HomePage_Banner
HomePage_Banner
HomePage_Banner
HomePage_Banner

ಚೈತನ್ಯ ಮಿತ್ರ ವೃಂದದಿಂದ ಯುವ ಸಬಲೀಕರಣ ಯುವ ಜನ ಸೇವಾ ಕ್ರೀಡಾಧಿಕಾರಿ ಯವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಚೈತನ್ಯ ಮಿತ್ರ ವೃಂದ ರಿ ಪಡೀಲ್ ಪುತ್ತೂರು ಇದರ ವತಿಯಿಂದ ಮಾ.೩೧ರಂದು ಸೇವಾ ನಿವೃತ್ತಿ ಹೊಂದಿರುವ ಯುವ ಸಬಲೀಕರಣ ಯುವ ಜನ ಸೇವಾ ಕ್ರೀಡಾಧಿಕಾರಿ ಎ. ಜಯರಾಮ ಗೌಡ ರವರನ್ನು ಅವರ ಕಛೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪುರಂದರ ಪಡಿಲ್ ರವರು, ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎ. ಜಯರಾಮ ಗೌಡರು ತಮ್ಮ ಅಲ್ಪ ಅವಧಿಯ ಸೇವಾವಧಿಯಲ್ಲಿ ಅತ್ಯುತ್ತಮವಾದ ಸಹಕಾರ ಚೈತನ್ಯ ಮಿತ್ರ ವೃಂದ ದಿಂದ ದೊರೆತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಯುವ ಸಬಲೀಕರಣ ಯುವ ಜನ ಸೇವಾ ಕ್ರೀಡಾಧಿಕಾರಿ ಮಾಧವ ಗೌಡ ರವರು, ಜಯರಾಮ ಗೌಡರು ಬಾಲ್ಯದಿಂದ ನಿವೃತ್ತಿವರೆಗೆ ಬೆಳೆದು ಬಂದ ಹಾದಿ ಯನ್ನು ವಿವರಿಸಿದರು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪುರಂದರ ಪಡಿಲ್ ರವರು ಮಾತನಾಡಿ, ಸರ್ಕಾರಿ ಹುದ್ದೆ ಯಿಂದ ಮಾತ್ರ ತಾವು ವಿಶ್ರಾಂತಿ ಹೊಂದುತಿದ್ದೀರಿ. ಸದಾ ಚಟುವಟಿಕೆಯಿಂದ ಇರುವ ತಮ್ಮ ನಿವೃತ್ತ ಜೀವನವು, ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು. ಖಜಾಂಚಿ ಚಂದ್ರಶೇಖರ ಕೇಪುಳು ಪ್ರಸ್ತಾವನೆಗೈದು ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಬಿ ವಂದಿಸಿದರು. ಪ್ರಮುಖರಾದ ಗಣೇಶ್ ಎನ್, ಅರುಣ್ ಪಡೀಲ್, ರಮೇಶ್ ಪಡೀಲ್, ಭವಾನಿ ಶಂಕರ್, ಆನಂದ್ ದರ್ಬೆ, ರವೀಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು.
ತಮ್ಮ ಸೇವಾವಧಿಯಲ್ಲಿ ಅತ್ಯುತ್ತಮವಾದ ಸಹಕಾರ ನೀಡಿದ ಸಂಸ್ಥೆಯ ಪರವಾಗಿ ಅಧ್ಯಕ್ಷ ಪುರಂದರ ಪಡಿಲ್‌ರವರನ್ನು ಎ. ಜಯರಾಮ ಗೌಡರು ಶಾಲು ಹೊದಿಸಿ ಅಭಿನಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.