HomePage_Banner
HomePage_Banner
HomePage_Banner
HomePage_Banner

ಬನ್ನೂರು ವಾಲಿಬಾಲ್ ಪ್ರೀಮಿಯರ್ ಲೀಗ್ | ಯ್ಯಾಂಬು ಸಿಕ್ಸ್’ಸ್ ಚಾಂಪಿಯನ್

ಪುತ್ತೂರು: ಪ್ರಥಮ ವರುಷದ ಬನ್ನೂರು ವಾಲಿಬಾಲ್ ಪ್ರೀಮಿಯರ್ ಲೀಗ್ ಪಂದ್ಯಾಟ ಫೆ.28ರಂದು ಬನ್ನೂರಿನ ಎಚ್.ಜಿ ಮೈದಾನದಲ್ಲಿ ನಡೆಯಿತು.



ಪಂದ್ಯಾ ಕೂಟದಲ್ಲಿ ಅಸೀಫ್ ಕೆ.ಎಸ್.ಎ., ಝುಬೈರ್ ಮ್ಹಾಲಕತ್ವದ ಯ್ಯಾಂಬು ಸಿಕ್ಸ್’ಸ್ ಪ್ರಥಮ ಸ್ಥಾನ ಪಡೆದಿದ್ದು, ಮುಹಮ್ಮದ್ ಬಾತೀಷ್, ಸಲ್ಮಾನ್ ಫಾರೀಸ್, ಇಬ್ರಾಹಿಂ ಖಲೀಲ್, ಅಫ್ನಾನ್, ಮುಫೀದ್, ಮುಹೀಝ್, ಪರ್ಷೀನ್, ಖಾದರ್ ತಂಡದಲ್ಲಿದ್ದರು.

ದ್ವಿತೀಯ ಸ್ಥಾನವನ್ನು ಫೈಝಲ್ ದುಬೈ ಮ್ಹಾಲಕತ್ವದ ಡೆರಿಯಾ ಸಿಕ್ಸ್’ಸ್ ಪಡೆದುಕೊಂಡಿದ್ದು ಉಲ್ಫಾತುಲ್ಲಾ, ಇಂತಿಯಾಝ್, ಸಾನೀದ್, ಸಿನಾನ್, ಸುಹೈಲ್, ನಿಝಾಮ್, ಸಮಾದ್ ಆಟಗಾರರಿದ್ದರು.

ತೃತೀಯ ಸ್ಥಾನವನ್ನು ಹನೀಫ್ ಬನ್ನೂರು ರವರ ಮ್ಹಾಲಕತ್ವದ ವಾಲಿ ಸ್ಕ್ಯಾಡ್ ತಂಡ ಪಡೆದುಕೊಂಡಿತ್ತು. ಹಕ್ಕ್, ನಮ್ಶಾನ್, ಮುಸ್ತಫಾ, ಉಯ್ಯಮ್, ವಾರೀದ್, ಅಮೀಮ್ ತಂಡದಲ್ಲಿದ್ದರು.

ಸತತ 3 ಬಾರಿ ಸೋತ್ರು ರನ್ನರ್ ಅಪ್ ಆದ ಡೆರಿಯಾ ಸಿಕ್ಸ್’ಸ್:
ಡೆರಿಯಾ ಸಿಕ್ಸ್’ಸ್ ತಂಡ ಆರಂಭದಲ್ಲಿ ಸತತ ಮೂರು ಬಾರಿ ಸೋಲಿನ ರುಚಿ ಕಂಡಿತ್ತು. ದ್ವಿತೀಯ ಸುತ್ತಿನ ನಾಕೌಟ್ ಪಂದ್ಯಾಟದಲ್ಲಿ ಮೊದಲ ಸೆಟ್‌ನಲ್ಲಿ ವಾಲಿ ಸ್ಕ್ಯಾಡ್ ತಂಡದೊಂದಿಗೆ ಗೆಲವುವನ್ನು ಸಾಧಿಸಿಕೊಂಡು ಮತ್ತೆ 3ನೇ ಸೆಟ್‌ನಲ್ಲಿ ಜಯಭೇರಿ ಗಳಿಸಿತು. ಸೆಮಿ ಫೈನಲ್‌ನಲ್ಲಿ ಡೆರಿಯಾ ಸಿಕ್ಸ್’ಸ್ ಟೂರ್ನಿಮೆಂಟ್‌ನಲ್ಲಿ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿದ್ದ ವಾಲಿ ಸ್ಕ್ಯಾಡ್‌ನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದು ಕ್ರೀಡಾ ಪ್ರೇಕ್ಷಕರಿಗೆ ಆಚ್ಚರಿ ತಂದಿತ್ತು. ಫೈನಲ್‌ನಲ್ಲಿ ಯ್ಯಾಂಬು ಸಿಕ್ಸ್’ಸ್ ತಂಡದೊಂದಿಗೆ ಸೆಣಸಾಡಿ ಡೆರಿಯಾ ಸಿಕ್ಸ್’ಸ್ ದ್ವಿತೀಯ ಸ್ಥಾನವನ್ನು ಪಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.