HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೋಟ್ಯಾಂತರ ರೂ. ಮರ ಕಳವು ಪ್ರಕರಣ – ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ಧ ನೀತಿ ತಂಡ ಹೋರಾಟಕ್ಕೆ ಸಿದ್ಧತೆ

  • ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲು ಸಿದ್ಧತೆ..

ಕಡಬ: ಸುಬ್ರಹ್ಮಣ್ಯ ವಲಯ ರಕ್ಷಿತಾ ಅರಣ್ಯದಲ್ಲಿ ಕೊಟ್ಯಾಂತರ ಬೆಲೆ ಬಾಳುವ ಮರ ಕಳ್ಳತನ ಆಗಿದ್ದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲು, ದೂರು ನೀಡಿದಾತನ ಮೇಲೆ ಸೇಡು ತೀರಿಸುವ ಪ್ರಯತ್ನ ನಡೆಸುತ್ತಿರುವ ಸಂಚಾರಿ ದಳದ ವಲಯಾ ಅರಣ್ಯ ಅಧಿಕಾರಿ ಸಂಧ್ಯಾ ಹಾಗೂ ಅರಣ್ಯಾಧಿಗಳ ವಿರುದ್ದ ಹೋರಾಟ ನಡೆಸಲು ಸಾಮಾಜಿಕ ಕಾರ್ಯಕರ್ತ, ನೀತಿ ತಂಡ ರಾಜ್ಯಾಧ್ಯಕ್ಷ ಜಯನ್ ಸಿದ್ದತೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿರುವ ಅರಣ್ಯ ಇಲಾಖೆಯವರ ವಿರುದ್ದ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಜಯನ್ ಅವರು ಕೊಟ್ಯಾಂತರ ಮರ ಕಳ್ಳತನ ಆಗಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ, ಮರಕಳ್ಳತನದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾದ ಅಧಿಕಾರಿಗಳ ಸ್ತರದ ಇನ್ನೋರ್ವ ಅಧಿಕಾರಿ ತನಿಖೆ ನಡೆಸುವುದು ಅಂದರೆ ಏನರ್ಥ, ಆ ಅಧಿಕಾರಿ ಕೂಡ ರಾತ್ರೋ ರಾತ್ರಿ ಗೂಂಡಗಳ ರೀತಿಯಲ್ಲಿ ವರ್ತಿಸಿ ಮಹಿಳೆಯರು, ಮಕ್ಕಳಿಗೆ ಹಲ್ಲೆ ನಡೆಸುತ್ತಿದ್ದಾರೆ ಎಂದರೆ ಇದನ್ನು ಕೇಳುವವರು ಯಾರು ಇಲ್ಲವೇ, ಕೂಡಲೇ ನ್ಯಾಯಾಲಯ ಮಧ್ಯಪ್ರವೇಶಿಸಿ ಸುಬ್ರಹ್ಮಣ್ಯ ವಲಯ ಅರಣ್ಯದಲ್ಲಿ ಬೇರೆ ಬೇರೆ ವಿಭಾಗದಲ್ಲಿ ನಡೆದಿರುವ ಭ್ರಷ್ಟಚಾರವನ್ನು ತನಿಖೆ ನಡೆಸಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ತನಿಖೆ ನಡೆಸಬೇಕು ಅಲ್ಲಿಯವರೆಗೆ ಹೋರಾಟ ಮುಂದುವರಿಲಿದೆ ಎಂದು ಅವರು ತಿಳಿಸಿದ್ದಾರೆ.

ನೀತಿ ತಂಡ ರಾಜ್ಯಾಧ್ಯಕ್ಷ ಜಯನ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.