HomePage_Banner
HomePage_Banner
HomePage_Banner
HomePage_Banner

ಎ.8,9: ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಧರ್ಮ ನೇಮೋತ್ಸವ ಊರಿನ ಹಬ್ಬ- ನಳಿನ್ ಕುಮಾರ್ ಕಟೀಲ್

ಪುತ್ತೂರು: ಎ. 8 ಮತ್ತು 9 ರಂದು ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮನೇಮೋತ್ಸವ ನಡೆಯಲಿದ್ದು, ಸರಕಾರದ ಕೋವೀಡ್ ನಿಯಮದ ಪ್ರಕಾರ ಸರಳ ರೀತಿಯಲ್ಲಿ ಕಾರ್‍ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು ಹೇಳಿದ್ದಾರೆ.

ಅವರು ಎ. ೧ ರಂದು ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೬೦ ವರ್ಷಗಳ ಹಿಂದೆ ಇಲ್ಲಿ ಧರ್ಮ ನೇಮೋತ್ಸವ ನಡೆದಿದ್ದು, ಇದೀಗ ಮತ್ತೊಮ್ಮೆ ಧರ್ಮ ನೇಮೋತ್ಸವಕ್ಕೆ ಸರ್ವ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ೫೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ದೈವಗಳ ಆರಾಧನೆ ಮೂಲವಾಗಿದ್ದು, ಗ್ರಾಮದಲ್ಲಿ ದೈವಗಳೇ ಪ್ರಧಾನವಾಗಿದ್ದು, ಕುಂಜಾಡಿಯಲ್ಲಿ ದೇವರ ಮಠ ಇದ್ದು, ಇಲ್ಲಿ ನಡೆಯುವ ಧರ್ಮ ನೇಮೋತ್ಸವ ಹಿಂದೂ ಸಮಾಜದ ಏಕತೆಯ ಸಂಕೇತವಾಗಿ ಮೂಡಿಬರಲಿದೆ ಎಂದು ತಿಳಿಸಿದರು.

ಧರ್ಮ ನೇಮೋತ್ಸವ
ಧರ್ಮ ನೇಮೋತ್ಸವಕ್ಕೆ ಬರುವ ಸಾರ್ವಜನಿಕರಿಗೆ ಕೋವೀಡ್ ಮುಂಜಾಗ್ರತೆಯ ಕಾರಣಕ್ಕಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಥಾರ್ಮಲ್ ಸ್ಕಾನಿಂಗ್, ಸಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದ ನಳಿನ್ ಕುಮಾರ್ ರವರು ೨೦ ಸಾವಿರ ಮಂದಿ ಕುಳಿತುಕೊಳ್ಳುವ ಪೆಂಡಲ್‌ನಲ್ಲಿ ೫ ಸಾವಿರ ಮಂದಿಗೆ ಮಾತ್ರ ಆಸನದ ವ್ಯವಸ್ಥೆಯೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುಟುಂಬದ ಹಿರಿಯರಾದ ಮಂಜುನಾಥ ರೈ, ಶಾಸಕ ಭರತ್ ಶೆಟ್ಟಿ, ಕಾರ್‍ಯಕ್ರಮದ ಸಂಚಾಲಕ ದೇವದಾಸ್ ಶೆಟ್ಟಿ, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಆಶೋಕ್ ಶೆಣೈ ಉಪಸ್ಥಿತರಿದ್ದರು. ಬಿಜೆಪಿ ಸುಳ್ಯ ಮಂಡಲ ಪ್ರದಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ವಂದಿಸಿದರು.

ಸರಳ ರೀತಿಯ ಕಾರ್‍ಯಕ್ರಮಕ್ಕೆ ಸಹಕರಿಸಿ
ಧರ್ಮನೇಮೋತ್ಸವ ಸರಳ ರೀತಿಯಲ್ಲಿ ಆಯೋಜಿಸಲಾಗಿದ್ದು, ಕಾರ್‍ಯಕ್ರಮದಲ್ಲಿ ಭಜನೆ ಕಾರ್‍ಯಕ್ರಮ ಇದೆ. ಗ್ರಾಮದ ಉತ್ಸವದ ಪರಿಕಲ್ಪನೆಯಲ್ಲಿ ಕಾರ್‍ಯಕ್ರಮ ನಡೆಯಲಿದೆ. ಕುಟುಂಬದ ಉಸ್ತುವಾರಿಯಲ್ಲಿ ನಡೆಯುವ ಈ ಕಾರ್‍ಯಕ್ರಮದಲ್ಲಿ ಊರ-ಪರವೂರ ಭಕ್ತಾಭಿಮಾನಿಗಳ ಸಹಕಾರ ದೊರೆಯುತ್ತಿದೆ.
– ನಳಿನ್ ಕುಮಾರ್ ಕಟೀಲ್
ಸಂಸದರು

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.