HomePage_Banner
HomePage_Banner
HomePage_Banner
HomePage_Banner

ಮಾ.6 -7: ಅಭಿರಾಮ್ ಫ್ರೆಂಡ್ಸ್‌ನಿಂದ ಲೀಗ್ ಮಾದರಿಯ 10 ತಂಡಗಳ ಕ್ರಿಕೆಟ್ ಪಂದ್ಯಾಟ ಪುತ್ತೂರು ಪ್ರೀಮಿಯರ್ ಲೀಗ್ -2021

ಪುತ್ತೂರು: ಬೊಳುವಾರಿನ ಅಭಿರಾಮ್ ಫ್ರೆಂಡ್ಸ್‌ನ ವತಿಯಿಂದ ತೃತೀಯ ವರ್ಷದ 10 ತಂಡಗಳ ಲೀಗ್ ಮಾದರಿ ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟ ಪಿಪಿಎಲ್-ಪುತ್ತೂರು ಪ್ರೀಮಿಯರ್ ಲೀಗ್ -2021 ಮಾ.6 ಹಾಗೂ 7ರಂದು ಕೊಂಬೆಟ್ಟು ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎಎಫ್‌ಸಿ ರಾಕರ್‍ಸ್, ಸಿಝ್ಲರ್ ಸಾಮೆತ್ತಡ್ಕ, ರೆಡ್ ಗೈಯ್ಸ್, ವಿಶ್ವ ಕುಂಬ್ರ, ಪ್ಲವರ್ ಗೈಯ್ಸ್, ಟೆನ್ ಗೈಸ್ ಉಬಾರ್, ಕರಾವಳಿ ಬನ್ನೂರು, ಟೀಮ್ ರೋಕರ್‍ಸ್ ಸಾಲ್ಮರ, ಸಂಡೇ ಕ್ರಿಕೆಟರ್‍ಸ್ ಸಾಲ್ಮರ ಹಾಗೂ ಪ್ರೆಡಟೂರ್ ಬನ್ನೂರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಪಂದ್ಯಾಟದಲ್ಲಿ ಪ್ರಥಮ ರೂ.50,000, ದ್ವಿತೀಯ ರೂ.25,000 ನಗದು ಹಾಗೂ ಪಿಪಿಎಲ್ ಟ್ರೋಫಿ ನೀಡಲಾಗುವುದು. ಪಂದ್ಯಾವಳಿಯ ಆಟಗಾರ, ಸವ್ಯಸಾಚಿ ಆಟಗಾರ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್ ಹಾಗೂ ಉತ್ತಮ ಫೀಲ್ಡರ್ ಬಹುಮಾನಗಳನ್ನು ನೀಡಲಾಗುವುದು.

ಮಾ.೬ರಂದು ಬೆಳಿಗ್ಗೆ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು ಪಂದ್ಯಾಟವನ್ನು ಪರ್ಪುಂಜ ರಾಮಜಾಲು ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ನಗರ ಠಾಣಾ ನಿರೀಕ್ಷಕ ಗೋಪಾಲ ನಾಯ್ಕ್, ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ಜಯರಾಮ ಗೌಡ, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ತುಳಸಿ ಕ್ಯಾಟರರ್‍ಸ್‌ನ ಮ್ಹಾಲಕ ಹರೀಶ್ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಾ.7ರಂದು ಸಂಜೆ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ರಾಜ್ಯ ಸಮಾಕ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಕ್ಷಯ ಗ್ರೂಪ್‌ನ ಮ್ಹಾಲಕ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಸನ್ಮಾನಿಸಲಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಬಹುಮಾನ ವಿತರಿಸಲಿದ್ದಾರೆ ಎಂದು ಅಭಿರಾಮ್ ಫ್ರೆಂಡ್ಸ್‌ನ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.