- ಎ.3 : ಪಾಲ್ತಾಡಿಯ ಮಂಜುನಾಥನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ,ಭಜನಾಮೃತ ಜಿಲ್ಲಾ ಮಟ್ಟದ ಮುಕ್ತ ಭಜನಾ ಸ್ಪರ್ಧೆ
ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ವಿವೇಕಾನಂದ ಯುವಕ ಮಂಡಲವು ಕೊಡಮಾಡುವ ವಿವೇಕ ಯುವಪ್ರಶಸ್ತಿಗೆ ೨೦೧೯ ನೇ ಸಾಲಿನಲ್ಲಿ ಭಾಸ್ಕರ ಬಲ್ಯಾಯ ಮದ್ಲ,೨೦೨೦ನೇ ಸಾಲಿನಲ್ಲಿ ಅಣ್ಣಪ್ಪ ವಿ.ಎಂ.ಆಯ್ಕೆ ಯಾಗಿದ್ದಾರೆ.
ಭಾಸ್ಕರ ಬಲ್ಯಾಯ ಅವರು ಕಾವು ನನ್ಯ ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದಾರೆ.ಇವರ ಅವಽಯಲ್ಲಿ ಯುವಕ ಮಂಡಲ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳು ಮತ್ತು ಶಾಶ್ವತ ಯೋಜನೆಗಳನ್ನು ಮಾಡಲಾಗಿತ್ತು,ಪುತ್ತೂರಿನ ಬನ್ನೂರು ಗ್ರಾಮದ ಕರ್ಮಲ ಪ್ರಜ್ಞಾ ಆಶ್ರಮದ ಅಣ್ಣಪ್ಪ ವಿ.ಯಂ ಅವರು ಮೂಲತಃ ಕೊಡಗು ಜಿಲ್ಲೆಯವರು.ಇವರು ಬುದ್ದಿ ಮಾಂದ್ಯಮಕ್ಕಳ ಲಾಲನೆ ,ಪೋಷಣೆಯನ್ನು ಮಾಡುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಪಾಲ್ತಾಡಿ ಗ್ರಾಮದ ಮಂಜುನಾಥನಗರ ಶ್ರೀಸಿದ್ದಿ ವಿನಾಯಕ ಸೇವಾ ಸಂಘ ,ಗ್ರಾಮ ವಿಕಾಸ ಪಾಲ್ತಾಡಿ ಇದರ ಸಹಯೋಗದೊಂದಿಗೆ ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಮುಕ್ತ ಭಜನಾ ಸ್ಪರ್ದೆ ಭಜನಾಮೃತ ೨೦೨೧ಯೊಂದಿಗೆ ಎ.೩ರಂದು ಮಂಜುನಾಥನಗರ ವಿನಾಯಕ ಮೈದಾನದಲ್ಲಿ ನಡೆಯಲಿದೆ.
ಅಪರಾಹ್ನ ೨.೩೦ರಿಂದ ಭಜನಾ ಸ್ಪರ್ಧೆ ಆರಂಭವಾಗಲಿದ್ದು,ರಾತ್ರಿ ಸಭಾ ಕಾರ್ಯಕ್ರಮ ಹಾಗೂ ವಿವೇಕ ಯುವ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡುವರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುಳ್ಯ ತಾಲೂಕು ಸಂಘಚಾಲಕ ಚಂದ್ರಶೇಖರ ತಳೂರು ಅದ್ಯಕ್ಷತೆ ವಹಿಸುವರು.ಅತಿಥ್ಗಿಳಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ್ ರೈ ಸೂಡಿಮುಳ್ಳು,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಯಂತ ವೈ,ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಕರುಂಬಾರು,ಗೋಪ್ರೇಮಿ ಪದ್ಮಕುಮಾರ್ ಜೈನ್ ಪುಳಿತ್ತಡಿ ಚೆನ್ನಾವರ ಅವರಿಗೆ ಸಮ್ಮಾನ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.