HomePage_Banner
HomePage_Banner
HomePage_Banner
HomePage_Banner

ಭರಣ್ಯ ಶ್ರೀ ವೆಂಕಟ್ರಮಣ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ನಿಡ್ಪಳ್ಳಿ: ಭರಣ್ಯ ಶ್ರೀ ವೆಂಕಟರಮಣ  ದುರ್ಗಾಪರಮೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ  ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೀಮೆ ದೇವರಾದ  ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಮಧೂರು ಇಲ್ಲಿ ಮಾ. 5  ರಂದು ದೇವರ  ಪ್ರಾರ್ಥನೆಯ ಮುಖಾಂತರ ಬಿಡುಗಡೆ ಮಾಡಲಾಯಿತು.

ಅಲ್ಲದೆ ಮಾ. 4 ರಂದು ಸದ್ರಿ ದೇವಾಲಯ ಮತ್ತು ಗ್ರಾಮ ದೇವಸ್ಥಾನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಬಿಡುಗಡೆ ಮಾಡಲಾಯಿತು.  2004 ನೇ ಇಸವಿಯಲ್ಲಿ ಬ್ರಹ್ಮಕಲಶಗೊಂಡ ದೇವಾಲಯದಲ್ಲಿ ಮತ್ತೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ಈಗ ದೇವಾಲಯದ ಟ್ರಸ್ಟ್ ವತಿಯಿಂದ ನಿತ್ಯ ಪೂಜೆ,ಉತ್ಸವಗಳು ನಡೆಸಿಕೊಂಡು ಬರುತ್ತಿದೆ.  ಪುನ:ಪ್ರತಿಷ್ಟೆ,ಬ್ರಹ್ಮಕಲಶ ಕಾರ್ಯಕ್ರಮಗಳು ಮೇ ತಿಂಗಳ 15,16 ಹಾಗೂ17 ರಂದು ನಡೆಯಲಿರುವುದು. ದೇವಾಲಯ ಟ್ರಸ್ಟ್  ಊರ ಪರವೂರ ಭಕ್ತಜನರ ಸಹಕಾರದಿಂದ ನಡೆಯುವ ಈ ಕಾರ್ಯಕ್ರಮಗಳಲ್ಲಿ ಸರ್ವರಿಂದ ಸಕಲ ಪ್ರೋತ್ಸಾಹಗಳ ನಿರೀಕ್ಷೆಯಲ್ಲಿದೆ ಎಂದು ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.