ಪುತ್ತೂರು: ಕೊಂಬೆಟ್ಟು ನಿವಾಸಿ ದಿ. ದೇವಪ್ಪ ಬಂಗೇರವರ ಪತ್ನಿ ಎಂ. ಕಲ್ಯಾಣಿ(97.ವ)ಯವರು ಫೆ.೨೧ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ನೇರಳಕಟ್ಟೆ ರೈಲ್ವೇ ಉದ್ಯೋಗಿ ಬಾಲಕೃಷ್ಣ ಎಂ., ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್ ಎಂ., ಪುತ್ರಿಯರಾದ ಶ್ಯಾಮಲಾ, ವತ್ಸಲಾ, ಅಳಿಯಂದಿರಾದ ದಯಾನಂದ, ಜನಾರ್ದನ, ಸೊಸೆಯಂದಿರಾದ ಶೋಭಾ ಮತ್ತು ಪ್ರಮಿಳಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.