ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಇದರ ನರಿಮೊಗರು ವಲಯ ಸಮಿತಿಯ ಮಹಾಸಭೆ ಹಾಗೂ ನೂತನ ಸಮಿತಿಯ ಪುನರ್ರಚನೆ ನರಿಮೊಗರು ಸಹಕಾರಿ ಸಂಘದ ರೈತ ಭವನದಲ್ಲಿ ಜರಗಿತು. ರಾಜ್ಯ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕ ರಘುನಾಥ ಬಿ., ಟೈಲರ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಪ್ರಜ್ವಲ್ ಕುಮಾರ್, ಜಿಲ್ಲಾ ಪ್ರ.ಕಾರ್ಯದರ್ಶಿ ಜಯಂತ ಉರ್ಲಾಂಡಿ, ಜಿಲ್ಲಾ ಸದಸ್ಯರಾದ ದಯಾನಂದ ಹೆಗ್ಡೆ ತಾರಿಗುಡ್ಡೆ, ಕ್ಷೇತ್ರ ಅಧ್ಯಕ್ಷರಾದ ಜಯರಾಮ ಪೂಜಾರಿ ಬಿ.ಯನ್., ಪ್ರ. ಕಾರ್ಯದರ್ಶಿ ಉಮಾ ನ್ಯಾಕ್ ಪುತ್ತೂರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಆನಂದ ಪೂಜಾರಿ ದಂಡ್ಯನಕುಕ್ಕು, ಪ್ರ. ಕಾರ್ಯದರ್ಶಿಯಾಗಿ ವಸಂತ ಗೌಡ ಶಾಂತಿಗೋಡು, ಕೋಶಾಧಿಕಾರಿಯಾಗಿ ಜತ್ತಪ್ಪ ಗೌಡ ಪುರುಷರಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ನಮ್ರತಾ ವೀರಮಂಗಲ, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಮುಗೇರಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರುಗಳಾಗಿ ಹಿರಿಯರಾದ ಜಿನ್ನಪ್ಪ ಪೂಜಾರಿ ಪಾಣಂಬು, ಅಂತಪ್ಪ ಗೌಡ ನರಿಮೊಗರು, ಕೊರಗಪ್ಪ ಪೂಜಾರಿ ಶಾಂತಿಗೋಡು, ಲೋಕೇಶ್ ಪೂಜಾರಿ ಪುರುಷರಕಟ್ಟೆ, ಗೋಪಾಲಕೃಷ್ಣ ಗೌಡ ವೀರಮಂಗಲ, ಪದ್ಮನಾಭ ಪ್ರಭು ಬೆದ್ರಾಳ, ವಸಂತಿ ಎಸ್.ರೈ ಬೊಳಿಂಜ, ಪದ್ಮರಾಜೀವ ಮುಂಡೋಡಿ, ಭಾರತಿ ರೈ ಪಂಜಳ, ಶಂಭು ಬಲ್ಯಾಯ ಮುಂಡೋಡಿರವರನ್ನು ಆಯ್ಕೆ ಮಾಡಲಾಯಿತು.
ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಪುಷ್ಪಾವತಿ ಪುರುಷರಕಟ್ಟೆ ಹಾಗೂ ಜಯಲಕ್ಷ್ಮಿ ಇವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಧನಂಜಯ ಗೌಡ ಸೇರಾಜೆ ಮಾತನಾಡಿ ಶುಭ ಹಾರೈಸಿದರು. ಪದ್ಮರಾಜೀವ ಮುಂಡೋಡಿ ವಂದಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಭು ಬಲ್ಯಾಯ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.