ಕೆಯ್ಯೂರು: ಕೆಯ್ಯೂರು ಗ್ರಾಮ ಪಂಚಾಯತಿನಲ್ಲಿ ಗ್ರಾಮ ಮಟ್ಟದ ಕೊರೋನಾ ಕಾರ್ಯಪಡೆ ಸಮಿತಿ ಸಭೆಯು ಕೆಯ್ಯೂರು ಗ್ರಾ. ಪಂ. ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ಅಧ್ಯಕ್ಷತೆಯಲ್ಲಿ ಕೆಯ್ಯೂರು ಗ್ರಾ.ಪಂ.ಸಭಾಭವನದಲ್ಲಿ ಜರುಗಿತ್ತು. ತಿಂಗಳಾಡಿ ಪ್ರಾಥಮಿಕ ವೈಧ್ಯಕೀಯ ಕಿರಿಯ ಆರೋಗ್ಯ ಸಹಾಯಕಿ ವಸಂತಿ ಮಾಹಿತಿ ನೀಡಿ ಇಡೀ ದೇಶಾದ್ಯಯಂತ ಕೊರೊನಾ ಹಾವಳಿ ತೀವ್ರವಾಗಿ ಮುಂದುವರೀಯುತ್ತಲೇ ಇದೆ ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇರುವುದರಿಂದ ನಮ್ಮ ಗ್ರಾಮದ ಪ್ರತಿ ಮನೆಯ ಸದಸ್ಯರನ್ನು ಬೇಟಿಯಾಗಿ, ಅವರಿಗೆ ಕೋವಿಡ್ ಲಸಿಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಬೇಕು. ಮತ್ತು ಗ್ರಾ.ಪಂ.ನ ವಾರ್ಡ್ ಗಳಲ್ಲಿ ಸಭೆಯನ್ನು ಕರೆದು ಹೆಚ್ಚಿನ ಮಾಹಿಯನ್ನು ನೀಡಬೇಕು ಎಂದರು. ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಆನಂದ ಪಿ. ಮಾತಾನಾಡಿ ಪ್ರತಿ ಮನೆ ಮನೆಗೆ ಬೇಟಿ ನೀಡಿ ಅವರ ಮನವೋಲಿಸುವ ಪ್ರಯತ್ನ ಮಾಡಬೇಕು, ಇದಕ್ಕೆ ವಿಧ್ಯಾರ್ಥಿಗಳೊಂದಿಗೆ ಚರ್ಚಿಸಿ ಹೆತ್ತವರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಇದಕ್ಕೆ ಎಲ್ಲರ ಸಹಾಕಾರ ಅಗತ್ಯ ಎಂದು ಹೇಳಿದರು.
ತಾ.ಪಂ ಸದಸ್ಯೆ ಭವಾನಿಚಿದಾನಂದ, ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯುರು ಮುಖ್ಯಗುರು ಬಾಬು, ಕೆಯ್ಯೂರು ಗ್ರಾ.ಪಂ. ಉಪಾದ್ಯಕ್ಷೆ ಗಿರಿಜಾ ಕಣಿಯಾರು, ಕೆಯ್ಯೂರು ಗ್ರಾ. ಪಂ.ಅಭಿವೃದ್ದಿ ಅಧಿಕಾರಿ ಸುಬ್ರಮಣ್ಯ ಕೆ.ಎಂ, ಸದಸ್ಯರಾದ ಶರತ್ ಕುಮಾರ್ ಮಾಡಾವು, ತಾರನಾಥ ಕಂಪ, ಭಟ್ಯಪ್ಪ ರೈ ದೇರ್ಲ, ಜಯಂತ ಪೂಜಾರಿ ಕೇಂಗುಡೇಲು, ಶೇಶಪ್ಪ ದೇರ್ಲ, ಮಮತಾ ರೈ ಕೆಯ್ಯೂರು, ಶುಭಲಕ್ಷ್ಮೀ ಸಣಂಗಳ, ಅಮಿತಾ ಎಚ್ ರೈ, ಸುಮಿತ್ರಾ ಪಲ್ಲತ್ತಡ್ಕ, ಮೀನಾಕ್ಷಿ ರೈ ಮಾಡಾವು, ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು, ಆರೋಗ್ಯ ಸಹಾಯಕಿಯರು, ಸ್ವ ಸಹಾಯ ಸಂಘದ ಪ್ರತಿನಿಧಿ,ಸದಸ್ಯೆಯರು, ಅಂಗನವಾಡಿ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಕೆಯ್ಯೂರು ಗ್ರಾ. ಪಂ. ಪ್ರಧಾನ ಕಾರ್ಯದರ್ಶಿ ಸುರೇಂದ್ರ ರೈ ಇಳಾಂತಜೆ ಸ್ವಾಗತಿಸಿ, ವಂದಿಸಿದರು.