HomePage_Banner
HomePage_Banner
HomePage_Banner
HomePage_Banner

ದರ್ಬೆ ಎಂ.ಎಸ್. ಸ್ವಾಫ್ಟೆಕ್ ನ 7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ಇಲ್ಲಿನ ದರ್ಬೆಯ ಹರ್ಷ ಶಾಪಿಂಗ್ ಮಹಲ್ ಬಳಿಯ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಎಂ.ಎಸ್. ಸ್ವಾಫ್ಟೆಕ್ ನ ೭ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ.೧ರಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ  ಸಂಸ್ಥೆಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.


ಕಲ್ಲೆಗ ಜುಮಾ‌ಮಸ್ಜೀದ್ ನ ಖತೀಬರಾದ  ಅಬೂಬಕ್ಕರ್ ಸಿದ್ದೀಕ್ ಜಲಾಲಿರವರು ದುವಾ ನೆರವೇರಿಸಿದರು. ಮಾಲಕರ ತಂದೆ, ಜಿಲ್ಲಾಪಂಚಾಯತ್ ಕೊಳ್ನಾಡು ಕ್ಷೇತ್ರದ ಸದಸ್ಯ ಎಂ.ಎಸ್. ಮಹಮ್ಮದ್ ರವರು ಶುಭಹಾರೈಸಿದರು. ಪುತ್ತೂರು  ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ನ ವೈದ್ಯರಾದ ಡಾ. ರಾಮಚಂದ್ರ ಭಟ್, ಅಬ್ದುಲ್ ಲತೀಫ್ ಕೌಡಿಚ್ಚಾರ್ ದುಬಾಯಿ, ಯೂಸುಫ್ ಮೈದಾನಿ ಮೂಲೆ,  ಅಬ್ದುಲ್ ಗಫೂರ್ ನಿಡ್ಪಳ್ಳಿ, ಅಬ್ದುಲ್ ಲತೀಫ್, ಲತೀಫ್ ದಲ್ಕಾಜೆ, ಝೀಯಾದ್ ಕೂರ್ನಡ್ಕ, ಮೊದಲಾದವರು ಉಪಸ್ಥಿತರಿದ್ದರು.  ಸಂಸ್ಥೆಯ ಮಾಲಕರಾದ ಎಂ.ಎಸ್. ಶಫೀಕ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ರಕ್ತದಾನ ಶಿಬಿರ ಆರಂಭಗೊಂಡಿತು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.