಿಕ್ಕರ್ ಉಪಸ್ಥಿತರಿದ್ದರು.