ಕಡಬದಲ್ಲಿ ಎ.ಕೆ. ಡಿಲಕ್ಸ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಸರ್ವೀಸ್ ಅಪಾರ್ಟ್ ಮೆಂಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬದಲ್ಲಿ ಎ.ಕೆ. ಡಿಲಕ್ಸ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಸರ್ವೀಸ್ ಅಪಾರ್ಟ್ ಮೆಂಟ್ ಶುಭಾರಂಭ

ಕಡಬ: ಇಲ್ಲಿನ ಪಂಜ ರಸ್ತೆಯಲ್ಲಿರುವ ಎ.ಕೆ.ಟವರ್ಸ್ ನಲ್ಲಿ ಕಡಬದಲ್ಲಿ ಮೊತ್ತ ಮೊದಲ ಬಾರಿಗೆ ಎ.ಕೆ. ಡಿಲಕ್ಸ್ ಬೋರ್ಡಿಂಗ್ ಮತ್ತು ಲಾಡ್ಜ್ಂಗ್, ಸರ್ವೀಸ್ ಅಪಾರ್ಮೆಂಟ್ ಮಾ.18ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ಬಹು| ಅಸ್ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಕಡಬ ಆರ್.ಜೆ.ಎಂ.ನ ಖತೀಬರಾದ ಅಲ್ಹಾಜ್ ಪಿ.ಎಂ. ಇಬ್ರಾಹಿಂ ದಾರಿಮಿ, ಕಡಬ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಮಹಮ್ಮದ್ ಫಾರೂಕ್ ಹಿಮಮಿ ಸಖಾಫಿ ಉಪಸ್ಥಿತರಿದ್ದರು. ಬಳಿಕ ಲಾಡ್ಜಿಂಗ್ ನ್ನು ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ ಅತಿ ಅಗತ್ಯವಾಗಿರುವ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ನ್ನು ಆಲಿಯವರು ಮತ್ತು ಅವರ ಮಕ್ಕಳು ಸಮಾಜಕ್ಕೆ ನೀಡಿದ್ದಾರೆ, ಉದ್ಯಮದಲ್ಲಿ ಯಶಸ್ವಿಯಾಗಿರುವ ಇವರು ಕೃಷಿ ಉತ್ಪನ್ನಗಳನ್ನು ಖರೀದಿಸಿ ಕೃಷಿಕರಿಗೂ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆ,ಪ್ರಾಮಾಣಿಕ ವ್ಯವಹಾರ ದಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಡಿಂಬಾಳ ಆರ್.ಜೆ.ಎಂ. ಖತೀಬರಾದ ಸಂಶುದ್ದೀನ್ ಸಅದಿ, ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ನ ಧರ್ಮಗುರು ರೆ.ಫಾ.ರೋನಾಲ್ಡ್ ಲೋಬೋ, ಕೋಡಿಂಬಾಳ ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ಪ್ರಸಾದ್ ಕೆದಿಲಾಯ, ಮೆಸ್ಕಾಂ ಅಧಿಕಾರಿ ಸಜಿ ಕುಮಾರ್, ಜಿ.ಪ. ಸದಸ್ಯ ಹಾಜಿ ಸೈಯದ್ ಮೀರಾ ಸಾಹೇಬ್ ಅವರು ಮಾತನಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂತರ್ಿ, ಕಡಬ ಎಸ್.ಐ. ರುಕ್ಮ ನಾಕ್, ಫೆಡರಲ್ ಬ್ಯಾಂಕ್ ಮ್ಯಾನೆಜರ್ ಕೆ.ಎಂ.ಕೃಷ್ಣ ಕುಮಾರ್, ಇಂಜಿನಿಯರ್ ಸಮೀರ್, ಸೀಮಾ ಕನ್ಸ್ಟೇಕ್ಷನ್ ಪುತ್ತು ಮೇಸ್ತ್ರಿ, ಪ್ರಮುಖರಾದ ಅಬ್ದುಲ್ ರಹ್ಮಾನ್, ಆದಂ ಹಾಜಿ ನೆಟ್ಟಣ, ಮೆಸ್ಕಾಂ ಜೆ.ಇ. ಸತ್ಯನಾರಾಯಣ, ಅಬ್ಬಾಸ್ ಹಾಜಿ ನೆಟ್ಟಣ, ಕಡಬ ಆರ್.ಜೆ.ಎಂ.ನ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಹಾಜಿ ಡಿ.ಎಂ. ಆಲಿ, ಕಲಂದರ್ ಎ,ಕೆ, ಜಂಶಾದ್ ಎ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಗ್ರಾ.ಪಂ. ಸದಸ್ಯ ಅಶ್ರಫ್ ಶೇಡಿಗುಂಡಿ ಅವರು ಸ್ವಾಗತಿಸಿ, ವಂದಿಸಿದರು. ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹನೀಪ್ ಕೆ.ಎಂ. ಶೆರೀಪ್ ಎ.ಎಸ್. ಸೇರಿದಂತೆ ಹಲವಾರು ಆಗಮಿಸಿ ಶುಭ ಹಾರೈಸಿದರು. ಶೆರೀಪ್ ಕೋಡಿಂಬಾಳ ಮೊದಲಾದವರು ಸಹಕರಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.