HomePage_Banner
HomePage_Banner
HomePage_Banner
HomePage_Banner

ಕಲಾಸಕ್ತರಿಗೊಂದು ಸುವರ್ಣಾವಕಾಶ… | ಬೊಳ್ವಾರಿನಲ್ಲಿ ಮಾ.7ರಂದು ಉದ್ಘಾಟನೆಗೊಳ್ಳಲಿದೆ ಶ್ರೀರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರ

ಪುತ್ತೂರು: ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಅವರ ನೇತೃತ್ವದಲ್ಲಿ ನೂತನವಾಗಿ ಆರಂಭಿಸಿರುವ ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರವು ಬೊಳ್ವಾರು ಭಾರತ್ ಪೆಟ್ರೋಲ್ ಬಂಕ್ ಎದುರುಗಡೆಯ ಉದಯಗಿರಿ ಹತ್ತಿರ ಮಾ.೭ರಂದು ಉದ್ಘಾಟನೆಗೊಳ್ಳಲಿದೆ. ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್ ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.


ತರಬೇತುಗೊಳಿಸುವ ವಿಷಯಗಳು:ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಲವು ವಿಷಯಗಳ ಬಗ್ಗೆ ತರಬೇತಿ ನಡೆಯಲಿದೆ. ಜಲವರ್ಣ ಚಿತ್ರಗಳು, ಪೆನ್ಸಿಲ್ ಶೇಡಿಂಗ್, ಕೊಲಾಜ್ ಆರ್ಟ್, ಮರಳಿನಿಂದ ಚಿತ್ರ ರಚನೆ ಮತ್ತು ಸ್ಪ್ರೇ ಪೇಂಟಿಂಗ್, ಅವೆ ಮಣ್ಣಿನಿಂದ ಆಕೃತಿಗಳ ರಚನೆ, ಕ್ರಿಯೇಟಿವ್ ಆರ್ಟ್, ಸಾಂಪ್ರದಾಯಿಕ ಚಿತ್ರಗಳು, ಪಠ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಚಿತ್ರಗಳು, ಕಸದಿಂದ ರಸ, ಚಿತ್ರಕಲಾ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರುಗೊಳಿಸುವುದು, ಜನಪದೀಯ ಶೈಲಿಯ ಚಿತ್ರಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕಾರ್ಯಗಾರಗಳು, ಪ್ರಕೃತಿ ವೀಕ್ಷಣೆ ಹಾಗೂ ಸ್ಥಳದಲ್ಲಿ ಚಿತ್ರ ರಚನೆಗಳು, ಸ್ಮರಣ ಚಿತ್ರಗಳು, ಜ್ಯಾಮಿತಿಕ ಚಿತ್ರಗಳು, ಅಲಂಕಾರಿಕ ಚಿತ್ರಗಳು ಸೇರಿದಂತೆ ವಿವಿಧ ಕಲಾ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ ಎಂದು ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದ ಸಂಸ್ಥಾಪಕರು, ಸಂಚಾಲಕರೂ ಆಗಿರುವ ಶ್ರೀನಿವಾಸ್ ಹೆಚ್.ಬಿ ಹಾಗೂ ಪ್ರಾಂಶುಪಾಲ ಸುಚೇತ್ ಎಂ ತಿಳಿಸಿದ್ದಾರೆ.

