ಉಪ್ಪಿನಂಗಡಿ: ಇಲ್ಲಿನ ಕಾರ್ತಿಕ್ ಬಾರ್ ಆಂಡ್ ರೆಸ್ಟೋರೆಂಟ್ನ ಹವಾನಿಯಂತ್ರಿತ ಫ್ಯಾಮಿಲಿ ರೂಮ್ನ ಉದ್ಘಾಟನೆ ಗುರುವಾರ ನಡೆಯಿತು. ಫ್ಯಾಮಿಲಿ ರೂಮ್ ಅನ್ನು ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ಗಣೇಶ್ ಭಟ್ ಕೆ. ಅವರು ಉಪ್ಪಿನಂಗಡಿಯಲ್ಲಿ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಿದ್ದು, ಉದ್ಯೋಗದ ಮೂಲಕ ಹಲವರಿಗೆ ಅನ್ನದಾತರಾಗಿದ್ದಾರೆ. ಇದೀಗ ಉಪ್ಪಿನಂಗಡಿಯಲ್ಲೇ ಪ್ರಪ್ರಥಮ ಬಾರಿಗೆ ಕಾರ್ತಿಕ್ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಹವಾನಿಯಂತ್ರಿತ ಫ್ಯಾಮಿಲಿ ರೂಂ ಕೂಡಾ ಉದ್ಘಾಟನೆಗೊಂಡಿದೆ. ಇವರು ತನ್ನ ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸನ್ನು ಪಡೆಯಲಿ. ಅವರ ಸಂಸ್ಥೆಗಳು ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ತಿಕ್ ಬಾರ್ ಆಂಡ್ ರೆಸ್ಟೋರೆಂಟ್ನ ಗಣೇಶ್ ಭಟ್ ಕೆ. ಮಾತನಾಡಿ, ಉಪ್ಪಿನಂಗಡಿಯ ಹೃದಯಭಾಗದಲ್ಲಿರುವ ಕಾರ್ತಿಕ್ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಸುಸಜ್ಜಿತ ಲಾಡ್ಜ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್ ಸೌಲಭ್ಯ, ಮಿನಿ ಪಾರ್ಟಿ ಹಾಲ್ನ ಸೌಲಭ್ಯವಿದ್ದು, ಇದರೊಂದಿಗೆ ಉಪ್ಪಿನಂಗಡಿಯಲ್ಲೇ ಪ್ರಪ್ರಥಮ ಬಾರಿಗೆ ಇದೀಗ ಹವಾನಿಯಂತ್ರಿತ ಫ್ಯಾಮಿಲಿ ರೂಂಗಳ ಉದ್ಘಾಟನೆಯೂ ಆಗಿದೆ.
ಈ ಸಂದರ್ಭ ಉಪ್ಪಿನಂಗಡಿ ಗಾಣಿಗರ ಸಮಾಜ ಸೇವಾ ಸಂಘಕ್ಕೆ ಗಣೇಶ್ ಭಟ್ ಕೆ. ಅವರು ೨೫ ಸಾವಿರ ರೂ.ನ ಚೆಕ್ ಅನ್ನು ಸಂಘದ ಅಧ್ಯಕ್ಷ ಹರೀಶ್ ಟೈಲರ್ ಅವರ ಮೂಲಕ ಹಸ್ತಾಂತರಿಸಿದರು. ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಉಪ್ಪಿನಂಗಡಿಯ ಕುಂಬ್ಳೆ ಶ್ರೀನಿವಾಸ ಭಟ್ ಅವರನ್ನು ಚಿನ್ನದ ಗಣಪತಿಯ ಕೆತ್ತನೆಯುಳ್ಳ ಫಲಕವನ್ನು ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷ ವಿನಾಯಕ ಪೈ, ಪ್ರಮುಖರಾದ ಉಮೇಶ್ ಶೆಣೈ ಎನ್., ವಿವೇಕಾನಂದ ಪ್ರಭು, ಹರಿ ಭಟ್ ಕೆ., ಶಾಂತಾರಾಮ ಶೆಣೈ, ಕೃಷ್ಣಭಟ್ ಕೆ., ಗುಣಕರ ಅಗ್ನಾಡಿ, ಗಣೇಶ್ ಅವರ ಪುತ್ರರಾದ ವಿಕ್ರಮ್ ಭಟ್, ಆದಿತ್ಯ ಭಟ್ ಉಪಸ್ಥಿತರಿದ್ದರು.