HomePage_Banner
HomePage_Banner
HomePage_Banner
HomePage_Banner

ಉದನೆಯ ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರು ಮಾರಾಟ ಪ್ರಕರಣ | ಮಂಗಳೂರಿನ ಮತ್ತಿಬ್ಬರು ಪೊಲೀಸರ ಅಮಾನತು

ನೆಲ್ಯಾಡಿ: ಈ ಹಿಂದೆ ಶಿರಾಡಿ ಗ್ರಾಮದ ಉದನೆಯಲ್ಲಿದ್ದ ಎಲಿಯ ಕನ್‌ಸ್ಟ್ರಕ್ಷನ್ ಆಂಡ್ ಬಿಲ್ಡರ್ಸ್ ಪ್ರೈ ಲಿ. ಕಾರ್ಪೋರೇಟ್ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಸೇರಿದ್ದ ಐಷಾರಾಮಿ ಕಾರು ಕಾರು ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದ ಮತ್ತಿಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.

ಕಾರು ಮಾರಾಟ ಪ್ರಕರಣದ ಸಂದರ್ಭ ಸಿಸಿಬಿ ತಂಡದಲ್ಲಿದ್ದ ರಾಜ ಮತ್ತು ಆಶಿತ್ ಡಿ.ಸೋಜ ಅಮಾನತುಗೊಂಡವರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಸಿಸಿಬಿಯಲ್ಲಿ ಎಸ್‌ಐ ಆಗಿದ್ದ ಕಬ್ಬಳ್‌ರಾಜ್ ಮತ್ತು ಪಾಂಡೇಶ್ವರ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಎಂಬವರನ್ನು ಫೆ.೨೭ರಂದು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ನೀಡಿದ್ದರು. ಈ ಮೂಲಕ ಈ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸರ ಸಂಖ್ಯೆ ೪ಕ್ಕೆ ಏರಿಕೆಯಾಗಿದೆ.

ಮೂರ್‍ನಾಲ್ಕು ವರ್ಷಗಳ ಹಿಂದೆ ಉದನೆಯಲ್ಲಿ ಕೇರಳ ಮೂಲದ ಮೂವರು ‘ ಎಲಿಯ ಕನ್‌ಸ್ಟ್ರಕ್ಷನ್ ಆಂಡ್ ಬಿಲ್ಡರ್ಸ್ ಪ್ರೈ ಲಿ. ಕಾರ್ಪೊರೇಟ್ ಸಂಸ್ಥೆ’ ಆರಂಭಿಸಿ ಹಣ ದ್ವಿಗುಣಗೊಳಿಸುವ ಭರವಸೆ ನೀಡಿ ಸಾವಿರಾರು ಮಂದಿಯಿಂದ ೩೦ ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದ್ದರು ಎನ್ನಲಾಗಿದೆ. ಆರಂಭದಲ್ಲಿ ಹೂಡಿಕೆದಾರರಿಗೆ ಹಣ ಹಿಂತಿರುಗಿಸಿ ನಂಬಿಸಿದ್ದ ಸಂಸ್ಥೆ ಆ ಬಳಿಕ ಹೂಡಿಕೆದಾರರನ್ನು ಸತಾಯಿಸತೊಡಗಿತು. ಇದು ದೊಡ್ಡಮಟ್ಟದ ವಂಚನೆ ಎಂದು ತಿಳಿದ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕಂಪನಿಯವರು ಉದನೆಯಲ್ಲಿ ವ್ಯವಹಾರ ಸ್ಥಗಿತಗೊಳಿಸಿ ಮಂಗಳೂರಿನಲ್ಲಿ ಕಚೇರಿ ತೆರೆದಿದ್ದರು. ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ವ್ಯವಹಾರ ಆರಂಭಿಸಿದ ಎಲಿಯ ಕಂಪನಿಗೆ ಶಕ್ತಿನಗರದ ಮಹಿಳೆ ೪.೫೦ ಲಕ್ಷ ರೂ.ಹೂಡಿಕೆ ಮಾಡಿದ್ದರು. ಆದರೆ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ೨೦೨೦ರ ಅ.೧೬ರಂದು ಮಂಗಳೂರಿನ ನಾರ್ಕೋಟಿಕ್ ಆಂಡ್ ಎಕನಾಮಿಕ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಸಹಿತ ಮೂರು ಐಷಾರಾಮಿ ಕಾರು ವಶಪಡಿಸಿಕೊಂಡಿದ್ದರು. ಈ ಪೈಕಿ ಪೊಲೀಸರೇ ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರು ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.