HomePage_Banner
HomePage_Banner
HomePage_Banner
HomePage_Banner

ದ.ಕ ಜಿಲ್ಲೆಯಾದ್ಯಂತ ಸಾರ್ವಜನಿಕ ಜಾತ್ರೆ, ಉತ್ಸವ, ಸಭೆ-ಸಮಾರಂಭಗಳ ಮೇಲೆ ನಿಷೇಧ: ಜಿಲ್ಲಾಧಿಕಾರಿ ಆದೇಶ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಮತ್ತೆ ಉಲ್ಬಣವಾಗುತ್ತಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ಸಾರ್ವಜನಿಕ ಜಾತ್ರೆ, ಉತ್ಸವ, ಸಭೆ, ಸಮಾರಂಭ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ  ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆದೇಶಕ್ಕೆ ಸಂಬಂಧಪಟ್ಟಂತೆ ಸುತ್ತೋಲೆಯನ್ನು ಹೊರಡಿಸಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಯಮದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸದ್ಯ ಕೊರೊನಾ ಸೋಂಕು ಹರಡುವ ಭೀತಿ ಜಿಲ್ಲೆಯಲ್ಲಿ ಮತ್ತೆ ಹೆಚ್ಚಿದೆ.

ಅಲ್ಲದೇ ಕಳೆದ 15 ದಿನಗಳಿಂದ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮುಂಬರುವ ಹಬ್ಬಗಳಾದ ಯುಗಾದಿ, ಹೋಳಿ ಹಬ್ಬ, ಷಬ್-ಎ-ಬರಾತ್, ಗುಡ್‌ಫ್ರೈಡೆ ಇತ್ಯಾದಿ ಸಂದರ್ಭಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸದಂತೆ ಮತ್ತು ಧಾರ್ಮಿಕ ಉತ್ಸವಗಳೊಂದಿಗೆ ಜಾತ್ರೆ/ಮೇಳಗಳನ್ನು ನಡೆಸದಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂದಿನ ಆದೇಶದವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

About The Author

Related posts

4 Comments

 1. ರಾಜ್

  ಒಂದು ತಿಂಗಳ ಮಗುವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನ ಟೆಸ್ಟ್ ಗೆ ಒಳಪಡಿಸಿದ್ದು ಇದೀಗ ಆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ, ಇದಕ್ಕೆ ಏನಂತರಂತೆ ಜಿಲ್ಲಾ ಅಧಿಕಾರಿಯವರು??

  Reply
 2. ರಾಜ್

  ಒಂದು ತಿಂಗಳ ಮಗುವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನ ಟೆಸ್ಟ್ ಗೆ ಒಳಪಡಿಸಿದ್ದು ಇದೀಗ ಆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ, ಇದಕ್ಕೆ ಏನಂತರಂತೆ ಜಿಲ್ಲಾ ಅಧಿಕಾರಿಯವರು??

  Reply
 3. Jagadish

  ಒಲ್ಪಡ್ದ್ ಬರ್ಪೆರ್ ಮೊಕ್ಲು? ಇತ್ತೆ ಜಾತ್ರೆಮಲ್ಪಂದೆ ಬೊಕ್ಕ ಏಪ ಮಲ್ಪುನಿಗೆ? ಮೊಕ್ಲು ಪನ್ನಗನ? ಜಾತ್ರೆ ಡ್ದಾವರ ದಾಲ ಕೊರೊನಾ ಜಾಸ್ತಿ ಆಪುಜಿ.ಸುರುಟು ಪಿದಾಯಿ ಊರುಡ್ದು ಬರ್ಪಿನಾಕ್ಲೆನ್ ಉಂತಾವಡ್.ತನ್ನಾತಿಗೆ ಕೊರೊನಾ ಪೋಪುಂಡು.ಇಡಿ ವರ್ಸ ಮೊಕ್ಲೆನ ಇತ್ತಿನನೆ!ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರ ಆತ್ಂಡ್ ಮೊಕ್ಲೆನ ಕತೆ.

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.