HomePage_Banner
HomePage_Banner
HomePage_Banner
HomePage_Banner

ಮೇಲೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ಅಡಿಕೆ, ರಬ್ಬರ್ ಬೆಂಕಿಗಾಹುತಿ | ರೂ.15 ಲಕ್ಷಕ್ಕೂ ಮಿಕ್ಕಿ ನಷ್ಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಬಜತ್ತೂರು ಗ್ರಾಮದ ಮೇಲೂರು ನಿವಾಸಿ ದುಗ್ಗಮ್ಮ ಎಂಬವರ ಕೊಟ್ಟಿಗೆಗೆ ಮಾ.೩೦ರಂದು ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿ ಜೋಡಿಸಿಡಲಾಗಿದ್ದ ಒಣ ಅಡಿಕೆ, ರಬ್ಬರ್, ಕಾಳುಮೆಣಸು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಅಂದಾಜು ೧೫ ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.

ರಾತ್ರಿ ಸುಮಾರು ೮ ಗಂಟೆಯ ವೇಳೆಗೆ ಕೊಟ್ಟಿಗೆಗೆ ಬೆಂಕಿ ತಗುಲಿದ್ದು ಕೊಟ್ಟಿಗೆಯ ಪಕ್ಕಾಸು, ರೀಪು, ಹಂಚುಗಳಿಗೆ ಬೆಂಕಿ ತಗುಲಿ ಬೆಂಕಿಯ ಕೆನ್ನಾಲಗೆಯಿಂದ ಕೊಟ್ಟಿಗೆ ಭಾಗಶ: ಸುಟ್ಟುಹೋಗಿದೆ. ಕೊಟ್ಟಿಗೆಯಲ್ಲಿ ಜೋಡಿಸಿಡಲಾಗಿದ್ದ ಅಂದಾಜು ೨೦ ಕ್ವಿಂಟಾಲ್ ಅಡಿಕೆ, ೫ ಕ್ವಿಂಟಾಲ್ ರಬ್ಬರ್ ಶೀಟ್, ೫ ಕ್ವಿಂಟಾಲ್ ಕಾಳುಮೆಣಸು ಬೆಂಕಿಗಾಹುತಿಯಾಗಿದ್ದು ಘಟನೆಯಿಂದ ಸುಮಾರು ೧೫ ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ದುಗ್ಗಮ್ಮರವರ ಪುತ್ರ ಸತೀಶ್ ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಸಂಪೂರ್ಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಬಜತ್ತೂರು ಗ್ರಾಮಕರಣಿಕ ಗೋಪಿಲಾಲ್, ಗ್ರಾಮಸಹಾಯಕ ವಸಂತ ಗೌಡರವರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಬಜತ್ತೂರು ಗ್ರಾ.ಪಂ.ಮಾಜಿ ಸದಸ್ಯ ಆನಂದ ಗೌಡ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.