HomePage_Banner
HomePage_Banner
HomePage_Banner
HomePage_Banner

ಮೊಬೈಲ್ ಸ್ಟೇಟಸ್‌ನಲ್ಲಿ ರಾಮ ಮಂದಿರದ ಬಗ್ಗೆ ಹಾಕಿರುವುದನ್ನು ಆಕ್ಷೇಪಿಸಿ ಯುವಕರ ತಂಡದಿಂದ ಮನೆ ಮುಂದೆ ದಾಂಧಲೆ-ಹಲ್ಲೆ ಯತ್ನ, ಜೀವ ಬೆದರಿಕೆ

  • ನೆಕ್ಕಿಲಾಡಿ: ಮೊಬೈಲ್ ಸ್ಟೇಟಸ್‌ನಲ್ಲಿ ರಾಮಮಂದಿರ ವಿಚಾರ-ಆಕ್ಷೇಪ

ಕಾಲೇಜು ವಿದ್ಯಾರ್ಥಿ ಯುವಕ ಆಸ್ಪತ್ರೆಯಲ್ಲಿ ದಾಖಲು
ಎಸ್‌ಡಿಪಿಐ ಕಾರ್ಯಕರ್ತರಿಂದ ಹಲ್ಲೆ ಆರೋಪ
ಆದರ್ಶನಗರದ ಉಬೈದ್ ಮತ್ತು ಇತರರ ವಿರುದ್ಧ ದೂರು ದಾಖಲು
ಎಸ್‌ಡಿಪಿಐಗೆ ಸಂಬಂಧವಿಲ್ಲ-ಸ್ಪಷ್ಟನೆ

ಉಪ್ಪಿನಂಗಡಿ:ಮೊಬೈಲ್ ಸ್ಟೇಟಸ್‌ನಲ್ಲಿ ರಾಮ ಮಂದಿರದ ಬಗ್ಗೆ ಹಾಕಿದ್ದನ್ನು ಆಕ್ಷೇಪಿಸಿದ ಯುವಕರ ತಂಡವೊಂದು ಮಾ. ೨ರಂದು ರಾತ್ರಿ ಯುವಕನ ಮನೆ ಮುಂದೆ ಬಂದು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿರುವ ಘಟನೆ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದಿಂದ ವರದಿಯಾಗಿದೆ.ಎಸ್‌ಡಿಪಿಐ ಕಾರ್ಯಕರ್ತರು ತನಗೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಯುವಕ ಆರೋಪಿಸಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಘಟನೆಗೂ ಎಸ್‌ಡಿಪಿಐಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ವಲಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.

