- ಆದರ್ಶನಗರದ ಉಬೈದ್ ಮತ್ತು ಇತರರ ವಿರುದ್ಧ ದೂರು ದಾಖಲು
- ಆರೋಪಿಗಳೆಲ್ಲರೂ ಎಸ್.ಡಿ.ಪಿ.ಐ. ಕಾರ್ಯಕರ್ತರು.
ಉಪ್ಪಿನಂಗಡಿ: ಮೊಬೈಲ್ ಸ್ಟೇಟಸ್ನಲ್ಲಿ ರಾಮ ಮಂದಿರದ ಬಗ್ಗೆ ಹಾಕಿದ್ದನ್ನು ಆಕ್ಷೇಪಿಸಿದ ಯುವಕರ ತಂಡವೊಂದು ಮಾ. ೨ರಂದು ರಾತ್ರಿ ಯುವಕನ ಮನೆ ಮುಂದೆ ಬಂದು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿರುವ ಘಟನೆ ಬಗ್ಗೆ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದಿಂದ ವರದಿಯಾಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆಕ್ಕಿಲಾಡಿ ನಿವಾಸಿ ಮುಕುಂದ ಎಂಬವರ ಮನೆ ಮುಂದೆ ಕಾರಿನಲ್ಲಿ ಬಂದ ಉಬೈದ್ ಮತ್ತು ೬ ಮಂದಿಯ ತಂಡ ಸ್ಟೇಟಸ್ನಲ್ಲಿ ರಾಮ ಮಂದಿರದ ಬಗ್ಗೆ ಹಾಕಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ಧಗಳಿಂದ ಬೈದು, ಮನೆಯ ಗೇಟ್ ತೆಗೆದು ಮನೆಯೊಳಗೆ ನುಗ್ಗಿ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಮುಕುಂದ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.
ಎಸ್.ಡಿ.ಪಿ.ಐ. ಕಾರ್ಯಕರ್ತರಿಂದ ಹಲ್ಲೆ-ಮುಕುಂದ ಘಟನೆಯ ಬಗ್ಗೆ “ಸುದ್ದಿ”ಯೊಂದಿಗೆ ಮಾತನಾಡಿದ ಮುಕುಂದ “ನಿನ್ನೆ ರಾತ್ರಿ ಎಸ್.ಡಿ.ಪಿ.ಐ. ಕಾರ್ಯಕರ್ತರಾದ ಉಬೈದ್, ಶರೀಫ್, ಸೈಫ್, ಪಕ್ಷಿನ್, ಸಲೀಂ ಮೊದಲಾದವರ ಗ್ಯಾಂಗ್ ಮನೆ ಮುಂದೆ ಬಂದು ವಾಟ್ಸ್ಅಪ್ ಸ್ಟೇಟಸ್ನಲ್ಲಿರುವ ರಾಮಮಂದಿರ ವಿಷಯ ತೆಗೆಯಬೇಕು ಎಂದು ಹೇಳಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಮನೆಯೊಳಗೆ ನುಗ್ಗಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ” ಎಂದು ತಿಳಿಸಿದ್ದಾರೆ.
ಹಲ್ಲೆ ಯತ್ನ ದೂರು ದಾಖಲಾಗಿದೆ-ಎಸ್.ಐ.
ಘಟನೆ ಬಗ್ಗೆ ಮುಕುಂದವರರು ದೂರು ನೀಡಿದ್ದು, ಅವರು ನೀಡಿರುವ ದೂರಿನಂತೆ ಉಬೈದ್ ಮತ್ತು ಇತರರ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಉ