ಪುತ್ತೂರು: ಮೋದಿ ಸಂಕಲ್ಪದಂತೆ ಸ್ವಚ್ಛ ಭಾರತ ಹೊಸ ವಿಚಾರವಿನ್ನಿಟ್ಟುಕೊಂಡು ಭಾ.ಜ.ಪಾ. ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಅಕ್ಷಯ್ ರೈ ದಂಬೆಕ್ಕಾನ ನಿರ್ಮಾಣದ `ಸಚ್ಛ ಭಾರತ-2021′ ಕಿರುಚಿತ್ರವನ್ನು ಯೂ ಟ್ಯೂಬ್ ನಲ್ಲಿ ಮಾ.3ರಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ ಸಂಸದ ನಳೀನ್ ಕುಮಾರ್ ಕಟೀಲ್ ರವರು ಬೆಂಗಳೂರಿನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.
ಭಾ.ಜ.ಪಾ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಈ ಕಿರುಚಿತ್ರದಲ್ಲಿ ವೀಕ್ಷಿಸಬಹುದಾಗಿದೆ. ಕಿರುಚಿತ್ರದಲ್ಲಿ ರೇಷ್ಮಾ, ರಘು ಶೆಟ್ಟಿ, ರಕ್ಷಿತ್ ರೈ ಬೊಲೋಡಿ ಆಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಿರುಚಿತ್ರದ ನಿರ್ದೇಶಕ ಅಕ್ಷಯ್ ರೈ, ನಿರ್ಮಾಪಕ ರತನ್ ಪೂಜಾರಿ, ಛಾಯಾಗ್ರಾಹಕರಾದ ಪ್ರಮೋದ್ ಸಾಲಿಯಾನ್, ರಘು ಶೆಟ್ಟಿ, ಭಾ.ಪ.ಪಾ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೊಕೇಶ್ ಅಂಬೆಕಲ್ಲು, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಕಾಸಳೆ ಹಾಗೂ ಭಾ.ಜ.ಪಾ. ಪದಾಧಿಕಾರಿಗಳು ಮತ್ತು ಕಿರುಚಿತ್ರ ತಂಡವದವರು ಉಪಸ್ಥಿತಿದ್ದರು.
ಯೂಟ್ಯೂಬ್ನಲ್ಲಿ ಲಭ್ಯ:
ಈ ಕಿರುಚಿತ್ರವನ್ನು `ಅಕ್ಷಯ ರೈ ದಂಬೆಕ್ಕಾನ’ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.