HomePage_Banner
HomePage_Banner
HomePage_Banner
HomePage_Banner

ಬ್ರಾಂಡೆಡ್ ಕಾಟನ್ ಬಟ್ಟೆಗಳ ಮಳಿಗೆ ರಾಮ್‌ರಾಜ್ ಶುಭಾರಂಭ

ಪುತ್ತೂರು: ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಭಾರತದ ಸಾಂಪ್ರದಾಯಿಕ ಹತ್ತಿ ಬಟ್ಟೆಯ ಉಡುಪುಗಳ ಬ್ರಾಂಡ್‌ನೊಂದಿಗೆ ದೇಶವ್ಯಾಪಿ ಮಾರುಕಟ್ಟೆ ಪಡೆದುಕೊಳ್ಳುತ್ತಿರುವ `ರಾಮ್‌ರಾಜ್ ಕಾಟನ್’ನ ಕರ್ನಾಟಕದ ೩೦ನೇ ಶೋರೂಂ ಮಾ.೩ರಂದು ಮುಖ್ಯ ರಸ್ತೆಯ ಏಳ್ಮುಡಿಯಲ್ಲಿರುವ ಪ್ರೊವಿಡೆನ್ಸ್ ಪ್ಲಾಝಾದಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾನು ಕಳೆದ ೨೫ ವರ್ಷಗಳಿಂದ ರಾಮ್‌ರಾಜ್ ಉಡುಪುಗಳ ಗ್ರಾಹಕನಾಗಿದ್ದೇನೆ. ರಾಮ್‌ರಾಜ್ ಕರ್ನಾಟಕಕ್ಕೆ ಬರುವ ಮೊದಲೇ ತಿರುಪುರದಿಂದ ಖರೀದಿಸಿ ನಾನು ಬಳಸುತ್ತಿದ್ದೇನೆ. ಪಾರಂಪರಿಕವಾದ ವೇಷ ಭೂಷಣಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ರಾಮ್‌ರಾಜ್ ಮೂಲಕ ಅಗುತ್ತಿದೆ. ಹತ್ತಿ ಬಟ್ಟೆಯಿಂದ ತಯಾರಾಗುವ ಅಪ್ಪಟ ದೇಶೀಯ ಉತ್ಪನ್ನಗಳಾಗಿದ್ದು ಕಾಟನ್ ಬಟ್ಟೆಗಳು ವಾತಾವರಣಕ್ಕೆ ಅನುಕೂಲಕರವಾಗಿದೆ. ಆಧುನಿಕತೆಗೆ ಪೂರಕವಾದ ಉಡುಪುಗಳನ್ನು ನೀಡುತ್ತಿದೆ. ದೇಶಿಯ ಉತ್ಪನ್ನವಾಗಿದ್ದು ಪ್ರಧಾನಿಯರ ಯೋಜನೆಯಾದ ಲೋಕಲ್ ಪಾರ್‌ವೋಕಲ್‌ಗೆ ಪೂರಕವಾಗಿದೆ. ದೇಶದಲ್ಲಿ ಉತ್ಪನ್ನವಾಗಿ ವಿದೇಶಗಳಿಗೆ ರಪ್ತು ಮಾಡುವ ಮೂಲಕ ದೇಶದ ಆರ್ಥಿಕಗೆ ಪೂರಕವಾಗಿದೆ. ಇದರ ಮೂಲಕ ಯುವ ಜನತೆಗೆ ಉದ್ಯೋಗ ದೊರೆಯಲಿದೆ. ವಿದೇಶದಲ್ಲಿಯೂ ಬ್ರಾಂಡ್ ಆಗಿ ಮೂಡಿಬರಲಿ ಎಂದು ಹಾರೈಸಿದರು.

ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ, ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ರಾಮ್‌ರಾಜ್ ಉತ್ಪನಗಳ ವಿಶಾಲ ಮಳಿಗೆಯ ಮೂಲಕ ಪುತ್ತೂರಿನ ಜನತೆಗೆ ಉತ್ತಮ ಸೇವೆ ದೊರೆಯುವಂತಾಗಲಿ. ಮಳಿಗೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಉತ್ಪನ್ನಗಳೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲಭಿಸಲಿ. ಉತ್ತಮ ಸೇವೆಯ ಮೂಲಕ ಅಭಿವೃದ್ಧಿ ಹೊಂದಿ ಇನ್ನಷ್ಟು ಶಾಖೆಗಳು ತೆರಯುವಂತಾಗಲಿ ಎಂದು ಆಶಿಸಿದರು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಉತ್ತಮ ಗುಣಮಟ್ಟದ ಬ್ರಾಂಡೆಡ್ ಉತ್ಪನ್ನಗಳಿಗೆ ಮಂಗಳೂರನ್ನು ಆಶ್ರಯಬೇಕಾಗಿದ್ದು ಪುತ್ತೂರಿನ ಜನತಗೆ ರಾಮ್‌ರಾಜ್ ಪುತ್ತೂರಿನಲ್ಲಿ ಆರಂಭಿಸುವ ಮೂಲಕ ಅನುಕೂಲಕರವಾಗಲಿದೆ. ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಬ್ರಾಂಡೆಡ್ ಮಳಿಗೆ ಉತ್ತಮ ಕಿರೀಟವಾಗಿದ ಎಂದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ರಾಮ್‌ರಾಜ್ ಉಡುಪುಗಳಿಗೆ ಪುತ್ತೂರಿನಲ್ಲಿ ಬಹಳಷ್ಟು ಗ್ರಾಹಕರಿದ್ದು ಮಳಿಗೆಯು ಇಲ್ಲಿನ ಜನತೆಗೆ ಇನ್ನಷ್ಟು ನೆರವಾಗಲಿದೆ. ಮುಂದೆ ಗ್ರಾಮಾಂತರ ಜಿಲ್ಲೆಯಾಗಿ ಬೆಳೆಯುತ್ತಿರುವ ಪುತ್ತೂರಿಗೆ ಉತ್ತಮ ಮಳಿಗೆಗಳ ಆವಶ್ಯಕತೆಯಿದೆ ಎಂದರು.

ರಾಮ್‌ರಾಜ್ ಕಂಪನಿಯ ಕರ್ನಾಟಕದ ಮುಖ್ಯಸ್ಥ ರಾಜೇಶ್ ಜೀವನ್ ಮಾತನಾಡಿ, ಪುತ್ತೂರಿನಲ್ಲಿ ಬಹಳಷ್ಟು ಮಂದಿ ರಾಮ್‌ರಾಜ್ ಉತ್ಪನ್ನಗಳ ಗ್ರಾಹಕರಿದ್ದಾರೆ. ಹೀಗಾಗಿ ಪುತ್ತೂರಿನಲ್ಲಿ ಮಳಿಗೆ ತೆರೆಯುವಂತೆ ಗ್ರಾಹಕರ ಬಹಳಷ್ಟು ಬೇಡಿಕೆ ಬಂದಿದೆ. ಇದಕ್ಕಾಗಿ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಸೀರೆ ಮೊದಲಾದ ಮಹಿಳೆಯರಿಗೆ ಸಂಬಂಧಿಸಿದ ಉತ್ಪನ್ನಗಳು ದೊರೆಯಲಿದೆ ಎಂದು ತಿಳಿಸಿದರು.

ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು, ಪಾಲ್ತಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ರೈ, ಬಿಜೆಪಿ ಗ್ರಾಮಾಂತರ ಮಂಡಳದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಕಟ್ಟಡದ ಮ್ಹಾಲಕ ಜಯಕುಮಾರ್ ನಾಯರ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಸಕರಿಂದ ಪ್ರಥಮ ಖರೀದಿ:
ನೂತನ ಮಳಿಗೆಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ತಾನು ರಾಮ್‌ರಾಜ್ ಉತ್ಪನ್ನಗಳ ಗ್ರಾಹಕನಾಗಿದ್ದೇನೆ ಎಂದು ತಿಳಿಸಿರುವುದಲ್ಲದೆ ಮಳಿಗೆಯಿಂದ ಪ್ರಥಮ ಗ್ರಾಹಕನಾಗಿ ಶರ್ಟ್ ಪೀಸ್‌ನ್ನು ಖರೀದಿ ಮಾಡಿದರು.

ರಾಮ್‌ರಾಜ್ ಉತ್ಪನ್ನಗಳು:
ರಾಮ್‌ರಾಜ್ ಕಾಟನ್‌ನಲ್ಲಿ ಸಾಂಪ್ರದಾಯಿಕ ಪಂಚೆ, ಶಲ್ಯ, ಶರ್ಟು ಮತ್ತಿತರ ಬಟ್ಟೆಗಳ ಜತೆಯಲ್ಲಿ ಬಾರ್ಡರ್, ಸ್ಟೈಗಾರ್ಡ್, ಪರ್‌ಫ್ಯೂಮ್ಡ್, ರಿಂಕಲ್ ರಹಿತ, ಶುಭಮುಹೂರ್ತ, ಎಂಬ್ರಾಯಿಡರಿ, ಮೆಯಿಲ್ಕನ್ ಧೋತಿಗಳು ಹಾಗೂ ಡಿಸೈನರ್, ಸಿಲ್ಕ್, ಕೂಲ್ ಕಾಟನ್, ಅಲ್ಟಿಮೇಟ್, ಲಿನೆನ್, ಬಾರ್ಡರ್ ಮ್ಯಾಚಿಂಗ್ ಮುಂತಾದ ಶರ್ಟುಗಳ ಜೊತೆಗೆ ಮಕ್ಕಳ ಸಾಂಪ್ರದಾಯಿಕ ಬಟ್ಟೆಗಳು, ಮದುವೆ ಪಂಚೆ, ಪಂಚಕಮ್, ಶೂಟಿಂಗ್ ಆಂಡ್ ಶರ್ಟಿಂಗ್, ಫೇಸ್‌ಮಾಸ್ಕ್, ಕಾಟನ್ ಶರ್ಟ್, ಕೂಲ್ ಕಾಟನ್ ಶರ್ಟ್, ಕೇರಳ ಶೈಲಿಯ ಬಟ್ಟೆಗಳು, ಡಿಸೈನ್ ಶರ್ಟ್, ಫಾರ್ಮಲ್ ಶರ್ಟ್, ಸಿಲ್ಕ್ ಶರ್ಟ್, ಟಿಶರ್ಟ್, ಬನಿಯಾನ್, ಲೆಗ್ಗಿನ್ಸ್, ಶಾಕ್ಸ್, ಮಕ್ಕಳ, ಪುರುಷರ, ಮಹಿಳೆಯರ ಒಳಉಡುಪುಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.