HomePage_Banner
HomePage_Banner
HomePage_Banner
HomePage_Banner

ಕೇರಳ ವಿಧಾನಸಭಾ ಚುನಾವಣೆ: ಅನಿತಾ ಹೇಮನಾಥ ಶೆಟ್ಟಿ ಉಸ್ತುವಾರಿಯಾಗಿ ನೇಮಕ

ಪುತ್ತೂರು: ಕೇರಳ ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು, ಉದುಮ, ಕಾಂಞಂಗಾಡ್ ಮತ್ತು ತ್ರಿಕರಿಪುರ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯಾಗಿ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ನೇಮಕಗೊಂಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲರವರು ಕಾಸರಗೋಡು ಜಿಲ್ಲೆಯ ಎಐಸಿಸಿ ವೀಕ್ಷಕರನ್ನಾಗಿ ಮಾಜಿ ಸಚಿವ ಬಿ.ರಮಾನಾಥ ರೈಯವರನ್ನು ನೇಮಕಗೊಳಿಸಿದ್ದು ರಮಾನಾಥ ರೈಯವರು ಈ ವ್ಯಾಪ್ತಿಗೆ ಉಸ್ತುವಾರಿಗಳನ್ನು ನೇಮಕ ಮಾಡುತ್ತಿದ್ದಾರೆ. ಪ್ರಸ್ತುತ ನೆಟ್ಟಣಿಗೆ ಮುಡ್ನೂರು ಕ್ಷೇತ್ರದ ಜಿ.ಪಂ. ಸದಸ್ಯರೂ, ದ.ಕ.ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರೂ, ನ್ಯಾಯವಾದಿಯೂ ಆಗಿರುವ ಕಾವು ನಿವಾಸಿ ಅನಿತಾ ಹೇಮನಾಥ ಶೆಟ್ಟಿಯವರನ್ನು ಉಸ್ತುವಾರಿಯಾಗಿ ನೇಮಕಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.