HomePage_Banner
HomePage_Banner

ಒಂದು ತಿಂಗಳೊಳಗೆ 94ಸಿ,ಸಿಸಿ ಹಕ್ಕು ಪತ್ರ ಪೂರ್ತಿ ವಿತರಣೆ ಆಗಬೇಕು | ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಶಾಸಕರ ಸೂಚನೆ

ಪುತ್ತೂರು: ೯೪ ಸಿ ಮತ್ತು ೯೪ ಸಿಸಿಗೆ ಅರ್ಜಿ ಹಾಕಿದವರಿಗೆಲ್ಲಾ ಹಕ್ಕುಪತ್ರ ನೀಡುವ ಪ್ರಕ್ರಿಯೆ ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಇನ್ನೂ ೮೦ ಮಂದಿಗೆ ಹಕ್ಕು ಪತ್ರ ವಿತರಣೆ ಬಾಕಿ ಇದೆ. ಅದನ್ನು ಒಂದು ತಿಂಗಳೊಳಗೆ ಕೊಟ್ಟು ಪೂರ್ಣಗೊಳಿಸಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುತ್ತೂರು ಪುರಭವನದಲ್ಲಿ ಮಾ.೩ರಂದು ನಡೆದ ೯೪ ಸಿ ಮತ್ತು ೯೪ ಸಿಸಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಕ್ಕು ಪತ್ರ ಪೂರ್ಣಗೊಳಿಸುವ ಕುರಿತು ಕಳೆದ ಭಾರಿ ತೀರ್ಮಾಣ ಕೈಗೊಂಡಿದ್ದೆವು. ಆದರೆ ನಡುವೆ ಕೊವೀಡ್ ಬಂದಿದ್ದರಿಂದ ಹಕ್ಕು ಪತ್ರ ವಿತರಣೆಯಲ್ಲಿ ತಡವಾಯಿತು. ಆದರೂ ಇವತ್ತು ಹಕ್ಕು ಪತ್ರ ವಿತರಣೆ ಪೂರ್ಣಗೊಂಡಿಲ್ಲ. ೧೨೬ ಮಂದಿಗೆ ಇವತ್ತು ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಉಳಿದ ೮೦ ಮಂದಿಗೆ ಮುಂದಿನ ತಿಂಗಳು ೫ರ ಒಳಗೆ ಹಕ್ಕು ಪತ್ರ ವಿತರಣೆ ಮಾಡುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಮುಂದೆ ಅಕ್ರಮ ಸಕ್ರಮ ಅರ್ಜಿಗಳನ್ನು ಇತ್ಯರ್ಥ ಮಾಡುವ ಕೆಲಸವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣ ಫಲಾನುಭವಿಗಳ ಹಕ್ಕುಪತ್ರ ವಿತರಣೆ ಪ್ರಕ್ರಿಯೆಗೆ ವೇಗ ಕೊಡಬೇಕೆಂದರು. ಈ ನಡುವೆ ಹಕ್ಕು ಪತ್ರ ಪಡೆಯುವ ಸಂದರ್ಭ ಅಧಿಕಾರಿಗಳು, ಸಿಬ್ಬಂದಿಗಳು ಡಿಮಾಂಡ್ ಮಾಡಿದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ ತಳಮಟ್ಟದ ಜನರು ಈ ಯೋಜನೆಯಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೆ ಸ್ವಂತ ಮನೆ ನಿರ್ಮಾಣ ಆಗಬೇಕೆಂಬ ಯೋಜನೆ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು. ತಾ.ಪಂ ಅಧ್ಯಕ್ಷೆ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಸೀಲ್ದಾರ್ ಡಾ ಮೋನಾರೋತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.