- ಗೌರವಾಧ್ಯಕ್ಷ:ಯಶೋಧರ ಜೈನ್, ಅಧ್ಯಕ್ಷ : ಶಿವಪ್ರಸಾದ್ ರೈ ಮೈಲೇರಿ
- ಕಾರ್ಯದರ್ಶಿ: ಅಬ್ದುಲ್ ಖಾದರ್, ಕೋಶಾಧಿಕಾರಿ: ಸುಧಾಕರ ಆಚಾರ್ಯ ಕಾಣಿಯೂರು
ಕಡಬ: ಕಡಬ ತಾಲೂಕು ನೂತನ ಯುವಜನ ಒಕ್ಕೂಟದ ಗೌರವಾಧ್ಯಕ್ಷರಾಗಿ ಪುತ್ತೂರು ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷರು, ಕಡಬ ಯುವಕ ಮಂಡಲದ ಮಾಜಿ ಅಧ್ಯಕ್ಷ ಯಶೋಧರ್ ಜೈನ್, ಅಧ್ಯಕ್ಷರಾಗಿ ಕಡಬ ಸರಸ್ವತಿ ವಿದ್ಯಾಲಯದ ಆಡಳಿತ ಸಮಿತಿ ಸದಸ್ಯರು, ಕುಟ್ರುಪ್ಪಾಡಿ ಕೇಪು ಲಕ್ಷ್ಮೀ ಜನಾರ್ದನ ಯುವಕ ಮಂಡಲದ ಮಾಜಿ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಕಾರ್ಯದರ್ಶಿಯಾಗಿ ಕಡಬ ಜನಪ್ರಿಯ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಅಬ್ದುಲ್ ಖಾದರ್ ಶೇಡಿಗುಂಡಿ, ಕೋಶಾಧಿಕಾರಿಯಾಗಿ ಕಡಬ ತಾಲೂಕು ಪತ್ರಕರ್ತ ಸಂಘದ ಉಪಾಧ್ಯಕ್ಷರು, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಮಾಜಿ ಅಧ್ಯಕ್ಷ ಸುಧಾಕರ ಆಚಾರ್ಯ ಕಾಣಿಯೂರು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ರಾಜ್ಯ ಮಟ್ಟದ ತೀರ್ಪುಗಾರ ಜಯಪ್ರಕಾಶ್ ಮೋಂಟಡ್ಕ, ಉಪಾಧ್ಯಕ್ಷರಾಗಿ ಹೇಮಾವತಿ, ಪ್ರಸಾದ್ ನೆಟ್ಟಣರವರನ್ನು ಆಯ್ಕೆ ಮಾಡಲಾಗಿದೆ. ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕಡಬ ತಾಲೂಕಿನ ವಿವಿಧ ಯುವಕ, ಯುವತಿ ಮಂಡಲಗಳ ಸಭೆಯಲ್ಲಿ ನೂತನ ಸಮಿತಿ ಆಯ್ಕೆ ನಡೆದಿದೆ. ಈ ಸಂದರ್ಭದಲ್ಲಿ ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಯುವಜನ ಒಕ್ಕೂಟದ ಮಾಜಿ ನಿರ್ದೇಶಕ ರಾಕೇಶ್ ರೈ ಕೆಡೆಂಜಿ, ಕಡಬ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಗಣೇಶ್ ಪಿ, ಪುತ್ತೂರು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿಮನೆ ಹಾಗೂ ಕಡಬ ತಾಲೂಕಿನ ವಿವಿಧ ಯುವಕ, ಯುವತಿ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.