HomePage_Banner
HomePage_Banner

‘ಕಾಲೇಜುಗಳಿಗೆ ರಜೆ ಘೋಷಣೆ’- ಸುಳ್ಳು ನಕಲಿ ಸುದ್ದಿ ನಂಬಬೇಡಿ: ಆಯುಕ್ತರ ಸ್ಪಷ್ಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಂಗಳೂರು: ರೋನಾ ಹೆಚ್ಚಳದ ಕಾರಣ ಮಾ.೧೫ರಿಂದ ಹದಿನೈದು ದಿನಗಳ ಕಾಲ ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಇದೊಂದು ಸುಳ್ಳು ಸುದ್ದಿ ಎಂದು ಇಲಾಖಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಈ ಸಂಬಂಧ ಸ್ಪಷ್ಟನೆ ನೀಡಿದ್ದು, ನಕಲಿ ಸುತ್ತೋಲೆಯನ್ನು ವೈರಲ್ ಮಾಡಿದವರ ವಿರುದ್ಧ ಸೈಬರ್ ಪೋಲೀಸರಿಗೆ ದೂರು ನೀಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಈ ಹಿಂದೆಯೂ ಇಂತದ್ದೇ ಕಿಡಿಗೇಡಿ ಕೃತ್ಯ ನಡೆದಿತ್ತು. ಇದೀಗ ಮತ್ತೆ ಅಂತಹದೇ ನಕಲಿ ಸುತ್ತೋಲೆ ಸೃಷ್ಟಿಸಲಾಗಿದೆ. ಸರ್ಕಾರದ ಹಳೇ ಆದೇಶ ಪ್ರತಿಯನ್ನು ಎಡಿಟ್ ಮಾಡುವ ಮೂಲಕ ಈ ನಕಲಿ ಸುತ್ತೋಲೆ ಸೃಷ್ಟಿಸಲಾಗಿದೆ ಎಂದು ಆಯುಕ್ತರು ಹೇಳಿದ್ದು, ವಿದ್ಯಾರ್ಥಿಗಳು ಯಾರೂ ಈ ಸುತ್ತೋಲೆಯಲ್ಲಿರುವ ಸುದ್ದಿಯನ್ನು ನಂಬಬಾರದೆಂದು ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.