ಕಾರಿನಲ್ಲಿ ಬಂದ ಉಬೈದ್ ಮತ್ತು 6 ಮಂದಿಯ ತಂಡ, ಮೊಬೈಲ್ ಸ್ಟೇಟಸ್‌ನಲ್ಲಿ ರಾಮ ಮಂದಿರದ ಬಗ್ಗೆ ಹಾಕಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ಧಗಳಿಂದ ಬೈದು, ಮನೆಯ ಗೇಟ್ ತೆಗೆದು ಮನೆಯೊಳಗೆ ನುಗ್ಗಿ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ನೆಕ್ಕಿಲಾಡಿಯ ಮುಕುಂದ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಎಸ್.ಡಿ.ಪಿ.ಐ. ಕಾರ್‍ಯಕರ್ತರಿಂದ ಹಲ್ಲೆ-ಮುಕುಂದ: ಘಟನೆಯ ಬಗ್ಗೆ “ಸುದ್ದಿ”ಯೊಂದಿಗೆ ಮಾತನಾಡಿದ ಮುಕುಂದರವರು “ನಿನ್ನೆ ರಾತ್ರಿ ಎಸ್.ಡಿ.ಪಿ.ಐ.ಕಾರ್‍ಯಕರ್ತರಾದ ಉಬೈದ್, ಶರೀಫ್, ಸೈಫ್, ಪಕ್ಷಿನ್, ಸಲೀಂ ಮೊದಲಾದವರ ಗ್ಯಾಂಗ್ ಮನೆ ಮುಂದೆ ಬಂದು ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿರುವ ರಾಮಮಂದಿರ ವಿಷಯ ತೆಗೆಯಬೇಕು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಮನೆಯೊಳಗೆ ನುಗ್ಗಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ “ ಎಂದು ಆರೋಪಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಯಾಗಿರುವ ಮುಕುಂದ ಅವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಅಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಅವರು ನಾನು ೨ ತಿಂಗಳ ಹಿಂದೆ ನನ್ನ ಮೊಬೈಲ್ ಸ್ಟೇಟಸ್‌ನಲ್ಲಿ ಅಲ್ಲಿ ಕಟ್ಟುವೆವು ರಾಮಮಂದಿರ ಎಂದು ಟ್ರೋಲ್ ಮಾಡಿದ್ದನ್ನು ಹಾಕಿದ್ದೆ.ಇದನ್ನು ವಿಚಾರಿಸಿದ ಪರ್ಸಿನ್ ಎಂಬ ವ್ಯಕ್ತಿ ಸ್ಟೇಟಸ್‌ನ ಸ್ಕ್ರೀನ್‌ಶಾಟ್ ತೆಗೆದು ನನಗೆ ಕಳುಹಿಸಿದ್ದಲ್ಲದೆ ಫೋನ್ ಕಾಲ್ ಮಾಡಿ ಬೆದರಿಕೆಯೊಡ್ಡಿದ್ದ.ಬಳಿಕದ ಬೆಳವಣಿಗೆಯಲ್ಲಿ ನಾನು ಬ್ಲಾಕ್ ಮಾಡಿದ್ದೆ.ಆದರೆ ಮೊನ್ನೆ ಗ್ರಾ.ಪಂ.ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಗೆದ್ದ ಬಳಿಕ ಆತ, ವಾಟ್ಸಪ್ ಸಂಪರ್ಕ ಅನ್‌ಲಾಕ್ ಮಾಡುವಂತೆ ಮೆಸೇಜ್ ಮಾಡಿದ್ದ.ಅದಕ್ಕೆ ನಾನು ಆತನಿಗೆ ಕಾಲ್ ಮಾಡಿ ನೀನು ಯಾರು ಎಂದಿದ್ದೆ.ಆಗ ಆತ ನನಗೆ ಬೆದರಿಕೆಯೊಡ್ಡಿದ್ದ.ಅದಾದ ಬಳಿಕ ನಿನ್ನೆ(ಮಾ.2)ರಾತ್ರಿ ಮನೆಯ ಗೇಟು ಮುಂದೆ ಆಪೆ ರಿಕ್ಷಾದಲ್ಲಿ ಬಂದ ಆದರ್ಶ ನಗರದ ಉಬೈದ್, ಪರ್ಸಿನ್, ರಶೀದ್, ಸೈಪು, ರಹೀಮ್ ಮತ್ತಿತರ ತಂಡ ಮನೆಯ ಗೇಟನ್ನು ದೂಡಿ ದಾಂಧಲೆ ನಡೆಸಿ ಹಲ್ಲೆ ನಡೆಸಿದ್ದಾರೆ.ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲ್ಲೆ ಯತ್ನ ದೂರು ದಾಖಲಾಗಿದೆ-ಎಸ್.ಐ.: ಘಟನೆ ಬಗ್ಗೆ ಮುಕುಂದವರರು ದೂರು ನೀಡಿದ್ದು, ಅವರು ನೀಡಿರುವ ದೂರಿನಂತೆ ಉಬೈದ್ ಮತ್ತು ಇತರರ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಉಪ್ಪಿನಂಗಡಿ ಎಸ್.ಐ. ಈರಯ್ಯ “ಸುದ್ದಿ”ಯೊಂದಿಗೆ ಪ್ರತಿಕ್ರಿಯಿಸಿ ತಿಳಿಸಿದ್ದಾರೆ.

ಎಸ್‌ಡಿಪಿಐಗೆ ಸಂಬಂಧವಿಲ್ಲ-ಸ್ಪಷ್ಟನೆ: ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವೊಂದು ಟಿವಿ ಮಾಧ್ಯಮಗಳಲ್ಲಿ ಸುಳ್ಳು ಸಂದೇಶಗಳು ಹರಿದಾಡುತ್ತಿವೆ.ಆದರೆ ಮನೆಯ ಮುಂದೆ ನಡೆದ ಘಟನೆಗೂ ಎಸ್‌ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.ಪಕ್ಷದ ತೇಜೋವಧೆ ಮಾಡಲು ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾಗಿ ಒತ್ತಾಯಿಸುತ್ತಿzವೆ ಎಂದು ಉಪ್ಪಿನಂಗಡಿ ವಲಯ ಎಸ್‌ಡಿಪಿಐ ಅಧ್ಯಕ್ಷ ಮುಸ್ತಫ ಲತೀಫಿ ಹೇಳಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.