HomePage_Banner
HomePage_Banner
HomePage_Banner
HomePage_Banner

ಲೋಕಾಯುಕ್ತರ ಆದೇಶದ ಹಿನ್ನೆಲೆ – ಬೆಟ್ಟಂಪಾಡಿ ಅನಧಿಕೃತ ಕಟ್ಟಡ ತೆರವು

ಪುತ್ತೂರು; ಲೋಕಾಯುಕ್ತ ಆದೇಶದ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲದಲ್ಲಿ ರಸ್ತೆ ಬದಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವನ್ನು ಅಧಿಕಾರಿಗಳು ಎ.1ರಂದು ತೆರವುಗೊಳಿಸಿದ್ದಾರೆ. ಅದೇ ಕಟ್ಟದ ಹಿಂಬದಿ ಭಾಗದಲ್ಲಿದ್ದ ವಿಠಲ ಶೆಟ್ಟಿಯವರಿಗೆ ಸೇರಿದ ಅಂಗಡಿಯ ವಿಸ್ತರಿಸಿದ ಜಾಗವನ್ನು ತೆರವುಗೊಳಿಸಲಾಗಿದೆ.

ಕೊರಿಂಗಿಲ ನಿವಾಸಿ ಅಬೂಬಕ್ಕರ್ ರವರು ಪುತ್ತೂರು ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಕೊರಿಂಗಿಲದ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಅಂಗಡಿ ಕಟ್ಟಡ ನಿರ್ಮಿಸಿದ್ದರು. ಈ ಕುರಿತು ಲೋಕಾಯುಕ್ತರಿಗೆ ಸಾರ್ವಜನಿಕ ದೂರು‌ ಸಲ್ಲಿಕೆಯಾಗಿತ್ತು.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡವನ್ನು ಎ.5 ರ ಒಳಗಾಗಿ ತೆರವುಗೊಳಿಸುವಂತೆ ಲೋಕಾಯುಕ್ತರು ಪುತ್ತೂರು ತಹಶಿಲ್ದಾರ್ ಗೆ ಸೂಚಿಸಿದ್ದರು. ಈ ಹಿನ್ನೆಲೆ ಕಟ್ಟಡವನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಮ್ಹಾಲಕ ಅಬೂಬಕ್ಕರ್ ರವರಿಗೆ ತಹಶೀಲ್ದಾರ್ ನೋಟೀಸ್ ನೀಡಿದ್ದರು. ಆದರೆ ಅವರು ತೆರವುಗೊಳಿಸಿರಲಿಲ್ಲ. ಹೀಗಾಗಿ ಇಂದು ಬೆಳಿಗ್ಗೆ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ, ಪಿಡಬ್ಲ್ಯೂಡಿ ಅಸಿಸ್ಟೆಂಟ್ ಇಂಜಿನಿಯರ್ ರಾಜಾರಾಮ್, ಬೆಟ್ಟಂಪಾಡಿ ಪಿಡಿಒ ಸೌಮ್ಯ, ಕಾರ್ಯದರ್ಶಿ ಬಾಬು ನಾಯ್ಕ, ಬೆಟ್ಟಂಪಾಡಿ ಮೆಸ್ಕಾಂ ಜೆ.ಇ ಪುತ್ತು, ಪಂಚಾಯತ್ ಸದಸ್ಯ ಮಹೇಶ್.ಕೆ ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಸಂಪ್ಯ ಠಾಣಾಧಿಕಾರಿ ಉದಯ ರವಿ ಮತ್ತು ಸಿಬ್ಬಂದಿಗಳು ಬಂದೊಬಸ್ತ್ ಒದಗಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.