HomePage_Banner
HomePage_Banner
HomePage_Banner
HomePage_Banner

ಕೊಪ್ಪ- ಜಿ.ಪಂ. ಅನುದಾನದ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ

ಕಾಣಿಯೂರು: ಕುಡಿಯುವ ನೀರನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು. ನಾವು ಬಳಸಿದ ನೀರನ್ನು ಹಾಗೂ ಮಳೆ ನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬೆಳಂದೂರು ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ ಹೇಳೀದರು. ಅವರು ಚಾರ್ವಾಕ ಗ್ರಾಮದ ಕೊಪ್ಪ ಎಂಬಲ್ಲಿ ಜಿ.ಪಂ. ಅನುದಾನದಿಂದ ರೂ ೧೨.೫ ಲಕ್ಷದಲ್ಲಿ ನಿರ್ಮಾಣಗೊಂಡ ಕುಡಿಯವ ನೀರಿನ ಯೋಜನೆಯ ಲೋಕಾರ್ಪಣೆಯನ್ನು ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಕೊಪ್ಪ, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮೀಯೊಳ್ಪೆ, ಗಂಗಮ್ಮ ಗುಜ್ಜರ್ಮೆ, ನಾಣಿಲ ಬಿಜೆಪಿ ಬೂತ್ ಸಮಿತಿ ವೀರಪ್ಪ ಗೌಡ ಉದ್ಲಡ್ಡ, ಕಾರ್ಯದರ್ಶಿ ಜನಾರ್ದನ ಕೆಳಗಿನಕೇರಿ, ಮಾಜಿ ಕಾರ್ಯದರ್ಶಿ ವಿಶ್ವನಾಥ ಖಂಡಿಗ, ಗ್ರಾ.ಪಂ. ಮಾಜಿ ಸದಸ್ಯರಾದ ಸುಂದರ ದೇವಸ್ಯ. ವಸಂತ ಕುಂಬಾರ ಕೊಪ್ಪ, ಜಿನ್ನಪ್ಪ ಕುಂಬಾರ ಕೊಪ್ಪ, ಲೋಕೇಶ್ ಕೊಪ್ಪ, ಜಗದೀಶ್ ಕೊಪ್ಪ, ರೋಹಿತ್ ಏರ್ಕಮೆ, ಮನೋಜ್ ಕೊಪ್ಪ, ನಾರಾಯಣ ಕೊಪ್ಪ ಮತ್ತಿತರರು ಉಪಸ್ಥಿತರಿದ್ದರು. ನಾಣಿಲ ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಜನಾರ್ದನ ಕೆಳಗಿನಕೇರಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.