HomePage_Banner
HomePage_Banner
HomePage_Banner
HomePage_Banner

ಎ.3: `ಗ್ರಾಮ ಸ್ವರಾಜ್ಯ-ಜನಾಧಿಕಾರ’ ಸಂವಾದ ಕಾರ್ಯಕ್ರಮ, ಮಾಹಿತಿ ಕಾರ್ಯಾಗಾರ

  • ಶಾಸಕ ಸಂಜೀವ ಮಠಂದೂರುರವರ ನೇತೃತ್ವದಲ್ಲಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮಾರ್ಗದರ್ಶನದಲ್ಲಿ, ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವ
  • ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಆಸಕ್ತರಿಗಾಗಿ ಕಾರ್ಯಕ್ರಮ

ಪುತ್ತೂರು: ಶಾಸಕ ಸಂಜೀವ ಮಠಂದೂರುರವರ ನೇತೃತ್ವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮಾರ್ಗದರ್ಶನದಲ್ಲಿ ಜಿ.ಪಂ, ತಾ.ಪಂ, ನಗರಸಭೆಯ ಅಧ್ಯಕ್ಷರು, ಸದಸ್ಯರು ಸಹಿತ ಎಲ್ಲಾ ಜನಪ್ರತಿನಿಧಿಗಳು ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಎಪ್ರಿಲ್ ೩ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧.೩೦ರವರೆಗೆ ಪುತ್ತೂರು ಬಂಟರ ಭವನದಲ್ಲಿ ಗ್ರಾಮ ಸ್ವರಾಜ್ಯ ಜನಾಧಿಕಾರ ಮಾಹಿತಿ ಕಾರ್ಯಾಗಾರ, ಸಂವಾದ ಮತ್ತು ಸ್ವಚ್ಛತೆ, ಮಳೆಕೊಯ್ಲು ಹಾಗೂ ಅಪರಾಧ ಮುಕ್ತ ನಮ್ಮೂರು ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ನಡೆಯಲಿದೆ.

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ಎಪಿಎಂಸಿ, ಬಂಟರ ಸಂಘ, ಬಿಲ್ಲವ ಸಂಘ, ಒಕ್ಕಲಿಗ ಗೌಡ ಸಂಘ, ಮರಾಟಿ ಸಂಘ, ಪರಿವಾರ ಬಂಟರ ಸಂಘ ಪುತ್ತೂರು ವಲಯ, ವಕೀಲರ ಸಂಘ, ಸುದಾನ ವಿದ್ಯಾಲಯ, ಶ್ರೀರಾಮಕೃಷ್ಣ ಪ್ರೌಢಶಾಲೆ, ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ತಾಲೂಕು ಪತ್ರಕರ್ತರ ಸಂಘ, ಕರ್ನಾಟಕ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಕಡಬ ತಾಲೂಕು ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಡಬ, ಸುದ್ದಿ ಬಿಡುಗಡೆ ಪತ್ರಿಕಾ ಬಳಗ, ಜೆಸಿಐ ಪುತ್ತೂರು, ರೋಟರಿ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಕಾವು, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸಿಟಿ, ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು, ಪುತ್ತೂರು ಕ್ಲಬ್ ಮರೀಲ್, ಮುಳಿಯ ಪ್ರತಿಷ್ಠಾನ, ಸಿಡ್ಕೋ, ರೋಟರಿ ಪುತ್ತೂರು ಎಲೈಟ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯಂಗ್‌ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಶನ್, ಸುದಾನ ಸ್ಪೋರ್ಟ್ಸ್ ಕ್ಲಬ್ ಪುತ್ತೂರುರವರ ಸಹಯೋಗದೊಂದಿಗೆ ಜರಗುವ ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್, ಪಂಚಾಯತ್‌ರಾಜ್ ಕಾಯ್ದೆ ತಜ್ಞರಾದ ಜನಾರ್ದನ ಮರವಂತೆ ಮತ್ತು ವಿಲ್ಫ್ರೆಡ್ ಡಿಸೋಜಾರವರಿಂದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಪಿಡಿಓಗಳಿಗೆ ಮತ್ತು ಆಸಕ್ತರಿಗೆ ಗ್ರಾಮ ಸ್ವರಾಜ್ಯ-ಜನಾಧಿಕಾರ ಮಾಹಿತಿ ಕಾರ್‍ಯಾಗಾರ-ಸಂವಾದ ನಡೆಯಲಿದೆ.

ಮಳೆಕೊಯ್ಲು- ಸ್ವಚ್ಛತಾ ಆಂದೋಲನ, ಅಪರಾಧ ಮುಕ್ತ ನಮ್ಮೂರು ಅಭಿಯಾನಕ್ಕೆ ಚಾಲನೆ-ಸಂಚಿಕೆ ಬಿಡುಗಡೆ :
ಈ ಸಂದರ್ಭದಲ್ಲಿ ಜನಾಧಿಕಾರ ವಿಶೇಷ ಸಂಚಿಕೆ ಬಿಡುಗಡೆಗೊಳ್ಳಲಿದೆ. ಅಪರಾಧ ಮುಕ್ತ ನಮ್ಮೂರು ಆಂದೋಲನದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಬಿ.ಎಂ.ರವರು ಮಾಹಿತಿ ನೀಡಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಮಳೆಕೊಯ್ಲು ಹಾಗೂ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ಟ್ರಸ್ಟ್ ಆಡಳಿತ ಟ್ರಸ್ಟಿ ಡಾ. ಯು.ಪಿ. ಶಿವಾನಂದ ತಿಳಿಸಿದ್ದಾರೆ. ಕೋವಿಡ್ ನಿಯಮಾವಳಿಯಂತೆ ಕಾರ್ಯಕ್ರಮ ನಡೆಯಲಿದ್ದು ಆಹ್ವಾನಿತರು ಮಾತ್ರ ಭಾಗವಹಿಸಲಿದ್ದಾರೆ. ಸುದ್ದಿ ಮಾಧ್ಯಮ ಸಹಭಾಗಿತ್ವದಲ್ಲಿ ಸಂಪೂರ್ಣ ಕಾರ್ಯಕ್ರಮ ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.