ಕಾಣಿಯೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನ ವಿಷ್ಣುಪುರ, ಪುಣ್ಚತ್ತಾರು ಇದರ ವತಿಯಿಂದ ಕಾಣಿಯೂರು ಗ್ರಾಮದ ಪುಣ್ಚತ್ತಾರು ಕರಿಮಜಲುವಿನ ವಿಷ್ಣುಪುರ ಎಂಬಲ್ಲಿ ೫೩ನೇ ವರ್ಷದ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಎ ೩ ಮತ್ತು ಎ ೪ ರಂದು ನಡೆಯಲಿದೆ. ಎ ೩ರಂದು ಬೆಳಿಗ್ಗೆ ಗಣಹೋಮ, ಶ್ರೀ ದೇವರ ಶುದ್ಧೀಕರಣ, ಸಂಜೆ ಕರಿಮಜಲು ದೈವಸ್ಥಾನದಿಂದ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿಸ್ಪರ್ಷ, ಅನ್ನಸಂತರ್ಪಣೆ, ಕುಳಿಚ್ಚಾಟ ನಡೆಯಲಿದೆ. ರಾತ್ರಿ ಜೀವನ್ ಮಂಜೇಶ್ವರ ನಿರ್ಮಾಣದ ಮಂಜೇಶ್ವರ ಯಶಸ್ವಿ ಕಲಾವಿದರಿಂದ ದೂರ ದೀವೊಡ್ಚಿ ತುಳು ಹಾಸ್ಯಮಯ ನಾಟಕ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎ ೪ರಂದು ಬೆಳಿಗ್ಗೆ ಅಗ್ನಿ ಪ್ರವೇಶ, ಮಾರಿಕಳ, ಗುಳಿಗ ಕೋಲ, ಪ್ರಸಾದ ವಿತರಣೆ, ಹರಕೆ ಒಪ್ಪಿಸುವ ಕಾರ್ಯಕ್ರಮ ನಡೆಯಲಿವೆ ಎಂದು ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ ವಿಷ್ಣುಪುರರವರು ತಿಳಿಸಿದ್ದಾರೆ.