ಅರಿಯಡ್ಕ : ಸಂತ ಫಿಲೋಮಿನಾ ಕಾಲೇಜು ಪುತ್ತೂರು ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಾದ ತನುಶ್ರೀ, ವರ್ಷ, ಮತ್ತು ಹರ್ಷಿತಾರವರು ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ೧೯ ಜನ ಜಾಗೃತಿ ಅಭಿಯಾನ ನಡೆಸಿದರು.
ಗ್ರಾಮ ಪಂಚಾಯತ್, ಅಂಗನವಾಡಿ ಕೇಂದ್ರ, ವಿದ್ಯಾ ಸಂಸ್ಥೆ, ಅಟೋ ರಿಕ್ಷಾ ನಿಲ್ದಾಣ, ಅಂಗಡಿಗಳಲ್ಲಿ, ಕಾಲೊನಿ ಮುಂತಾದ ಅನೇಕ ಕಡೆಗಳಲ್ಲಿ ಜಾಗೃತಿ ಅಭಿಯಾನ ಮಾಡಿದರು.