ವಾರದ 2 ದಿನ ತರಗತಿ:
ವಾರದ ಪ್ರತೀ ಶನಿವಾರ ಮತ್ತು ಆದಿತ್ಯವಾರ ತರಗತಿಗಳು ನಡೆಯಲಿದೆ. ಪ್ರತೀ ಶನಿವಾರ ಮದ್ಯಾಹ್ನ ಗಂಟೆ ೨-೩೦ರಿಂದ ಸಂಜೆ ಗಂಟೆ ೫-೩೦ರ ವರೆಗೆ, ರವಿವಾರ ಬೆಳಿಗ್ಗೆ ಗಂಟೆ ೯-೩೦ರಿಂದ ಮದ್ಯಾಹ್ನ ಗಂಟೆ ೧೨-೩೦ರ ವರೆಗೆ ಹಾಗೂ ಮದ್ಯಾಹ್ನ ಗಂಟೆ ೨-೩೦ರಿಂದ ಸಂಜೆ ಗಂಟೆ ೫-೩೦ರ ವರೆಗೆ ತರಗತಿಗಳು ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಹೊಂದಿಸಿಕೊಂಡು ಯಾವುದೇ ಸಮಯದ ತರಗತಿಗಳಿಗೆ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಒಂದು ಅವಧಿಗೆ ರೂ.೧೫೦ ಶುಲ್ಕವಿದ್ದು ಸೇರಿಲಿಚ್ಚಿಸುವ ವಿದ್ಯಾರ್ಥಿಗಳು ತಮ್ಮ ಒಂದು ತಿಂಗಳ ಶುಲ್ಕ(೪ ದಿನ) ರೂ.೬೦೦ನ್ನು ಪಾವತಿಸಿ ತರಗತಿಗೆ ಹಾಜರಾಗಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೧೬೪೪೦೩೦೧೫ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ವಯಸ್ಸಿನ ಮಿತಿಯಿಲ್ಲ:
ತರಗತಿಗೆ ಪ್ರವೇಶಾತಿ ಪಡೆಯುವವರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ವಿದ್ಯಾರ್ಥಿಗಳಲ್ಲದೇ ಇತರರಿಗೂ ತರಗತಿಗೆ ಪ್ರವೇಶಾವಕಾಶವಿರುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಶ್ರೀನಿವಾಸ್ ಎಚ್.ಬಿ ಸಾರಥ್ಯ:
ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿರುವ `ಜನಮೆಚ್ಚಿದ ಶಿಕ್ಷಕ’ ಖ್ಯಾತಿಯ ಶ್ರೀನಿವಾಸ್ ಹೆಚ್.ಬಿ ಅವರು ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದ ಸಂಸ್ಥಾಪಕರಾಗಿದ್ದಾರೆ. ಪ್ರತೀ ಶನಿವಾರ ಮತ್ತು ಬಾನುವಾರ ವಿವಿಧ ಸಮಯಗಳಲ್ಲಿ ತರಗತಿ ನಡೆಯಲಿದ್ದು ವಿದ್ಯಾರ್ಥಿಗಳ ಅನುಕೂಲತೆಗೆ ತಕ್ಕಂತೆ ಸಂಸ್ಥೆಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿದೆ. ಕಲಾ ಕೌಶಲ್ಯ ತರಬೇತಿಯಲ್ಲಿ ನುರಿತ ಶಿಕ್ಷಕರಾಗಿರುವ ಸುಚೇತ್ ಎಂ ಸಂಸ್ಥೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತೀ ಶನಿವಾರ ಮತ್ತು ಬಾನುವಾರ ತರಗತಿ ನಡೆಯಲಿದ್ದು ಕಲಾಸಕ್ತರಾದ ಎಲ್ಲರಿಗೂ ನಮ್ಮ ಸಂಸ್ಥೆಯಲ್ಲಿ ಕಲಿಯಲು ಅವಕಾಶವಿದೆ ಎಂದು ಶ್ರೀನಿವಾಸ್ ಎಚ್.ಬಿ ತಿಳಿಸಿದ್ದಾರೆ.

ಆಡಳಿತ ಮಂಡಳಿ:
ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾಗಿರುವ ಡಾ.ಕೆ.ಎಸ್ ಭಟ್ ಅವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದು ಜಯಶ್ರೀ, ಶೋಭಿತಾ ಸತೀಶ್, ಪಿ.ಜಿ ಜಗನ್ನಿವಾಸ್ ರಾವ್, ಜಿ.ಕೆ ಪ್ರಸನ್ನ, ಸುರೇಶ್ ಎಸ್.ಡಿ, ಕಮಲೇಶ್ ಎಸ್.ವಿ, ನವೀನ್‌ಚಂದ್ರ ಪುನರ್ವಸು ಹಾಗೂ ಅನಿತಾ ಕೆ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ.

ಯೋಗ ತರಗತಿ:
ಇಲ್ಲಿ ಯೋಗ ತರಗತಿಗಳನ್ನೂ ನಡೆಸಲು ಉದ್ದೇಶಿಸಲಾಗಿದ್ದು ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.